ತುಮಕೂರು ಗಾಜಿನಮನೆಯಲ್ಲಿ ಪುಸ್ತಕ ಸಂತೆ

ಪುಸ್ತಕ ಸಂತೆ
ಪುಸ್ತಕ ಸಂತೆ
Published on

ಪ್ರಮುಖ ಮುಖ್ಯಾಂಶಗಳು

  • 3 ದಿನಗಳ ಸಾಹಿತ್ಯ ಸಂತೆ
  • ತೆರೆದುಕೊಳ್ಳಲಿದೆ ಕನ್ನಡ ಸಾಹಿತ್ಯ ಲೋಕ
  • 60 ಮಳಿಗೆಗಳು 150ಕ್ಕು ಹೆಚ್ಚು ಲೇಖಕರು ಭಾಗಿ
ತುಮಕೂರು: ಪುಸ್ತಕ ಸಂತೆ ಕನ್ನಡ ಹಬ್ಬಕ್ಕೆ ತುಮಕೂರು ನಗರ ಸಜ್ಜಾಗುತ್ತಿದೆ. "ವೀರಲೋಕ ಪುಸ್ತಕ ಸಂತೆ' ಜೂ. 26 ರಿಂದ28ರವರೆಗೆ 3 ದಿನಗಳು ನಗರದ ಅಮಾನಿಕೆರೆ ಅಂಗಳದ ಗಾಜಿನಮನೆಯಲ್ಲಿ ನಡೆಯಲಿದೆ.
26ರಂದು ಬೆಳಗ್ಗೆ 10ಕ್ಕೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳ ಸಾನಿಧ್ಯದಲ್ಲಿ ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಸಮಾರಂಭವನ್ನು ಉದ್ಘಾಟಿಸುವರು. ಸಾಂಸತಿಕ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಭುವನೇಶ್ವರಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಿದ್ದು ಪುಸ್ತಕ ಸಂತೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಚಾಲನೆ ನೀಡುವರು. ವಾಣಿಜ್ಯ ಮಳಿಗೆಗಳನ್ನು ಡಿಸಿಎಂ ಡಾ. ಜಿ. ಪರಮೇಶ್ವರ್​ ಉದ್ಘಾಟಿಸುವರು. ಶಾಸಕ ಜಿ.ಬಿ. ಜ್ಯೋತಿಗಣೇಶ್​ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಬಿ.ವಿ.ಅಶ್ವಿಜ, ಕಸಾಪ ಅಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ, ವೀರಕಪುತ್ರ ಶ್ರೀನಿವಾಸ್​ ಉಪಸ್ಥಿತರಿರುವರು.
60 ಪುಸ್ತಕ ಮಳಿಗೆಗಳು: ಓದುಗರ ಜ್ಞಾನದ ಹಸಿವನ್ನು ನೀಗಿಸಲು ಈ ಬಾರಿ 60ಕ್ಕು ಹೆಚ್ಚು ಪುಸ್ತಕ ಮಳಿಗೆಗಳು ಹಾಗೂ 40ಕ್ಕು ಹೆಚ್ಚು ವೈವಿಧ್ಯಮಯ ವಾಣಿಜ್ಯ ಮಳಿಗೆಗಳು ಇರಲಿವೆ. ಇದರ ಜತೆಗೆ ಫುಡ್​ ಕೋರ್ಟ್​, ಮಕ್ಕಳಿಗೆ ಆಟದ ಮೈದಾನ ವ್ಯವಸ್ಥೆ ಮಾಡಲಾಗಿದೆ ಎಂದು ಸಂಟಕ ಆರ್​.ಕೆ. ಶ್ರೀನಿವಾಸ್​ ತಿಳಿಸಿದರು.
ಮೂರು ದಿನಗಳ ಕಾಲ ಒಟ್ಟು 15 ವೈವಿಧ್ಯಮಯ ವಿಚಾರ ಗೋಷ್ಠಿಗಳು ನಡೆಯಲಿದ್ದು ನಾಡಿನ ಲೇಖಕರು, ಸಂಶೋಧಕರು ಚರ್ಚಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್​.ಎನ್​. ಮುಕುಂದರಾಜ್​ ಗೋಷ್ಠಿಗಳಿಗೆ ಚಾಲನೆ ನೀಡುವರು. ಕನ್ನಡ ಪುಸ್ತಕೋದ್ಯಮ ಗೋಷ್ಠಿ, ತುಮಕೂರು ಜಿಲ್ಲಾ ಸಾಹಿತ್ಯ ಪರಂಪರೆ, ಕನ್ನಡ ನೆಲದಲ್ಲಿ ಭಾಷಾ ಅಸ್ಮಿತೆ, ಪುಸ್ತಕ ಸಂಸತಿ; ಅಂದು-ಇಂದು, ಸಾಹಿತ್ಯ ಸಿನಿಮಾ ಮತ್ತು ಸಂಸತಿ, ಶಿಕ್ಷಣ ಮತ್ತು ಮಕ್ಕಳು ಪ್ರಮುಖ ಗೋಷ್ಠಿಗಳು ನಡೆಯಲಿವೆ. ನಾಡಿನ ಮೂಲೆಮೂಲೆಯಿಂದ 150ಕ್ಕೂ ಹೆಚ್ಚು ಪ್ರಸಿದ್ಧ ಲೇಖಕರು ಈ ಸಂತೆಗೆ ಆಗಮಿಸುತ್ತಿದ್ದು, ಒಟ್ಟು 30 ನೂತನ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಪ್ರತಿದಿನ ಸಂಜೆ 6ರ ನಂತರ ಸಾಂಸ್ಕೃತಿಕ ಹಬ್ಬ ಏರ್ಪಡಿಸಲಾಗಿದೆ.
ಸಮಾರೋಪ ಸಮಾರಂಭ
ಜೂ.28ರ ಸಂಜೆ 6ಕ್ಕೆ ಪುಸ್ತಕ ಸಂತೆಗೆ ಅರ್ಥಪೂರ್ಣ ತೆರೆ ಬೀಳಲಿದೆ. ಶ್ರೀ ರಾಮಕೃಷ್ಣ ಆಶ್ರಮದ ವೀರೇಶಾನಂದ ಸ್ವಾಮೀಜಿ ಸಮಾರೋಪ ಸಮಾರಂಭದ ಸಾನಿಧ್ಯವಹಿಸುವರು. ಮಾಜಿ ಸಚಿವ ಕೆ.ಎನ್​.ರಾಜಣ್ಣ ಬಹುಮಾನ ವಿತರಣೆ ಮಾಡಲಿದ್ದು, ಸಂಸತ ವಿವಿ ವಿಶ್ವಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್​ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಅಗ್ರಹಾರಕೃಷ್ಣಮೂರ್ತಿ, ಶಾಸಕರುಗಳಾದ ಬಿ.ಸುರೇಶ್​ಗೌಡ, ಸಿ. ಬಿ.ಸುರೇಶ್​ಬಾಬು, ಕೆ.ಷಡಕ್ಷರಿ, ಎಂ.ಟಿ.ಕೃಷ್ಣಪ್ಪ, ಡಾ.ಎಚ್​.ಡಿ.ರಂಗನಾಥ್​ ಮತ್ತಿತರರು ಉಪಸ್ಥಿತರಿರುವರು.
ಚೌಕಾಬಾರ ಬಿಡುಗಡೆ
ಸುನಿಲ್​ ಬಾರ್ಕೂರ್​ ಅವರ ವಿಜ್ಞಾನ,-ವಾಣಿಜ್ಯ-ವಿಚಾರ ಚಾರಣ ಚೌಕಾಬಾರ ಪುಸ್ತಕ ಭಾನುವಾರ "ವೀರಲೋಕ ಪುಸ್ತಕ ಸಂತೆ'ಯಲ್ಲಿ ಬಿಡುಗಡೆಯಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net