ನೀರನ್ನು ಮಿತವಾಗಿ ಬಳಸಿ

Use water sparingly.
Use water sparingly.
Published on
ಎಂ.ಎನ್​.ಕೋಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಲ ಜೀವನ್​ ಮೀಷನ್​ ಯೋಜನೆ ರೈತರಿಗೆ ಅನುಕೂಲವಾಗಿದೆ ಎಂದು ಪಿಡಿಒ ರಂಗರಾಜು ತಿಳಿಸಿದರು.
ಗುಬ್ಬಿ ತಾಲೂಕಿನ ಎನ್​.ಹೊಸಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಲ ಜೀವನ್​ ಮೀಷನ್​ ಮನೆ&ಮನೆ ನಲ್ಲಿ ಸಂಪರ್ಕ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ರೈತರು ನೀರನ್ನು ಮಿತವಾಗಿ ಬಳಸಬೇಕು. ನೀರನ್ನು ಪೋಲು ಮಾಡಬಾರದು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ರೈತರಿಗೆ ಹಾಗೂ ಮಹಿಳೆಯರಿಗೆ ಜಲ ಜೀವನ್​ ಮೀಷನ್​ ಯೋಜನೆ ಅನಕೂಲವಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಲ್ಲಿಗಳನ್ನು ಅಳವಡಿಸಿದ್ದು, ಪ್ರತಿ ಮನೆಗಳಿಗೂ ನೀರನ್ನು ಪೂರೈಸಲಾಗುತ್ತಿದೆ. ಮಹಿಳೆಯರು ನೀರನ್ನು ವ್ಯರ್ಥ ಮಾಡದೆ ಅವಶ್ಯಕತೆ ಇರುವಷ್ಟು ನೀರನ್ನ ಬಳಸಿ ಎಂದರು.
ಈ ಹಿಂದೆ ರೈತರು ಬಾವಿ, ಹಳ್ಳ, ಬೋರ್​ಗಳಲ್ಲಿ ನೀರು ತರುತ್ತಿದ್ದರು. ಇದನ್ನ ಮನಗಂಡ ಕೇಂದ್ರ ಸರ್ಕಾರ ಜಲಜೀವನ್​ ಯೋಜನೆ ಮೂಲಕ ಮನೆ ಮನೆಗೆ ನಲ್ಲಿ ಸಂಪರ್ಕ ಮಾಡಿ ಪ್ರತಿ ಮನೆ ಮುಂದೆ ನೀರು ಬರುವಂತೆ ಮಾಡಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net