ನಮ್ಮ ದೇಶದಲ್ಲಿ ಶೇ.60ರಷ್ಟು ಯುವಜನರಿದ್ದಾರೆ. ಅದರಲ್ಲಿಯೂ 2000 ಇಸವಿಯ ನಂತರ ಹುಟ್ಟಿದ ಜೆನ್- ಜೀ, ಜೆನ್ ಅಲ್ಪಾ ದಂತಹ ಯುವಜನತೆ, 2047ರ ವಿಕಸಿತ ಭಾರತಕ್ಕೆ ನಿಮ್ಮ ಕೊಡುಗೆ ಅಪಾರವಾಗಿದೆ.ವಿದ್ಯೆಯ ಜತೆಗೆ, ಸಂಸ್ಕಾರವನ್ನು ರೂಢಿಸಿಕೊಂಡರೆ, ಒಳ್ಳೆಯ ಭವಿಷ್ಯ ನಿಮ್ಮದಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳನ್ನು ಹೊರತು ಪಡಿಸಿ, ಉಳಿದ ಕ್ಷೇತ್ರಗಳಿಗೆ ಗಣಿತ ಬೇಕೆಂತಲೇ ಇಲ್ಲ. ಕಲಾ ವಿಭಾಗದಲ್ಲಿ ಕಲಿತವರು ಗೂಗಲ್ ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಾವು ಕಲಿತಿರುವ ವಿಷಯಗಳಲ್ಲಿ ಎಷ್ಟು ಆಳವಾದ ಜ್ಞಾನವಿದೆ. ಅದನ್ನು ಹೇಗೆ ಪ್ರಸ್ತುತಪಡಿಸಬಲ್ಲಿರ ಎಂಬುದರ ಮೇಲೆ ಕಂಪನಿಗಳು ಉದ್ಯೋಗನೀಡುತ್ತಿವೆ. ಪ್ರಮುಖವಾಗಿ ಸೋಲನ್ನು ಹೇಗೆ ಎದುರಿಸುತ್ತಿರುವ ಎಂಬುವುದು ಸಹ ಪ್ರಾಮುಖ್ಯತೆ ಪಡೆಯಲಿದೆ ಎಂದು ತಿಳಿಸಿದರು.