ದೈಹಿಕ ಶಿಕ್ಷಣ ಶಿಕ್ಷಕರಿಗು ಉತ್ತಮ ವೇತನ ಸಿಗಲಿ

ತುಮಕೂರಿನಲ್ಲಿ ಶ್ರೀದೇವಿ ಪಿಯು ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ  "ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ'ವನ್ನು  ಕೆ.ಎನ್​. ನಾರಾಯಣಸ್ವಾಮಿ ಉದ್ಘಾಟಿಸಿದರು.   ಡಾ.ರಮಣ್​ ಎಂ. ಹುಲಿನಾಯ್ಕರ್​,  ಟಿ.ಆರ್​.ಬಸವರಾಜು,  ಎಚ್​.ಎಂ.ಮೇಘನಾ,ಎಂ.ಹನುಮಂತಪ್ಪ, ಎಚ್​.ಆರ್​.ಗಂಗಾಧರ್​, ಮಹಾವೀರ್​ ಜೈನ್​, ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಂ.ಹನುಮಂತಪ್ಪ, ಎಂ.ಎಸ್​.ಪಾಟೀಲ್​, ಡಾ.ಲಾವಣ್ಯ, ಪ್ರೊ.ಸಿ.ಅಜಯ್​ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಶ್ರೀದೇವಿ ಪಿಯು ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ "ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ'ವನ್ನು ಕೆ.ಎನ್​. ನಾರಾಯಣಸ್ವಾಮಿ ಉದ್ಘಾಟಿಸಿದರು. ಡಾ.ರಮಣ್​ ಎಂ. ಹುಲಿನಾಯ್ಕರ್​, ಟಿ.ಆರ್​.ಬಸವರಾಜು, ಎಚ್​.ಎಂ.ಮೇಘನಾ,ಎಂ.ಹನುಮಂತಪ್ಪ, ಎಚ್​.ಆರ್​.ಗಂಗಾಧರ್​, ಮಹಾವೀರ್​ ಜೈನ್​, ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಂ.ಹನುಮಂತಪ್ಪ, ಎಂ.ಎಸ್​.ಪಾಟೀಲ್​, ಡಾ.ಲಾವಣ್ಯ, ಪ್ರೊ.ಸಿ.ಅಜಯ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ
  • 12 ವರ್ಷದಿಂದ ಪಿಇ ಟೀಚರ್ಸ್​ ನೇಮಕಾತಿ ನಡೆದಿಲ್ಲ
  • ಪಿಯು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ
ತುಮಕೂರು: ಕಾಲೇಜಿನ ಉಪನ್ಯಾಸಕರಿಗೆ ಯುಜಿಸಿ ವೇತನ ನೀಡುವಂತೆ ದೈಹಿಕ ಶಿಕ್ಷಣ ಶಿಕ್ಷಕರಿಗೂ ಉತ್ತಮ ವೇತನ, ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವಂತೆ ನಿವೃತ್ತ ಸಹಾಯಕ ಪೊಲೀಸ್​ ಆಯುಕ್ತ ಕೆ.ಎನ್​. ನಾರಾಯಣಸ್ವಾಮಿ ಹೇಳಿದರು.
ನಗರದ ಶ್ರೀದೇವಿ ಇಂಜಿನಿಯರಿಂಗ್​ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಶ್ರೀರಮಣ ಮಹರ್ಷಿ ಎಜುಕೇಷನ್​ ಟ್ರಸ್ಟ್​ನ ಸಹಯೋಗದಲ್ಲಿ ಶ್ರೀದೇವಿ ಪಿಯು ಕಾಲೇಹಯ ವತಿಯಿಂದ ಒಂದು ದಿನದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈದ್ಯರು ದೇಹದಲ್ಲಿರುವ ಕೊಳೆಯನ್ನು ತೆಗೆದು ಶುಚಿ ಮಾಡಿದರೆ, ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆ ಮೂಲಕ ಆರೋಗ್ಯವಂತ ಸದೃಢ ಮಕ್ಕಳನ್ನು ರೂಪಿಸಿ ಸಮಾಜದ ಕೊಳೆ ತೆಗೆಯುತ್ತಾರೆ ಎಂದರು.
ಯಾವುದೇ ವಿದ್ಯಾಸಂಸ್ಥೆಯಲ್ಲಿ ಶಿಸ್ತು ಜಾರಿಯಲ್ಲಿದೆ ಎಂದರೆ ಅದರ ಪ್ರೇರಕಶಕ್ತಿ ದೈಹಿಕ ಶಿಕ್ಷಣ ಶಿಕ್ಷಕರೇ ಆಗಿರುತ್ತಾರೆ. ತುಮಕೂರು ವಿದ್ಯಾ ಕಾಶಿಯಾಗಿ ಬೆಳೆದಿದೆ. ಜಿಲ್ಲೆಯಲ್ಲಿ ಶಿಕ್ಷಣ ಪಡೆದವರು ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಇದು ತುಮಕೂರು ಜಿಲ್ಲೆ ಶಿಕ್ಷಣ ರಂಗದಲ್ಲಿನ ಸಾಧನೆಯ ಚಿತ್ರಣವನ್ನು ತೆರೆದಿಡುತ್ತದೆ ಎಂದು ಹೇಳಿದರು.
ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ದೇಶದಲ್ಲಿ ಜೀವನಶೈಲಿಯ ಕಾಯಿಲೆಗಳು ಹೆಚ್ಚಾಗುತ್ತಿವೆ. ಭಾರತ ಡಯಾಬಿಟಿಕ್​ ರಾಜಧಾನಿಯಾಗಿ ಪರಿವರ್ತನೆಯಾಗಿದೆ. ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಗಳು ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಾಲಾಮಟ್ಟದಿಂದ ಪಿಯುಸಿ, ಪದವಿ, ಪಿಜಿ, ಮೆಡಿಕಲ್​, ಇಂಜಿನಿಯರಿಂಗ್​ ಕಾಲೇಜಿನಲ್ಲೂ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯದ ವೈದ್ಯಕಿಯ ನಿರ್ದೇಶಕ ಡಾ.ರಮಣ್​ ಎಂ. ಹುಲಿನಾಯ್ಕರ್​ ಸಲಹೆ ನೀಡಿದರು.
ದೇಹವನ್ನು ದಂಡಿಸುವವನು ದೇವರನ್ನು ಕಾಣುತ್ತಾನೆ. ದೇವರನ್ನು ಕಾಣುವವನು ಸದಾ ಆರೋಗ್ಯ ಮತ್ತು ಹಸನ್ಮುಖಿಯಾಗಿರುತ್ತಾನೆ. ಇತ್ತೀಚಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಹತ್ವ ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ದೈಹಿಕ ಶಿಕ್ಷಣ ಶಿಕ್ಷಕರಿಗೆ ಮತ್ತು ಅವರ ಮಕ್ಕಳಿಗಾಗಿ ಶ್ರೀದೇವಿ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ ನಡೆಸಲಾಗುವುದು ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ, ಔಷಧಿ ನೀಡುವ ಹೆಲ್ತ್​ ಕಾರ್ಡ್​ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ರೀಡಾರತ್ನ ಪ್ರಶಸ್ತಿ ವಿಜೇತೆ ಎಚ್​.ಎಂ.ಮೇಘನಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ, ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಚ್​.ಆರ್​.ಗಂಗಾಧರ್​ ಹಾಗೂ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಹಾವೀರ್​ ಜೈನ್​, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್​.ಪಾಟೀಲ್​, ಶ್ರೀದೇವಿ ಚಾರಿಟಬಲ್​ ಟ್ರಸ್ಟ್​ನ ಟ್ರಸ್ಟಿ ಡಾ.ಲಾವಣ್ಯ, ಶ್ರೀದೇವಿ ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್​.ರಾಮಕೃಷ್ಣ, ಶ್ರೀದೇವಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿಅಜಯ್​ ಮತ್ತಿತರರು ಉಪಸ್ಥಿತರಿದ್ದರು.
12 ವರ್ಷದಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ನಡೆದಿಲ್ಲ
ಕಳೆದ 2014 ರಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ನಡೆದಿಲ್ಲ. 6ಸಾವಿರಕ್ಕು ಹೆಚ್ಚು ಪಿಯುಸಿ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಈ ಕೊರತೆಯನ್ನು ಸರ್ಕಾರ ನಿವಾರಣೆ ಮಾಡಬೇಕು. ದೈಹಿಕ ಶಿಕ್ಷಣ ಪಠ್ಯಕ್ರಮ ಬದಲಾಯಿಸಿ ಮೌಲ್ಯ ಶಿಕ್ಷಣ ಎಂಬ ಹೊಸ ಪದ್ಧತಿ ಜಾರಿಗೊಳಿಸುವ ಮುನ್ನ ದೈಹಿಕ ಶಿಕ್ಷಕರ ಸಲಹೆ -ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಎಲ್​ ವೈದ್ಯನಾಥನ್​ ಸಮಿತಿ ವರದಿಯ ಶಿಫಾರಸುಗಳನ್ನು ಜಾರಿಗೆ ತರುವಂತೆ ರಾಜ್ಯ ದೈಹಿಕ ಶಿಕ್ಷಣ ಅಧ್ಯಾಪಕರ ಸಂಘದ ಅಧ್ಯಕ್ಷ ಟಿ.ಆರ್​.ಬಸವರಾಜು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net