ಪಠ್ಯಪುಸ್ತಕಗಳಲ್ಲಿ ವಚನಕಣ್ಮರೆ

ತುಮಕೂರು ತಾಲೂಕು ಹರಳೂರಿನಲ್ಲಿ ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ಮುಂಗಾರಿನಲ್ಲಿ ಬಲವಂತರಾವ್​ ಪಾಟೀಲ್​, ಎಸ್​.ಪಿನಾಕಪಾಣಿ, ಡಾ.ಮಹೇಶ್​ ಬೆಲ್ಲದ್​,  ಬಿ.ಎಸ್​. ಶಿವಪ್ರಕಾಶ್​, ದೇವೇಂದ್ರಕುಮಾರ್​ ಪತ್ತಾರ್​, ಮೀನಾ ಮೇಟಿ, ಟಿ.ಎಂ.ಜಾನಕಿ, ಡಾ.ಚೇತನಾಮುಧೋಳ್​, ಸರ್ವಾಣಿ, ಬಸವರಾಜ ಅಜ್ಜಪ್ಪ, ಜಯ ಮತ್ತಿತರರು ಉಪಸ್ಥಿತರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಚನಜ್ಯೋತಿ ಬಳಗದ ವಚನ ಮುಂಗಾರು
  • ವಚನಗಳು ಎಲ್ಲರಿಗೂ ದಾರಿದೀಪ
  • ಹರಳೂರಿನಲ್ಲಿ ಕಾರ್ಯಕ್ರಮ
ತುಮಕೂರು: ಬದಕಿಗೆ ಮಾರ್ಗದರ್ಶನೀಯವಾದ ಸೂತ್ರಗಳನ್ನು ನೀಡಿದ ವಚನಗಳು ಎಲ್ಲರಿಗೂ ದಾರಿದೀಪವಾಗಿದ್ದು ವಿದ್ಯಾರ್ಥಿಗಳಿಗೆ ವಚನಗಳ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್​ ಪಾಟೀಲ್​ ಹೇಳಿದರು.
ತಾಲೂಕಿನ ಹರಳೂರಿನಲ್ಲಿ ವಚನಜ್ಯೋತಿ ಬಳಗವು ಆಯೋಜಿಸಿದ್ದ ವಚನ ಮುಂಗಾರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು , ದುರಂತವೆಂದರೆ ಇಂದಿನ ಪಠ್ಯಪುಸ್ತಕಗಳಲ್ಲಿ ವಚನಗಳು ಕಣ್ಮರೆಯಾಗುತ್ತಿರುವುದು ಎಂದು ವಿಷಾದಿಸಿದರು.
ಇಂತಹ ವಿಷಮ ಸಂದರ್ಭದಲ್ಲಿ ವಚನಜ್ಯೋತಿ ಬಳಗ ವಿದ್ಯಾರ್ಥಿಗಳಲ್ಲಿ ವಚನ ಬಿತ್ತನೆ ನಡೆಸುತ್ತಿರುವುದು ಸ್ವಾಗತಾರ್ಹ. ಮಕ್ಕಳ ವಚನ ಮೇಳದಂತಹ ಸಾರ್ಥಕ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಚನ ಸಂಸತಿ ಪರಿಚಯಿಸುತ್ತಿರುವ ವಚನಜ್ಯೋತಿ ಬಳಗದ ಕಾರ್ಯ ಅನುಕರಣೀಯ ಎಂದರು.
ಆನ್​ಲೈನ್​ ಇನ್ಸ್​ಟ್ರುಮೆಂಟ್​ ಸಹ ಪಾಲುದಾರ ಡಾ.ಮಹೇಶ್​ ಬೆಲ್ಲದ್​ ಅಧ್ಯಕ್ಷತೆವಹಿಸಿದ್ದರು.
ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್​. ಪಿನಾಕಪಾಣಿ -ಆಶಯನುಡಿಗಳನ್ನಾಡಿದರು.
ನಿವೃತ್ತ ಐಎಎಸ್​ ಅಧಿಕಾರಿ ಜಯವಿಭವಸ್ವಾಮಿ, ನಿವೃತ್ತ ಸಹಾಯಕ ನಿರ್ದೇಶಕ ಬಿ.ಎಸ್​.ಶಿವಪ್ರಕಾಶ್​, ಹರಳೂರು ಗ್ರಾಪಂ ಮಾಜಿ ಅಧ್ಯಕ್ಷ ಎಚ್​.ಕೆ.ಶಿವಪ್ರಸಾದ್​, ಗಂಗಾಧರ್​, ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಸಂಚಾಲಕ ರುದ್ರೇಶ ಇಸುವನಹಳ್ಳಿ, ಮುಖ್ಯಶಿಕ್ಷಕ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net