ತುಮಕೂರಿನ ರಾಗಲಹರಿ ಸಂಗೀತ ವಿದ್ಯಾಲಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಡಾ. ಸುಮನಾ ದಾಸರಾಜುರವರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಟಿ.ಮುರಳಿಕೃಷ್ಣಪ್ಪ, ಬಿ.ಆರ್.ನಟರಾಜಶೆಟ್ಟಿ, ಲೋಕೇಶ್ವರ್, ದಾಸರಾಜು, ವೆನ್ನಲಕೃಷ್ಣ, ಪುರುಷೋತ್ತಮ್, ರಾಜೇಶ್ ರಂಗನಾಥ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಗಲಹರಿ ಸಂಗೀತ ವಿದ್ಯಾಲಯ
ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಜ್ಞಾನಬುತ್ತಿ ಸತ್ಸಂಗ ಟಿ.ಮುರಳಿಕೃಷ್ಣಪ್ಪ
ತುಮಕೂರು: ಸಂಗೀತಕ್ಕೆ ಮೂಲವೇ ನಿಸರ್ಗ, ಪ್ರಕೃತಿಯೇ ನಾದಮಯಿ. ಸಂಗೀತ ನಾದ ನಿಸರ್ಗದಿಂದ ಪ್ರಾರಂಭವಾಗುತ್ತದೆ ಎಂದು ತುಮಕೂರಿನ ರಾಗಲಹರಿ ಸಂಗೀತ ವಿದ್ಯಾಲಯ ಗೌರವಾಧ್ಯಕ್ಷರು ಆದ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಟಿ.ಮುರಳಿಕೃಷ್ಣಪ್ಪ ಹೇಳಿದರು.
ನಗರದ ಸೋಮೇಶ್ವರ ಬಡಾವಣೆಯ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ರಾಗಲಹರಿ ಸಂಗೀತ ವಿದ್ಯಾಲಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಡಾ. ಸುಮನಾ ದಾಸರಾಜುರವರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಕೃತಿ ನಾದಮಯಿಯಾದರೆ ಪ್ರಕೃತಿಯಲ್ಲಿ ಹುಟ್ಟಿದ ಮನುಷ್ಯ ನಾದಪ್ರಿಯ ಹಾಗೂ ನಾದಲೋಲನಾಗಿದ್ದಾನೆ ಎಂದರು.
ತಾಯಿ ಸರಸ್ವತಿಯ ಪವಿತ್ರ ಪಯೋದರಗಳೇ ಸಾಹಿತ್ಯ ಮತ್ತು ಸಂಗೀತ. ಅಂತಹ ಸಂಗೀತ ಕ್ಷೇತ್ರದಲ್ಲಿ ವಿದುಷಿ ಡಾ. ಸುಮನಾ ದಾಸರಾಜು ಉನ್ನತವಾದ ಸಾಧನೆ ಮಾಡಿದ್ದಾರೆ. ಡಾ.ಸುಮನಾ ಅವರ ಮಾಧುರ್ಯ ಹಾಗೂ ಹಾಡಿನ ಸೊಗಸು ಅಭಿವ್ಯಕ್ತತೆಯ ಆನಂದವನ್ನು ನಮಗೆಲ್ಲ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಶಿಷ್ಯರನ್ನು ಸಂಪಾದಿಸಿ, ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವೇ ಸರಿ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಜಿಲ್ಲಾ ಸಂಸ್ಕಾರ ಭಾರತಿ ಸಂಸ್ಥೆಯ ಅಧ್ಯಕ್ಷರೂ ಆದ ಶಿರಡಿ ಸಾಯಿ ಮಂದಿರದ ಬಿ.ಆರ್.ನಟರಾಜ ಶೆಟ್ಟಿ, ವೀಣಾವಿದ್ವಾನ್ ಲೋಕೇಶ್ವರ್, ರಾಗಲಹರಿ ಸಂಗೀತ ವಿದ್ಯಾಲಯದ ಅಧ್ಯಕ್ಷ ದಾಸರಾಜು, ನಿರ್ದೇಶಕ ವೆನ್ನಲ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಜ್ಞಾನಬುತ್ತಿ ಸತ್ಸಂಗ ಕೇಂದ್ರದ ನಿರ್ದೇಶಕಿ ಸಿ.ಎ.ಇಂದಿರಾ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದುಷಿ ಡಾ. ಸುಮನಾ ದಾಸರಾಜು ಗಾಯನಕ್ಕೆ ತುಮಕೂರಿನ ಪಿಟೀಲು ವಿದ್ವಾನ್ ಪುರುಷೋತ್ತಮ್ ಹಾಗೂ ಮೃದಂಗ ವಿದ್ವಾನ್ ರಾಜೇಶ್ ರಂಗನಾಥ್ ಸಾಥ್ ನೀಡಿದರು.