ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಪುರುಷರ-ಮಹಿಳೆಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಡಾ.ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ತಂಡವೇ ರನ್ನರ್ ಅಪ್ ಸಹ ಆಗಿದೆ.
ಕೊನೆಯ ಸ್ಪರ್ಧೆಯಲ್ಲಿ ಪುರುಷರ ಪ್ಲಸ್ 110 ಕೆಜಿ ಮತ್ತು ಮೈನಸ್ 110 ಕೆಜಿ ವಿಭಾಗದಲ್ಲಿ ಎಲ್ಲಾ 6 ಪದಕಗಳು ದಕ್ಷಿಣ ಕನ್ನಡದ ಪಾಲಾದವು. ಈ ಮೂಲಕ ದಕ್ಷಿಣ ಕನ್ನಡ ಕ್ರೀಡಾಪಟುಗಳು ವೇಟ್ ಲಿಫ್ಟಿಂಗ್ ಪಾರುಪತ್ಯ ಸಾಧಿಸಿದರು.
ಪ್ಲಸ್110 ಕೆಜಿ ವಿಭಾಗದಲ್ಲಿ ಪ್ರಾತ್ಯುಶ್, ರಂಜಿತ್ ಕುಮಾರ್, ಪ್ರೀತೇಶ್ ಡಿಸಿಲ್ವಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.
ಮೈನಸ್ 110 ಕೆಜಿ ವಿಭಾಗದಲ್ಲಿ ಗಿರೀಶ್ ಯು., ಸಮರ್ಥ್ ಸುತರ್ವೆ, ನಟರಾಜ ಎನ್.ಇ. ಚಿನ್ನ, ಬೆಳ್ಳಿ, ಕಂಚು ಗೆದ್ದರು.