ಹೆತ್ತೇನಹಳ್ಳಿ ಮಾರಮ್ಮ ದೇವಿ ತಾಳಿ ಸಮರ್ಪಣೆ

 ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಮಾರಮ್ಮ ದೇವಿಗೆ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್​ ತಾಳಿ ಸಮರ್ಪಿಸಿದರು.
ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಮಾರಮ್ಮ ದೇವಿಗೆ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್​ ತಾಳಿ ಸಮರ್ಪಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಡಿ.ಸಿ.ಗೌರಿಶಂಕರ್​
  • ತಹಸೀಲ್ದಾರ್​ ರಾಜೇಶ್ವರಿ ಸಮ್ಮುಖ
  • ಮುಜರಾಯಿ ಇಲಾಖೆ ದೇವಸ್ಥಾನ
ತುಮಕೂರು: ತಾಲೂಕಿನ ಹೆತ್ತೇನಹಳ್ಳಿ ಮಾರಮ್ಮ ದೇವಿಗೆ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್​ ಹೊಸದಾಗಿ ತಾಳಿ ಮಾಡಿಸಿ ಶುಕ್ರವಾರ ಸಮರ್ಪಿಸಿದರು. ಮುಜರಾಯಿ ಇಲಾಖೆಗೆ ದೇವಸ್ಥಾನ ಒಳಪಡುವುದರಿಂದ ಈ ಸಂದರ್ಭದಲ್ಲಿ ತಹಸೀಲ್ದಾರ್​ ರಾಜೇಶ್ವರಿ ಹಾಗೂ ಸಮಿತಿ ಮುಖಂಡರು ಹಾಜರಿದ್ದರು.
ಇತ್ತೀಚೆಗೆ ನಡೆದ ದೇವಸ್ಥಾನ ಕಳವು ಪ್ರಕರಣದಲ್ಲಿ ದೇವಿಯ ತಾಳಿಯೂ ಕಳವಾಗಿತ್ತು. ದೇವರ ಒಡವೆ ಕಳವಾಗಿ ದೊಡ್ಡ ಅಪಚಾರವಾಗಿದೆ ಎಂದು ಭಕ್ತರು ಕಳವಳಗೊಂಡಿದ್ದು ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಗೌರಿಶಂಕರ್​ ಹಾಗೂ ಅವರ ಆಪ್ತರಾದ ಉದ್ಯಮಿ ಊರುಕೆರೆ ಜಗದೀಶ್​ ದೇವಿಗೆ ತಾಳಿ ಕೊಡುಗೆ ನೀಡಿದರು.
ದೇವರ ಒಡವೆ ಕಳವು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಪತ್ತೆ ಮಾಡಿ ಕಳವು ಒಡವೆ ವಶಪಡಿಸಿಕೊಂಡು ದೇವರಿಗೆ ಅರ್ಪಿಸುವಂತೆ ಗೌರಿಶಂಕರ್​ ಒತ್ತಾಯಿಸಿದರು.
ಈ ವೇಳೆ ಕಾಂಗ್ರೆಸ್​ ಪಕ್ಷದ ಮುಖಂಡರಾದ ಪಂಡಿತ್​ ನಾರಾಯಣಪ್ಪ, ಪ್ರಕಾಶ್​, ಪಾಲನೇತ್ರಯ್ಯ, ಹೆತ್ತೇನಹಳ್ಳಿ ಮಂಜುನಾಥ್​, ನರಸಾಪುರ ಹರೀಶ್​, ಹಾಲನೂರು ಅನಂತಕುಮಾರ್​, ಹಿರೇಹಳ್ಳಿ ಮಹೇಶ್​, ಚಿಕ್ಕನಾರವಂಗಲ ರವಿ, ಕೈದಾಳ ರಮೇಶ್​, ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net