ನಗರದ ವಿವಿ ಆವರಣದ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಪ್ರಧಾನಸುತ್ತಿನ ಸಿಂಗಲ್ಸ್ ಕ್ವಾರ್ಟರ್ಫೈನಲ್ ನಲ್ಲಿ ಅಗ್ರಶ್ರೇಯಾಂಕಿತೆ ಲಿಥುವೇನಿಯಾದ ಜಸ್ಟಿನಾ ಮಿಕುಲ್ಸ್ಕೆ$ಟ್ 5-7, 6-0, 6-2 ಸೆಟ್ಗಳಿಂದ ರಷ್ಯಾದ ಕ್ಸೆನಿಯಾ ಲಸ್ಕೊಟೋವಾ ವಿರುದ್ಧ ಜಯಗಳಿಸಿ ಸೆಮಿಫೈನಲ್ ತಲುಪಿದರು. ಜಸ್ಟಿನಾ 5-7 ರಿಂದ ಮೊದಲ ಸೆಟ್ ಬಿಟ್ಟುಕೊಟ್ಟರಾದರು ನಂತರ ಪ್ರಚಂಡವಾಗಿ ಪುಟಿದೆದ್ದರು. 6-0, 6-2 ಸೆಟ್ಗಳಿಂದ ಕ್ಸೆನಿಯಾ ಮೇಲೆ ಸವಾರಿ ಮಾಡಿ ಪಂದ್ಯ ಗೆದ್ದುಕೊಂಡರು.