ಬಡ್ತಿಗೆ ಆಗ್ರಹಿಸಿ ವಿವಿ ಪ್ರಾಧ್ಯಾಪಕರಿಂದ ತರಗತಿ ಭಹಿಷ್ಕಾರ?

ತುಮಕೂರು ವಿಶ್ವವಿದ್ಯಾಲಯ
ತುಮಕೂರು ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ಸಿಎಎಸ್​ ಬಡ್ತಿ ಅನುಮೋದನೆಗೆ ಹೊಸ ಪಟ್ಟು
  • ಆಡಳಿತದ ಹಳಿ ತಪ್ಪಿದ ತುಮಕೂರು ವಿವಿ
  • ಕುಲಪತಿ ವಿರುದ್ಧ ಸಿಂಡಿಕೇಟ್​ ಸದಸ್ಯರ ಸಮರ
  • ಶೈಕ್ಷಣಿಕ ಚಟುವಟಿಕೆ ಮರೆತ ವಿಶ್ವವಿದ್ಯಾಲಯ
ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಆಡಳಿತ ಹಳಿ ತಪ್ಪಿದೆ, ಸಿಂಡಿಕೇಟ್​ ಸದಸ್ಯರು ಹಾಗೂ ಆಡಳಿತ ಮಂಡಳಿ ನಡುವೆ ಆರಂಭವಾಗಿರುವ ಮುಸುಕಿನ ಗುದ್ದಾಟದಿಂದ ಪ್ರಾಧ್ಯಾಪಕರು ಕಂಗಾಲಾಗಿದ್ದಾರೆ. ಕಳೆದ ಎರಡು ಸಿಂಡಿಕೇಟ್​ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಮುಂದೂಡಿಕೆ ಆಗಿರುವುದು ಅನುಮಾನ ಹುಟ್ಟುಹಾಕಿದೆ.
ವಿವಿಯಲ್ಲಿ ವಿದ್ಯಾರ್ಥಿ, ಬೋಧಕ ಸಿಬ್ಬಂದಿಗಳ ಹಿತರಕ್ಷಣೆಗೆ ಸಂಬಂಧಿಸಿದ ಯಾವುದೇ ವಿಷಯಗಳು ಚರ್ಚೆಯಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಪ್ರಾಧ್ಯಾಪಕರು ತರಗತಿ ಭಹಿಷ್ಕರಿಸಿ ಪ್ರತಿಭಟನೆ ನಡೆಸಲು ಮುಂದಾಗಿರುವುದು ಶೈಕ್ಷಣಿಕ ವಲಯದಲ್ಲಿ ಆಘಾತಕಾರಿ ಎನ್ನಿಸಿದ್ದು ವಿದ್ಯಾರ್ಥಿ ಹಾಗೂ ಸಾರ್ವಜನಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.
ವಿವಿ ಅಧ್ಯಾಪಕರು ವಿವಿ ಆಡಳಿತ ಮಂಡಳಿ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ಏ.8ರಂದು ತರಗತಿ ಭಹಿಷ್ಕರಿಸಲು ಸಿದ್ಧತೆ ನಡೆಸಿರುವುದು ಆಘಾತದ ಜತೆಗೆ ಶೈಕ್ಷಣಿಕವಲಯದಲ್ಲಿ ಆತಂಕ ಮೂಡಿಸಿದೆ. ಅರ್ಹ ಅಧ್ಯಾಪಕರಿಗೆ ವೃತ್ತಿ ಪ್ರಗತಿ ಯೋಜನೆ (ಸಿಎಎಸ್​) ಅಡಿಯಲ್ಲಿ ಬಡ್ತಿ ಅದೇಶಗಳ ನೀಡಿಕೆಯಲ್ಲಿ ನಡೆಯುತ್ತಿರುವ ಅತಿಯಾದ ವಿಳಂಬ ವಿವಿಯಲ್ಲಿ ಸಂರ್ಷ ತಂದೊಡ್ಡಿದೆ.
ವಿವಿ ಅಧ್ಯಾಪಕರ ಸಂ ಸೋಮವಾರ(ಏ.6) ರಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರಿಗೆ ಮನವಿ ಸಲ್ಲಿಸಲಿದ್ದು ಏ.8ರಂದು ತರಗತಿ ಭಹಿಷ್ಕರಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಲಿದ್ದಾರೆ. ಪ್ರಾಧ್ಯಾಪಕರು ತರಗತಿಗಳನ್ನು ಭಹಿಷ್ಕರಿಸಿ ಪ್ರತಿಭಟನೆಗೆ ಮುಂದಾಗಿರುವುದು ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲು ಎನ್ನಿಸಿದ್ದು ಕಪು$್ಪಚುಕ್ಕೆಯಾಗಲಿದೆ.
ಪ್ರಾಧ್ಯಾಪಕರು ನಿಯಮಾನುಸಾರ ಸಿಎಎಸ್​ ಅರ್ಜಿ ಸಲ್ಲಿಸಿ, ಶಿಾರಸು ಮಾಡಿದ 30 ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದ್ದರೂ ಅರ್ಜಿಗಳ ಅನುಮೋದನೆ ಬಾಕಿ ಉಳಿಸಿಕೊಂಡಿರುವುದು ಪ್ರಾಧ್ಯಾಪಕರಲ್ಲಿ ಕಳವಳ ಸೃಷ್ಠಿಸಿದೆ. ಇತ್ತೀಚಿನ ಹಲವು ಸಿಂಡಿಕೇಟ್​ ಸಭೆಗಳಲ್ಲಿ ವಿದ್ಯಾರ್ಥಿ, ಬೋಧಕ ಸಿಬ್ಬಂದಿಗಳ ಹಿತರಕ್ಷಣೆಗೆ ಸಂಬಂಧಿಸಿದ ಯಾವುದೇ ವಿಷಯಗಳ ಕುರಿತು ಚರ್ಚೆ ಹಾಗೂ ಅನುಮೋದನೆಗಳು ಸಿಗದೇ ಇರುವುದು ವಿಶ್ವವಿದ್ಯಾನಿಲಯದ ಬೆಳವಣಿಗೆಗೆ ಪೂರಕವಾಗಿಲ್ಲ ಎಂದು ಪ್ರಾಧ್ಯಾಪಕರ ಸಂ ಕುಲಪತಿಗೆ ಪತ್ರ ಬರೆದಿದೆ.
ವಿವಿ ನೇಮಕಾತಿ ಸಂದರ್ಭದಲ್ಲಿ ಪದವಿ ಕಾಲೇಜು ಖಾಲಿ ಹುದ್ದೆಗೆ ನೇಮಕವಾಗಿರುವ ಸಹಾಯಕ ಪ್ರಾಧ್ಯಾಪಕರು ಸ್ನಾತಕೋತ್ತರ ವಿಭಾಗದಲ್ಲಿ ಠಿಕಾಣಿ ಹೂಡಿರುವುದು ಪಿಜಿಗೆ ನೇಮಕವಾಗಿರುವ ಪ್ರಾಧ್ಯಾಪಕರ ಕಣ್ಣು ಕೆಂಪಗಾಗಿಸಿದೆ. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿ ಯುಜಿಗೆ ನೇಮಕವಾದ ಪ್ರಾಧ್ಯಾಪಕರನ್ನು ಕೂರಿಸಿದ್ದು ಪಿಜಿಗೆ ನೇಮಕವಾದವರನ್ನು ಸುಮ್ಮನೆ ಕೂರಿಸಲಾಗಿರುವುದು ವಿವಿಯಲ್ಲಿ ವಿವಾದ ಭುಗಿಲೇಳಲು ಕಾರಣವಾಗಿದೆ.
ವಿಭಾಗದ ಮುಖ್ಯಸ್ಥರ ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸಿಲ್ಲ, ಪಕ್ಷಪಾತ ನಡೆಸಲಾಗಿದೆ ಎಂದು ಆರೋಪಿಸಿರುವ ಕೆಲವು ಪ್ರಾಧ್ಯಾಪಕರು ವಿವಿ ಆಡಳಿತದ ವಿರುದ್ಧ ಸರ್ಕಾರಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ. ಸಾಕಷ್ಟು ಅವಾಂತರಗಳಲ್ಲಿಯೇ ಮುಳುಗಿರುವ ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟ್​ ಸದಸ್ಯರು ಹಾಗೂ ಆಡಳಿತ ಮಂಡಳಿಯ ಅಗ್ಗಜಗ್ಗಾಟದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಗ್ರಹಣ ಬಡಿದಿದೆ.
ಬಾಕಿ ಇರುವ ಸಿಎಎಸ್​ ಬಡ್ತಿ ಅನುಮೋದನೆ ಮಾಡಿ ಆದೇಶ ನೀಡುವುದು ಹಾಗೂ ವಿಳಂಬಕ್ಕೆ ಆಡಳಿತ ಕಾರಣವಾಗಿದ್ದು ಬಡ್ತಿಯ ಪ್ರಯೋಜನ ಆಯಾ ಅರ್ಹತಾ ದಿನಾಂಕದಿಂದ ನೀಡುವಂತೆ ಆಗ್ರಹಿಸಿ ಲಿಖಿತವಾಗಿ ನಿರಂತರ ಮನವಿಗಳ ನಂತರವೂ ಸೂಕ್ತ ಕ್ರಮದ ಪರಿಹಾರ ಇದುವರೆಗೂ ಸಿಗದೇ ಇರುವುದರಿಂದ, ಅಧ್ಯಾಪಕರ ಸಂಘ ಕುಲಪತಿಗಳ ಆಡಳಿತ ಕಚೇರಿ ಮುಂದೆ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಪ್ರತಿಭಟನೆ ಮೂಲಕ ತನ್ನ ಕಳವಳವನ್ನು ವ್ಯಕ್ತಪಡಿಸುವುದು ಅನಿವಾರ್ಯವಾಗಿದೆ ಹಾಗಾಗಿ, ಏ. 8ರಂದು ಬೆಳಗ್ಗೆ 10ರಿಂದ ತರಗತಿ ಭಹಿಷ್ಕರಿಸಿ, ಸಭ್ಯತೆ ಮತ್ತು ಸಾಂಸ್ಥಿಕ ಶಿಸ್ತಿನ ನಿಯಮಗಳನ್ನು ಪಾಲಿಸಿಕೊಂಡು ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು.
ಅಧ್ಯಾಪಕರ ಸಂ
ತುಮಕೂರು ವಿವಿ
ಬೋಧಕರ ಪದೋನ್ನತಿಗೆ ಸಿಂಡಿಕೇಟ್​ ವಿರೋಧವಿಲ್ಲ?
ಬೋಧಕ ಹುದ್ದೆಗಳಿಗೆ ಪದೋನ್ನತಿ ಕೊಡುವ ವಿಷಯದಲ್ಲಿ ನಮ್ಮ ವಿರೋಧವಿಲ್ಲ ಆದರೆ, ಬೋಧಕೇತರ ಹುದ್ದೆಗಳ ಪದೋನ್ನತಿಯಲ್ಲಿ ಕರ್ತವಲೋಪದ ಆರೋಪದಲ್ಲಿ ತನಿಖೆ ಎದುರಿಸುತ್ತಿರುವ ಕುಲಸಚಿವೆ ಹಾಗೂ ಕುಲಪತಿ ಈಗ ಬೋಧಕ ಹುದ್ದೆಗಳ ಪದೋನ್ನತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು ಎಂಬುದು ನಮ್ಮ ವಾದವಾಗಿದೆ ಎಂದು ತುಮಕೂರು ವಿವಿ ಸಿಂಡಿಕೇಟ್​ ಸದಸ್ಯರು "ವಿಜಯವಾಣಿ'ಗೆ ತಿಳಿಸಿದ್ದಾರೆ.
ರಾಜ್ಯಪಾಲರು ನೇಮಿಸಿರುವ ಏಕಸದಸ್ಯ ತನಿಖಾ ಆಯೋಗದ ವಿಚಾರಣೆ ಆರಂಭವಾದ ಕೂಡಲೇ ನಡೆದ ಸಿಂಡಿಕೇಟ್​ ಸಭೆಗೆ ಕುಲಸಚಿವೆ ನಹಿದಾಜಮ್​ಜಮ್​ ಗೈರು ಹಾಜರಾಗಿದ್ದರು. ಕುಲಪತಿ ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ನಿಯಮ ಉಲ್ಲಂಘಿಸಿ ಹಿರಿಯ ಡೀನ್​ ಅವರನ್ನು ಕುಲಸಚಿವರನ್ನಾಗಿ ನೇಮೇಕ ಸೇರಿದಂತೆ ಸಾಕಷ್ಟು ನಿರ್ಧಾರ ತೆಗೆದುಕೊಂಡು ನಂತರ ಸಿಂಡಿಕೇಟ್​ಗೆ ತಿಳಿಸಿದ್ದಾರೆ ಹಾಗಾಗಿ, ಸಾಕಷ್ಟು ಅನುಮಾಗಳಿದ್ದು ಅವೆಲ್ಲವೂ ಪರಿಹಾರವಾದರಷ್ಟೇ ಬೋಧಕರ ಪದೋನ್ನತಿ ಎಂದು ವಾದ ಮುಂದಿಟ್ಟಿರುವುದು ವಿವಿಯಲ್ಲಿ ಅಗ್ಗಜಗ್ಗಾಟಕ್ಕೆ ಕಾರಣವಾಗಿದೆ.
ತುಮಕೂರು ವಿವಿ ಆವರಣದಲ್ಲಿರುವ ಟೆನ್ನಿಸ್​ ಕೋರ್ಟ್​ ಜಿಲ್ಲಾಡಳಿತ ಸಂಪೂರ್ಣವಾಗಿ ವಶಪಡಿಸಿಕೊಂಡು ಮರಗಳನ್ನು ಕಡಿದು ಹಾಕಿ, ಅಭಿವೃದ್ಧಿ ಪಡಿಸಿದ ಜಿಲ್ಲಾಡಳಿತ ನಾಮಲಕ ಕೂಡ ಹಾಕಿಕೊಂಡಿರುವುದು ವಿವಿ ಸ್ವಾಯತ್ತತೆಗೆ ದಕ್ಕೆ ತಂದಿದೆ. ಈ ಬಗ್ಗೆಯೂ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಿಂಡಿಕೇಟ್​ ಸದಸ್ಯರು ಬೇಡಿಕೆ ಮುಂದಿಟ್ಟಿರುವುದು ಕಂದಾಯ ಇಲಾಖೆಯಲ್ಲಿ ಉಪವಿಭಾಗಾಧಿಕಾರಿ ಕೂಡ ಆಗಿರುವ, ಕುಲಸಚಿವೆ ನಹಿದಾ ಜಮ್​ಜಮ್​ಗೆ ಧರ್ಮ ಸಂಕಟ ತಂದೊಡ್ಡಿದೆ. ವಿವಿ ಸ್ವಾಯತ್ತತೆ ಉಳಿಸುವುದೊ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನ ಪಾಲಿಸುವುದೊ ಎಂಬ ಜಿಜ್ಞಾಸೆಯಲ್ಲಿರುವುದು ಸಿಂಡಿಕೇಟ್​ ಸಭೆಯ ದಿಕ್ಕು ತಪು$್ಪವಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net