ದೂರು ಸ್ವೀಕಾರ ಸಭೆಯಲ್ಲೇ ನಾಮಕರಣ !!

ಮಗುವಿಗೆ ಹೆಸರಿಟ್ಟ ಡಾ.ನಾಗಲಕ್ಷ್ಮೀ ಚೌಧರಿ
ಮಗುವಿಗೆ ಹೆಸರಿಟ್ಟ ಡಾ.ನಾಗಲಕ್ಷ್ಮೀ ಚೌಧರಿ
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಜನ ಸುನ್ವಾಯಿ
  • ಸಾರ್ವಜನಿಕರ ಕುಂದುಕೊರತೆ
  • ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ
ತುಮಕೂರು: ಕೌಟುಂಬಿಕ ಕಲಹಗಳು, ಆಸ್ತಿ ವಿವಾದಗಳು, ವಂಚನೆ ಹಾಗೂ ಮಹಿಳಾ ದೌಜ್ಯನ್ಯ ಪ್ರಕರಣಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಾರ್ವಜನಿಕ ಕುಂದುಕೊರತೆ ಸಭೆ ವೇದಿಕೆ ನಾಮಕರಣ ಮಂಟಪವಾಗಿ ಮಾರ್ಪಟ್ಟಿತು !
ತುಮಕೂರಿನ ಜಿಲ್ಲಾ ಭಾವನದಲ್ಲಿ ಗುರುವಾರ ಮಹಿಳಾ ಜನ ಸುನ್ವಾಯಿ (ಸಾರ್ವಜನಿಕರ ಕುಂದುಕೊರತೆ) ಸಭೆಗೆ 3 ತಿಂಗಳ ಮಗುವಿನೊಂದಿಗೆ ಬಂದಿದ್ದ ತುಮಕೂರು ನಗರದ ಹನುಮಂತಪುರದ ನಾಗಮಣಿ ಎಂಬುವರು ರಾಜ್ಯದಾದ್ಯಂತ ಪ್ರವಾಸ ಮಾಡಿ ಮಹಿಳೆಯರಿಗೆ ಶಕ್ತಿಯಾಗಿರುವ ಆಯೋಗದ ಅಧ್ಯಕ್ಷರಾದ ತಾವೇ ನನ್ನ ಮಗುವಿಗೆ ನಾಮಕರಣ ಮಾಡುವಂತೆ ಕೋರಿಕೆ ಇಟ್ಟರು. ಈ ಸಂದರ್ಭದಲ್ಲಿ ಭಾವುಕರಾದ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆ ಮಗುವಿಗೆ ಚಿರಾಗ್​ ಎಂದು ನಾಮಕರಣ ಮಾಡಿದ್ದು ವಿಶೇಷವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net