ವೈದೇಹಿ 6-2, 6-2 ನೇರ್ ಸೆಟ್ಗಳಿಂದ ಟೂರ್ನಿಯ ಭರವಸೆಯ ಆಟಗಾರ್ತಿ ಮಧುರಿಮಾ ಸಾವಂತ್ರನ್ನು ಮಣಿಸಿದರು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ವೈದೇಹಿ ಪಂದ್ಯದಲ್ಲಿ ಸಂಪೂರ್ಣ ಹಿಡಿತಸಾಧಿಸಿದರು. 4ನೇ ಶ್ರೇಯಾಂಕದ ಅನುಭವಿ ಆಟಗಾರ್ತಿ ಝೀಲ್ ದೇಸಾಯಿ 6-2, 6-3 ರಿಂದ ಮತ್ತೊಬ್ಬ ಭಾರತೀಯ ಭರವಸೆ ಆಟಗಾರ್ತಿ ಜೆನ್ನಿಫರ್ ಲುಯಿಖಾಮ್ರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.