ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ

Water released to Achukattu area
Water released to Achukattu area
Published on
ಹುಳಿಯಾರು: ಬಿಸಿಲ ಝಳಕ್ಕೆ ನೀರಿನ ಬವಣೆ ಎದುರಿಸುತ್ತಿದ್ದ ಬೋರನ ಕಣಿವೆ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಕೊನೆಗೂ ಮಂದಹಾಸ ಮೂಡಿದೆ. ಜಲಾಶಯದಿಂದ ಮುಂದಿನ 20 ದಿನಗಳ ಕಾಲ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ಹರಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಶಾಸಕ ಸಿ.ಬಿ.ಸುರೇಶ್​ ಬಾಬು ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದರು. ಜಲಾಶಯದಿಂದ ಧುಮ್ಮಿಕ್ಕುವ ನೀರನ್ನು ಕಂಡ ರೈತರು ಹಷೋರ್ದ್ಗಾರದೊಂದಿಗೆ ಬರಮಾಡಿಕೊಂಡರು.\
ಈ ವೇಳೆ ಮಾತನಾಡಿದ ಶಾಸಕ ಸುರೇಶ್​ ಬಾಬು, ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ನೀರಿಗಾಗಿ ಈ ಕ್ರಮ ಅನಿವಾರ್ಯವಾಗಿತ್ತು. ಜಲಾಶಯದಿಂದ ಇಂದಿನಿಂದ ಸತತ 20 ದಿನಗಳ ಕಾಲ ಕಾಲುವೆಗಳಿಗೆ ನೀರು ಹರಿಸಲು ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ತೀಮಾರ್ನಿಸಿದೆ. ನೀರು ಬಿಡುಗಡೆ ಮಾಡಿರುವುದು ಕೇವಲ ರೈತರ ಹಿತದೃಷ್ಟಿಯಿಂದ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ರೈತರೂ ಸ್ವಾರ್ಥ ಬಿಟ್ಟು, ಎಲ್ಲರಿಗೂ ನೀರು ಸಿಗುವಂತೆ ಸಹಕರಿಸಬೇಕು ಎಂದು ತಿಳಿಸಿದರು.
ಕಾಲುವೆ ನೀರಿಗೆ ಅಕ್ರಮವಾಗಿ ಮೋಟಾರ್​ ಅಳವಡಿಸಿ ನೀರು ಎತ್ತಬಾರದು. ಒಂದು ವೇಳೆ ಅಕ್ರಮವೆಸಗಿದರೆ ಅದು ಉಳಿದ ರೈತರಿಗೆ ಮಾಡುವ ದ್ರೋಹವಾಗಲಿದೆ ಎಂದು ಎಚ್ಚರಿಸಿದರು.
ರೈತರ ನಡುವೆ ಮಹತ್ವದ ಚರ್ಚೆ: ಬೋರನ ಕಣಿವೆ ಜಲಾಶಯದ ಬಳಿ ಶಾಸಕ ಸಿ.ಬಿ.ಸುರೇಶ್​ ಬಾಬು ಹಾಗೂ ರೈತರ ನಡುವೆ ಮಹತ್ವದ ಚರ್ಚೆಗಳು ನಡೆದವು. ಕುಡಿಯುವ ನೀರು ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ಮುಂದಿನ 20 ದಿನಗಳ ಕಾಲ ನೀರು ಬಿಡುವ ನಿರ್ಧಾರಕ್ಕೆ ರೈತರು ಸಮ್ಮತಿ ಸೂಚಿಸಿದರಾದರೂ, ವಿತರಣಾ ಕ್ರಮಗಳ ಬಗ್ಗೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಜತೆಗೆ ಹರಿಯುವ ನೀರಿಗೆ ಯಾರೂ ಮೋಟರ್​ ಅಳವಡಿಸಿ ಅಕ್ರಮವಾಗಿ ನೀರು ಎತ್ತದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ರೈತರೇ ಶಾಸಕರನ್ನು ಆಗ್ರಹಿಸಿದರು.
ಜಲಾಶಯದಿಂದ ಕೇವಲ ಕಾಲುವೆಗಳ ಮೂಲಕ ಮಾತ್ರವಲ್ಲದೆ, ಹಳ್ಳದ ಮೂಲಕವೂ ನೀರು ಹರಿಸಬೇಕು ಎಂದು ರೈತರು ಶಾಸಕರಲ್ಲಿ ಒತ್ತಾಯಿಸಿದರು. ಇದರಿಂದ ಅಂತರ್ಜಲ ವೃದ್ಧಿಯ ಜತೆಗೆ ಹೆಚ್ಚಿನ ಭಾಗಕ್ಕೆ ಅನುಕೂಲವಾಗಲಿದೆ ಎಂಬುದು ರೈತರ ವಾದವಾಗಿತ್ತು. ಇದರ ಪರಿಣಾಮ ಮೊದಲ ಹಂತದಲ್ಲೇ ಹಳ್ಳದ ಮೂಲಕ ನೀರು ಹರಿಸಲಾಯಿತು.
ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್​ ಚಿತ್ತಪ್ಪ, ಕಂದಾಯ ಇಲಾಖೆಯ ಆರ್​ಐ ಶ್ರೀನಿವಾಸ್​, ಪಿಡಿಒ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಅಶ್ವಿನಿ, ಅಚ್ಚುಕಟ್ಟು ಪ್ರದೇಶದ ಸಂಘದ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್​, ಸೊಸೈಟಿ ಅಧ್ಯಕ್ಷ ಮದಕರಿ, ತಾಪಂ ಮಾಜಿ ಸದಸ್ಯೆ ಕವಿತಾ, ಗ್ರಾಪಂ ಮಾಜಿ ಸದಸ್ಯರುಗಳಾದ ರಘು, ಗಿರೀಶ್​, ಗೋವಿಂದಪ್ಪ, ಮಲ್ಲಿಕಣ್ಣ, ಮಲ್ಲೇಶಣ್ಣ, ಮಂಜಣ್ಣ, ಶಿವಣ್ಣ, ಈರಣ್ಣ, ಹನುಂತರಾಯಪ್ಪ, ಕಾಂತಣ್ಣ, ದಶರತ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net