ತುಮಕೂರಿನಲ್ಲಿ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪುರಷರ ವಿಭಾಗದಲ್ಲಿ ಜಿಲ್ಲಾ ಸಶಸ ಮೀಸಲು ಪಡೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಲಾಭೂರಾಮ್, ಕೆ.ವಿ.ಅಶೋಕ್, ಪುರುಷೋತ್ತಮ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟ
ಗುರುಪ್ರಸಾದ್ಗೆ ಸವೋರ್ತ್ತಮ ಪ್ರಶಸ್ತಿ
ಕೆ.ಜಿ.ಪವಿತ್ರ ವೈಯಕ್ತಿಕ ಚಾಂಪಿಯನ್
ತುಮಕೂರು: ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ತುಮಕೂರು ಉಪವಿಭಾಗ ತಂಡದ ಗುರುಪ್ರಸಾದ್ ಸವೋರ್ತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರೆ, ಮಹಿಳಾ ವಿಭಾಗದಲ್ಲಿ ಕುಣಿಗಲ್ ಠಾಣೆಯ ಪವಿತ್ರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ನಗರದ ಜಿಲ್ಲಾ ಸಶಸ ಮೀಸಲು ಪಡೆ ಮೈದಾನದಲ್ಲಿ ನಡೆದ 3 ದಿನಗಳ ಪೊಲೀಸ್ ಕ್ರೀಡಾಕೂಟಕ್ಕೆ ಬುಧವಾರ ತೆರೆಬಿತ್ತು. ಈ ಬಾರಿಯೂ ಸಮಗ್ರ ತಂಡ ಪ್ರಶಸ್ತಿಯು ಜಿಲ್ಲಾ ಸಶಸ ಮೀಡಲು ಪಡೆ (ಡಿಎಆರ್) ಪಾಲಾಯಿತು. ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಲಾಭೂರಾಮ್ ಕ್ರೀಡಾಕೂಟದಲ್ಲಿ ವಿಜೇತರಾದವಾರಿಗೆ ಪ್ರಶಸ್ತಿ ವಿತರಿಸಿದರು.
ಪುರಷರ ವಿಭಾಗದಲ್ಲಿ ತಿಲಕ್ಪಾರ್ಕ್ ಠಾಣೆಯ ಗುರುಪ್ರಸಾದ್ 400 ಮೀ., 800 ಮೀ., ಹಾಗೂ 1500 ಮೀ., ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಹೈ ಜಂಪ್, ಲಾಂಗ್ ಜಂಪ್ ದ್ವೀತಿಯ ಸ್ಥಾನ ಪಡೆದು ಕ್ರೀಡಾಕೂಟದ ಸವೋರ್ತ್ತಮ ಪ್ರಶಸ್ತಿ ಗೆದ್ದುಕೊಂಡರು.
ಮಹಿಳಾ ವಿಭಾಗದಲ್ಲಿ ಕುಣಿಗಲ್ ಠಾಣೆಯ ಕೆ.ಜಿ.ಪವಿತ್ರ 100 ಮೀ., 200 ಮೀ.,ನಲ್ಲಿ ಬೆಳ್ಳಿ, 400 ಮೀ., ಹಾಗೂ ಲಾಂಗ್ ಜಂಪ್ನಲ್ಲಿ ಚಿನ್ನದ ಪದಕ ಗೆದ್ದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.