ಮಾಚನಹಳ್ಳಿಯಲ್ಲಿ ಹೈಟೆಕ್​ ಟೂಡಾ ಲೇಔಟ್​

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಂಬರುವ ಸಾಲಿನ ಬಜೆಟ್​ ಸಿದ್ಧತಾ ಸಭೆ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅಧ್ಯಕ್ಷತೆಯಲ್ಲಿ ನಡೆಯಿತು. ಜಿ.ಬಿ.ಜ್ಯೋತಿಗಣೇಶ್​, ಎನ್​.ಆರ್​.ಉಮೇಶ್​ ಚಂದ್ರ, ಬಿ.ಶುಭ, ಸಿ.ಗೋಪಾಲ್​ ಮತ್ತಿತರರು ಇದ್ದರು.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಂಬರುವ ಸಾಲಿನ ಬಜೆಟ್​ ಸಿದ್ಧತಾ ಸಭೆ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅಧ್ಯಕ್ಷತೆಯಲ್ಲಿ ನಡೆಯಿತು. ಜಿ.ಬಿ.ಜ್ಯೋತಿಗಣೇಶ್​, ಎನ್​.ಆರ್​.ಉಮೇಶ್​ ಚಂದ್ರ, ಬಿ.ಶುಭ, ಸಿ.ಗೋಪಾಲ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಟೂಡಾ ಬಜೆಟ್​ಗೆ ಡಿಸಿ ಗ್ರೀನ್​ ಸಿಗ್ನಲ್​
  • ವಾಟರ್​ ಸ್ಫೋರ್ಟ್ಸ್​ ಅಕಾಡೆಮಿ
  • ಗಾಜಿನಮನೆ ನವೀಕರಣಕ್ಕೆ 3 ಕೋಟಿ
ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ (ಟೂಡಾ) 2026-27ನೇ ಸಾಲಿನ ಬಜೆಟ್​ಗೆ ಟೂಡಾ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.
ತಾಲೂಕಿನ ಊರ್ಡಿಗೆರೆ ಹೋಬಳಿ ಮಾಚನಹಳ್ಳಿಯಲ್ಲಿ ಸುಸಜ್ಜಿತ ಬಡಾವಣೆ, ಅಮಾನಿಕೆರೆ ಅಂಗಳದಲ್ಲಿರುವ ಗಾಜಿನಮನೆ ನವೀಕರಣಕ್ಕೆ 3 ಕೋಟಿ ರೂ., ವಾಟರ್​ ಸ್ಫೋರ್ಟ್ಸ್​ ಅಕಾಡೆಮಿ (ಜಲಕ್ರೀಡಾ ಅಕಾಡೆಮಿ) ಸ್ಥಾಪನೆ ಸೇರಿದಂತೆ 2026-27ನೇ ಸಾಲಿನಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿರುವ ಯೋಜನೆಗಳ ಆಯವ್ಯಯಕ್ಕೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್​ ಅವರ ಅಧ್ಯಕ್ಷತೆಯಲ್ಲಿ ಮುಂಬರುವ ಸಾಲಿನ ಆಯವ್ಯಯ ಕುರಿತ ಸಭೆಯಲ್ಲಿ 56 ಎಕರೆಯಲ್ಲಿ ಸುಸಜ್ಜಿತ ಟೂಡಾ ಲೇಔಟ್​ ನಿರ್ಮಾಣ ಮಾಡುವ ಸಂಬಂಧ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ದಶಕಗಳ ನಂತರ ಟೂಡಾದಿಂದ ಲೇಔಟ್​ ನಿರ್ಮಾಣಕ್ಕೆ ಹೆಜ್ಜೆ ಇರಿಸಲಾಗಿದೆ.
ಗಾಜಿನಮನೆಗೆ 3 ಕೋಟಿ!: ಅಮಾನಿಕೆರೆ ಅಂಗಳದಲ್ಲಿರುವ ಗಾಜಿನಮನೆಯಲ್ಲಿ ವರ್ಷವಿಡೀ ಒಂದಿಲ್ಲೊಂದು ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ, ಮಳೆಗಾಲದಲ್ಲಿ ಗಾಳಿ-, ಮಳೆಗೆ ಛಾವಣೆಯಲ್ಲಿ ಅಳವಡಿಸಿರುವ ಗಾಜುಗಳು ಒಡೆದು ಅಸ್ತವ್ಯಸ್ತವಾಗುತ್ತಿರುತ್ತವೆ. ಅಲ್ಲದೆ, ಬೃಹತ್​ ಗಾಜಿನಮನೆಯಲ್ಲಿ "ಪ್ರತಿಧ್ವನಿ' ಉಂಟಾಗುತ್ತಿದ್ದು ಇದರ ನಿಯಂತ್ರಣ ವ್ಯವಸ್ಥೆ ಜತೆಗೆ ನವೀಕರಣಕ್ಕೆ ಪ್ರಸ್ತುತ ಮೀಸಲಿಟ್ಟಿರುವ 1.50 ಕೋಟಿ ರೂ., ಸಾಲುವುದಿಲ್ಲ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್​ ಸಭೆ ಗಮನಸೆಳೆದರು. ಗಾಜಿನಮನೆಯ ಸುಸಜ್ಜಿತ ಸಭಾಂಗಣ ನವೀಕರಣಕ್ಕಾಗಿ ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದು, ಇದಕ್ಕಾಗಿ 3 ಕೋಟಿ ರೂ.. ಹಣ ಮೀಸಲಿಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು.
ಇತ್ತೀಚೆಗೆ ಕರ್ನಾಟಕ ಕ್ರೀಡಾಕೂಟ ಸಂದರ್ಭದಲ್ಲಿ ಅಮಾನಿಕೆರೆಯಲ್ಲಿ ಕಯಾಕಿಂಗ್​ ಮತ್ತು ಕೆನೋಯಿಂಗ್​ ಸ್ಪರ್ಧೆಗಳನ್ನು ಆಯೋಜಿಸಿದ್ದು ಇದರ ಯಶಸ್ವಿಯಿಂದ ಉತ್ತೇಜನಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ತುಮಕೂರಿನಲ್ಲಿ ವಾಟರ್​ ಸ್ಫೋರ್ಟ್ಸ್​ ಅಕಾಡೆಮಿ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆ ಜಲಕ್ರೀಡಾ ಅಕಾಡೆಮಿ ಸ್ಥಾಪಿಸುವ ಪ್ರಸ್ತಾವನೆಗೆ ಸಹ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಇದರಿಂದಾಗಿ ತುಮಕೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಇಂಬುನೀಡಿದಂತಾಗಲಿದೆ ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.
ತುಮಕೂರು ಹೊರವಲಯದ ರಿಂಗ್​ ರಸ್ತೆಯಲ್ಲಿರುವ ದಿಬ್ಬೂರು ವೃತ್ತವು ಅಪಘಾತಗಳ ಸ್ಥಳವಾಗಿದ್ದು, ಇದನ್ನು ಪೊಲೀಸ್​ ಇಲಾಖೆ ಸಲಹೆಯಂತೆ ಅಭಿವೃದ್ಧಿಪಡಿಸುವುದು, ಈಗಾಗಲೇ ಅನುಮೋದನೆಗೊಂಡಿರುವ ಯೋಜನೆಗಳ ಟೆಂಡರ್​ಗಳ ಅನುಮೋದನೆ, ಮಹಾ ಯೋಜನೆ ನಕ್ಷೆಯಂತೆ ಎಪಿಎಂಸಿ ಮತ್ತು ಇಸ್ರೋ ಮಧ್ಯಭಾಗದಲ್ಲಿ ಹಾದುಹೋಗಿರುವ 40 ಅಡಿ ಮಹಾಯೋಜನೆ ರಸ್ತೆಯನ್ನು ಇಸ್ರೋ ಸಂಸ್ಥೆಯಿಂದ ಅಭಿವೃದ್ಧಿಪಡಿಸಲು ಅವರೊಂದಿಗೆ ವ್ಯವಹರಿಸುವ ತೀಮಾರ್ನ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ವಿವಿಧ ಭೂಮಿಯ ಅದಲು ಬದಲು ಸಂಬಂಧಿಸಿದ ತೀಮಾರ್ನಗಳು ಸೇರಿದಂತೆ ಮಹತ್ತರ ತೀಮಾರ್ನಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್​.ಆರ್​.ಉಮೇಶ್​ಚಂದ್ರ ಆಯವ್ಯಯ ಪ್ರಸ್ತಾವನೆಯನ್ನು ಮಂಡಿಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್​, ಮಹಾನಗರಪಾಲಿಕೆ ಆಯುಕ್ತೆ ಬಿ.ಶುಭ, ಎಎಸ್ಪಿ ಸಿ. ಗೋಪಾಲ್​ ಮತ್ತಿತರರು ಉಪಸ್ಥಿತರಿದ್ದರು.
ಟೂಡಾ ಲೇಔಟ್​
ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್​ ಜಮೀನು ಭೂಸ್ವಾಧಿನಪಡಿಸಿಕೊಂಡು ಸುಮಾರು 56 ಎಕರೆ ಜಮೀನಿನಲ್ಲಿ ವಿಶಾಲ ರಸ್ತೆ, ಉದ್ಯಾನ ಸೇರಿದಂತೆ ಸುಸಜ್ಜಿತ ಬಡಾವಣೆ ನಿರ್ಮಿಸುವ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಈ ಯೋಜನೆ ವ್ಯಾಪ್ತಿಯ ಭೂಸ್ವಾಧಿನ ಪ್ರಕ್ರಿಯೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ಅಥವಾ 50:50 ಅನುಪಾತದ ಪಾಲುದಾರಿಕೆ ಸಂಬಂಧ ಯೋಜನೆ ರೂಪುರೇಷೆ ಸಿದ್ಧಗೊಂಡಿದ್ದು, ರೈತರು ಒಪ್ಪಿದಲ್ಲಿ ಶೀಘ್ರದಲ್ಲೇ ಭೂಸ್ವಾಧಿನ ಪ್ರಕ್ರಿಯೆಗೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಬೆಂಗಳೂರು ಟ್ರಸ್ಟ್​ಗೆ ಸಿಎ ನಿವೇಶನ
ಬೆಂಗಳೂರಿನ ಅಂಕಿತ ಎಜುಕೇಷನ್​ ಟ್ರಸ್ಟ್​ಗೆ ತುಮಕೂರು ನಗರದ ಗೆದ್ದಲಹಳ್ಳಿಯಲ್ಲಿ ಹಂಚಿಕೆಯಾಗಿರುವ ನಾಗರಿಕ ಸೌಕರ್ಯ ನಿವೇಶನದ (ಸಿಎ) ಉದ್ದೇಶ ಬದಲಾವಣೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವ ಸಂಬಂಧ ಸಭೆಯಲ್ಲಿ ತೀಮಾರ್ನ ಕೈಗೊಳ್ಳಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net