ಯಲಹಂಕ-ಅರಸೀಕೆರೆ-ಯಲಹಂಕ ನಡುವೆ ಮೆಮು ರೈಲು

ಮೆಮು ರೈಲು
ಮೆಮು ರೈಲು
Published on

ಪ್ರಮುಖ ಮುಖ್ಯಾಂಶಗಳು

  • ವಾರದಲ್ಲಿ 6 ದಿನ ಸಂಚಾರ
  • ಜು. 13 ರಂದು ತಿಪಟೂರಲ್ಲಿ ಸೋಮಣ್ಣರಿಂದ ಹಸಿರು ನಿಶಾನೆ
  • ಬಹುದಿನಗಳ ಬೇಡಿಕೆ ಈಡೇರಿಕೆ
ತುಮಕೂರು: ಬಹುದಿನಗಳ ಬೇಡಿಕೆಯಾಗಿದ್ದ ಯಲಹಂಕ-ಅರಸೀಕೆರೆ-ಯಲಹಂಕ ಮೆಮು ರೈಲು ಸೇವೆಗಳ ಪ್ರಾರಂಭಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ವಾರದಲ್ಲಿ ಭಾನುವಾರ ಹೊರತುಪಡಿಸಿ 6 ದಿನ ಮೆಮು ರೈಲು ಓಡಾಡಲಿದ್ದು ಪ್ರತಿನಿತ್ಯ ಬೆಳಗ್ಗೆ 6.45ಕ್ಕೆ ಯಲಹಂಕದಿಂದ ಹೊರಡಲಿರುವ ರೈಲು 11 ಗಂಟೆ ಹೊತ್ತಿಗೆ ಅರಸೀಕೆರೆ ತಲುಪಲಿದೆ. ಅದೇ ರೈಲು ಮಧ್ಯಾಹ್ನ 2.10ಕ್ಕೆ ಅರಸೀಕೆರೆಯಿಂದ ಹೊರಟು ಸಂಜೆ 7.15ಕ್ಕೆ ಯಲಹಂಕ ತಲುಪಲಿದೆ.
ಈ ಮೆಮು ರೈಲಿಗೆ ತಿಪಟೂರಿನಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಜು.13 ರಂದು ಸಂಜೆ 4.30ಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಉದ್ಘಾಟನಾ ವಿಶೇಷ ರೈಲು ತಿಪಟೂರು-ಯಲಹಂಕ ನಡುವೆ ಕಾರ್ಯಾಚರಣೆ ನಡೆಸಲಿದ್ದು ಅಂದು 8 ಬೋಗಿಗಳನ್ನು ಹೊಂದಿರಲಿದೆ. ತುಮಕೂರು-ಯಶವಂತಪುರ ಮೂಲಕ ಹಾದು ಯಲಹಂಕವನ್ನು ರಾತ್ರಿ 8ಕ್ಕೆ ತಲುಪಲಿದೆ.
ಜು.14 ರಿಂದ ನಿಯಮಿತವಾಗಿ ರೈಲು ಸಂಚಾರ ಆರಂಭಿಸಲಿದೆ.
ಮೆಮು ರೈಲು: ಮೆಮು ರೈಲು ಯಲಹಂಕದಿಂದ ಬೆಳಗ್ಗೆ 6.45ಕ್ಕೆ ಅದೇ ದಿನ 11ಕ್ಕೆ ಅರಸೀಕೆರೆ ಜಂಕ್ಷನ್​ ತಲುಪಲಿದೆ. ಮಾರ್ಗಮಧ್ಯೆ ಇದು ಕೊಡಿಗೇಹಳ್ಳಿ (6,52/6.53), ಯಶವಂತಪುರ (7.15/7.30), ಚಿಕ್ಕಬಾಣಾವರ (7.40/7.41), ಗೊಲ್ಲಹಳ್ಳಿ (7.51/7.52), ಬೈರನಾಯಕನಹಳ್ಳಿ (7.58/7.59), ದೊಡ್ಡಬೆಲೆ (8.04/8.05), ಮುದ್ದಲಿಂಗನಹಳ್ಳಿ (8.10/8.11), ನಿಡವಂದ (8.14/ 8.15), ಡಾಬಸಪೇಟೆ (8.18/8.19), ಹಿರೇಹಳ್ಳಿ (8.26/8.27), ಕ್ಯಾತಸಂದ್ರ (8.34/8.35), ತುಮಕೂರು (8.58/9.00) ತಲುಪಲಿದೆ.
ಅಲ್ಲಿಂದೆ ಹೆಗ್ಗರೆ (9.07/9.08), ಮಲ್ಲಸಂದ್ರ (9.12/9.13), ಗುಬ್ಬಿ (9.19/9.20), ನಿಟ್ಟೂರು (9.27/9.28), ಸಂಪಿಗೆ ರೋಡ್​ (9.36/9.37), ಅಮ್ಮಸಂದ್ರ (9.43/9.44), ಬಾಣಸಂದ್ರ (9.49/9.50), ಅರಳಗುಪ್ಪೆ (9.55/9.56), ಕರಡಿ (10.00/10.01), ಬನಶಂಕರಿ (10.06/10.07), ತಿಪಟೂರು (10.12/10.14), ಶ್ರೀ ಶಾರದಾ ನಗರ (10.18/10.19), ಹೊನ್ನವಳ್ಳಿ ರೋಡ್​ (10.27/10.28) ಮತ್ತು ಆದಿಹಳ್ಳಿ (10.33/10.34) ನಿಲ್ದಾಣಳಗಲ್ಲಿ ರೈಲು ನಿಲುಗಡೆ ಆಗಲಿದೆ.
ಮಧ್ಯಾಹ್ನ 2.10ಕ್ಕೆ ರಿರ್ಟನ್​: ಈ ಮೆಮು ರೈಲು ಮಧ್ಯಾಹ್ನ 2.10ಕ್ಕೆ ಅರಸೀಕೆರೆಯಿಂದ ಹೊರಟು ಸಂಜೆ 7.15ಕ್ಕೆ ಯಲಹಂಕ ತಲುಪಲಿದೆ. ಆದಿಹಳ್ಳಿ (2.18/2.19), ಹೊನ್ನವಳ್ಳಿ ರೋಡ್​ (2.24/2.25), ಶ್ರೀ ಶಾರದಾ ನಗರ (2.33/2.34), ತಿಪಟೂರು (2.38/2.40), ಬನಶಂಕರಿ (2.45/2.46), ಕರಡಿ (2.50/2.51), ಅರಳಗುಪ್ಪೆ (2.56/2.57), ಬಾಣಸಂದ್ರ (3.02/3.03), ಅಮ್ಮಸಂದ್ರ (3.09/3.10), ಸಂಪಿಗೆ ರೋಡ್​ (3.17/3.18), ನಿಟ್ಟೂರು (3.24/3.25), ಗುಬ್ಬಿ (3.32/3.33), ಮಲ್ಲಸಂದ್ರ (3.42/3.43), ಹೆಗ್ಗರೆ (3.49/3.50), ತುಮಕೂರು (4.38/4.40), ಕ್ಯಾತಸಂದ್ರ (4.46/4.47), ಹಿರೇಹಳ್ಳಿ (4.53/4.54), ಡಾಬಸಪೇಟೆ (5.02/5.03), ನಿಡವಂದ (5.06/5.07), ಮುದ್ದಲಿಂಗನಹಳ್ಳಿ (5.10/5.11), ದೊಡ್ಡಬೆಲೆ (5.16/5.17), ಭೈರನಾಯಕನಹಳ್ಳಿ (5.22/5.23), ಗೊಲ್ಲಹಳ್ಳಿ (5.28/5.29), ಚಿಕ್ಕಬಾಣಾವರ (5.39/5.40), ಯಶವಂತಪುರ (5.40/5.45) ಹಾಗೂ ಕೊಡಿಗೇಹಳ್ಳಿ (6.59/7.00), ಯಲಹಂಕವನ್ನು 7.15ಕ್ಕೆ ತಲುಪಲಿದೆ.
ಹೊಸದಾಗಿ ಪರಿಚಯಿಸಲಾಗುತ್ತಿರುವ ಮೆಮು ರೈಲು ಸೇವೆಯು ಯಲಹಂಕ, ಯಶವಂತಪುರ, ತುಮಕೂರು, ತಿಪಟೂರು ಮತ್ತು ಅರಸೀಕೆರೆ ನಡುವೆ ಪ್ರಯಾಣಿಸುವ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು. ಈ ಮಾರ್ಗದುದ್ದಕ್ಕು ಬರುವ ಹಲವು ಮಧ್ಯಂತರ ನಿಲ್ದಾಣಗಳಿಗೆ ಸಂಪರ್ಕವನ್ನು ಸುಧಾರಿಸಲಿದೆ. ಈ ಸೇವೆಯು ದೈನಂದಿನ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ವಿ.ಸೋಮಣ್ಣ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net