ಟಿ.ಅರ್​.ರೇವಣ್ಣ, ಕೆ.ಆರ್​.ಪ್ರದಿಪ್​, ಪಾತಣ್ಣಗೆ ಗೌರವ ಡಾಕ್ಟರೇಟ್​

ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​
ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​
Published on

ಪ್ರಮುಖ ಮುಖ್ಯಾಂಶಗಳು

  • ತುಮಕೂರು ವಿವಿ 19ನೇ ಘಟಿಕೋತ್ಸವ
  • 10839 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
  • ಪ್ರೊ.ಎಂ.ವೆಂಕಟೇಶ್ವರಲು
ತುಮಕೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್​.ರೇವಣ್ಣ, ಚಾರ್ಟೆಡ್​ ಅಕೌಂಟೆಂಟ್​ ಕೆ.ಆರ್​.ಪ್ರದಿಪ್​, ಸಾಹಿತಿ ದ್ವಾರಾನುಕುಂಟೆ ಪಾತಣ್ಣ ಈ ಬಾರಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​ಗೆ ಭಾಜನರಾಗಿದ್ದಾರೆ. ಜೂ.3ರಂದು ನಡೆಯಲಿರುವ 19ನೇ ಘಟಿಕೋತ್ಸವದಲ್ಲಿ ಒಬ್ಬರಿಗೆ ಡಿ.ಲಿಟ್​, 59 ಅಭ್ಯರ್ಥಿಗಳಿಗೆ ಪಿ.ಎಚ್​ಡಿ., 2058 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8781 ವಿದ್ಯಾರ್ಥಿಗಳು ಸ್ನಾತಕ ಪದವಿ ಸೇರಿ ಒಟ್ಟು 10839 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.
ಅಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್​ ಚೆಂದ್​ ಗೆಹಲೋತ್​ ಅಧ್ಯಕ್ಷತೆವಹಿಸಲಿದ್ದು ಬೆಂಗಳೂರು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ.ದೇಬಬ್ರತ ದಾಸ್​ ಘಟಿಕೋತ್ಸವ ಭಾಷಣ ಮಾಡಲಿ ನೆರವೇರಿಸುವರು ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಯ ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್ಯಾಂಕ್​, ಎಂಎಸ್ಸಿ ವಿದ್ಯುನ್ಮಾನ ಮಾಧ್ಯಮ - 2 ರ್ಯಾಂಕ್​, ಬಿಎ, ಬಿಎಸ್​ಡಬ್ಲೂ, ಬಿಎಸ್​ಸಿ, ಬಿಕಾಂ, ಬಿಬಿಎಂ, ಬಿ.ಇಡಿ(ಪದವಿ)ಗಳಿಗೆ ತಲಾ ಹತ್ತು ರ್ಯಾಂಕ್​ಗಳು ಹಾಗೂ ಬಿಎಸ್ಸಿಫ್ಯಾಷನ್​ ಆ್ಯಂಡ್​ ಅಪಾರೆಲ್​ ಡಿಸೈನಿಂಗ್​-1 ರ್ಯಾಂಕ್​, ಬಿ.ವೋಕ್​ -3 ರ್ಯಾಂಕ್​ ಘೋಷಣೆ ಮಾಡಲಾಗಿದೆ.
ಆಶಾರಾಣಿಗೆ 5 ಚಿನ್ನದ ಪದಕ: ವಿವಿಯ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಎಂ.ಆಶಾರಾಣಿ ಕನ್ನಡ ಎಂಎ ಪದವಿಯಲ್ಲಿ ಅತಿಹೆಚ್ಚು ಅಂಕಗಳಿಸಿ ಐದು ಚಿನ್ನದ ಪದಕ, ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಶ್ರಾವ್ಯ ಎನ್​.ಬದರಿ ಬಿ.ಕಾಂ.,ನಲ್ಲಿ 3 ಚಿನ್ನದ ಪದಕ ಪ್ರೊ.ಎಚ್​.ಆರ್​.ಅಪ್ಪಣ್ಣಯ್ಯ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.
ಮಧುಗಿರಿಯ ಶ್ರೀ ಟಿ.ವಿ.ವೆಂಕಟ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಕೆ.ಆರ್​.ಮೋಹನ್​ ಕುಮಾರ್​ ಬಿ.ಎ., (ರಾಜ್ಯಶಾಸ್ತ್ರ), ವಿವಿ ವಾಣಿಜ್ಯಶಾಸ್ತ್ರ ವಿಭಾಗದ ಜೆ.ಸ್ಫೂರ್ತಿ ಎಂ.ಕಾಂ.,ನಲ್ಲಿ 3 ಚಿನ್ನದ ಪದಕ, ವಿವಿಯ ಎಂ.ಎಸ್ಸಿ ಟಾಪರ್​ ಆಗಿ ಹೊರಹೊಮ್ಮಿರುವ ಆರ್​.ವಿನುತಾ ಎಂ.ಎಸ್ಸಿ ಕಂಪ್ಯೂಟರ್​ ಸೈನ್ಸ್​ನಲ್ಲಿ 3 ಚಿನ್ನದ ಪದಕ, ಎಂ.ಎಸ್ಸಿ., ಗಣಿತಶಾಸ್ತ್ರದಲ್ಲಿ ಬಿ.ಸಿ.ಕಾವ್ಯ 3 ಚಿನ್ನದ ಪದಕ ಪಡೆದಿದ್ದಾರೆ. ಈ ಘಟಿಕೋತ್ಸವದಲ್ಲಿ ಒಟ್ಟು 90 ವಿದ್ಯಾರ್ಥಿಗಳು 117 ಚಿನ್ನದ ಪದಕಗಳನ್ನು ಹಾಗೂ ನಾಲ್ವರು ವಿದ್ಯಾರ್ಥಿಗಳು ನಗದು ಬಹುಮಾನ ಪ್ರದಾನ ಮಾಡಲಾಗುತ್ತಿದೆ.
ವಿವಿ ಕುಲಸಚಿವ ಪ್ರೊ.ಎಚ್​.ಎಸ್​.ಮೋಹನ್​ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net