ಅನ್ನ, ಅಕ್ಷರ ದಾಸೋಹದೊಂದಿಗೆ ತುಮಕೂರು ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಪ್ರೊ.ಎಂ.ವೆಂಕಟೇಶ್ವರಲು ಅಭಿನಂದನಾ ಗ್ರಂಥ ಸಮಿತಿ ಹೊರತರುತ್ತಿರುವ ಗ್ರಂಥದಲ್ಲಿ ಅವರ ಜತೆಗಿನ ಒಡನಾಟ, ಅನುಭವಗಳು, ಭಾಂದವ್ಯಬಗ್ಗೆ ಹತ್ತಿರದಿಂದ ಬಲ್ಲವರು, ಸಿಂಡಿಕೇಟ್ ಹಾಲಿ, ಮಾಜಿ ಸದಸ್ಯರು, ಪ್ರಾಧ್ಯಾಪಕರಿಂದಲು ಲೇಖನ ಬರೆಸಲಾಗುತ್ತಿದೆ. ಈ ಹಿಂದೆ ತುಮಕೂರು ವಿವಿಗೊಂದು ರೂಪ ಕೊಟ್ಟ ಡಾ.ಎಸ್.ಸಿ.ಶರ್ಮಾ ಅವರ ಕುರಿತು ವಿವಿಯಿಂದಲೇ ಅಭಿನಂದನಾ ಗ್ರಂಥ ಹೊರತರಲಾಗಿತ್ತು. ಡಾ.ನಿತ್ಯಾನಂದ ಶೆಟ್ಟಿ ಸಂಪಾದಕತ್ವದಲ್ಲಿ ಎಸ್.ಸಿ.ಶರ್ಮಾರ "ದಕ್ಷ' ಅಭಿನಂದನಾ ಗ್ರಂಥ ರೂಪಿಸಲಾಗಿತ್ತು.