ಪ್ರತಿ ಮತಗಟ್ಟೆಯಲ್ಲಿಯೂ ಯೋಧರಂತೆ ಕೆಲಸ ಮಾಡಿ

Work like soldiers at every polling station.
Work like soldiers at every polling station.
Published on
ತುರುವೇಕೆರೆ: ಎಸ್​ಐಅರ್​ ಪ್ರಕ್ರಿಯೆಯಲ್ಲಿ ಅರ್ಹ ಮತದಾರರನ್ನು ತೆಗೆಯದಂತೆ ಕಾಂಗ್ರೆಸ್​ ಬಿಎಲ್​ಎ&2ಗಳು ಸಕ್ರಿಯವಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಬೆಮಲ್​ ಕಾಂತರಾಜು ತಿಳಿಸಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಬ್ಲಾಕ್​ ಕಾಂಗ್ರೆಸ್​ನಿಂದ ಎಸ್​ಐಆರ್​ ಪ್ರಕ್ರಿಯೆ ಜಾರಿಯ ಕುರಿತು ಹಮ್ಮಿಕೊಂಡಿದ್ದ ಬಿಎಲ್​ಎ&2 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್​ ಬಿಎಲ್​ಎ&2ಗಳು ಪ್ರತಿ ಮತಗಟ್ಟೆಯಲ್ಲಿಯೂ ಯೋಧರ ರೀತಿಯಲ್ಲಿ ಕೆಲಸ ಮಾಡಬೇಕು. ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಪ್ರತಿ ಕುಟುಂಬದ ಸದಸ್ಯರು ತಮ್ಮ ದಾಖಲಾತಿಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕಿದೆ. ಬೇರೆ ಕಡೆಗಳಲ್ಲಿ ವಾಸಮಾಡುವ ಜನರು ಅಲ್ಲಿಯೇ ದಾಖಲಾತಿಗಳನ್ನು ಮಾಡಿಕೊಳ್ಳುವುದು ಸೂಕ್ತ ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾನೂನು ಬಿಗಿಯಾಗಲಿದೆ ಎಂದು ಎಚ್ಚರಿಸಿದರು.
ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್​.ವಸಂತ್​ ಕುಮಾರ್​ ಮಾತನಾಡಿ, ಬಿಜೆಪಿ ಎಸ್​ಐಆರ್​ ಮೂಲಕ ದೇಶದಲ್ಲಿ ಕುತಂತ್ರ ಮಾಡುತ್ತಿದೆ. ದಲಿತ, ಮುಸ್ಲಿಂ, ಹಿಂದೂಳಿದ ವರ್ಗದ ಮತದಾರರು ಕಾಂಗ್ರೆಸ್​ ಪರವಾಗಿ ಇದ್ದಾರೆ ಎಂದು ಬಿಜೆಪಿ ಮುಸ್ಲಿಂ ಮತಗಳನ್ನು ತೆಗೆಯುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎದ್ದೇಳು ಕರ್ನಾಟಕ ಸಂಟನೆಯ ರಾಮಕೃಷ್ಣ ಹಾಗೂ ಇಂದ್ರಮ್ಮ ಎಸ್​ಐಆರ್​ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ಮುಖಂಡರಾದ ಸುಬ್ರಮಣಿ, ಶ್ರೀಕಂಠೇಗೌಡ, ಮಹೇಂದ್ರ, ಎನ್​.ಆರ್​.ಜಯರಾಮ್​, ನಂಜುಂಡಪ್ಪ, ಮಂಜಯ್ಯ, ವಸಂತ್​ ಕುಮಾರ್​, ಯೋಗೀಶ್​, ಮಾಳೆಕೃಷ್ಣಪ್ಪ, ವೇಣುಗೋಪಾಲ್​, ಹಟ್ಟಿಹಳ್ಳಿ ಪುಟ್ಟೇಗೌಡ, ಮಹಾಲಿಂಗಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net