ಮಲ್ಲಿಕಾರ್ಜುನ ರ್ಖಗೆಗೆ ಅಪಮಾನ ಕಾಂಗ್ರೆಸ್​ ಪ್ರತಿಭಟನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅಪಮಾನ ಮಾಡಿದ ಕೃತ್ಯ ಖಂಡಿಸಿ ಜಿಲ್ಲಾ ಕಾಂಗ್ರೆಸ್​ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು. ಜಿ.ಚಂದ್ರಶೇಖರಗೌಡ, ಎಸ್​.ರಫೀಕ್​ ಅಹ್ಮದ್​, ಇಕ್ಬಾಲ್​ ಅಹಮದ್​, ಷಣ್ಮುಗಪ್ಪ, ಸೈಯದ್​ ದಾದಾಪೀರ್​, ನಯಾಜ್​ಅಹಮದ್​, ಫೈಯಾಜ್​, ಮಹೇಶ್​, ಕವಿತಾ, ಭಾಗ್ಯಲಕ್ಷಿ$್ಮ, ಶಿವಾಜಿ, ನಟರಾಜಶೆಟ್ಟಿ, ಸುಜಾತ, ಕೆಂಪಣ್ಣ, ವೈ.ಎನ್​.ನಾಗರಾಜು, ಸಿದ್ದಲಿಂಗೇಗೌಡ ಮತ್ತಿತರರು ಇದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅಪಮಾನ ಮಾಡಿದ ಕೃತ್ಯ ಖಂಡಿಸಿ ಜಿಲ್ಲಾ ಕಾಂಗ್ರೆಸ್​ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು. ಜಿ.ಚಂದ್ರಶೇಖರಗೌಡ, ಎಸ್​.ರಫೀಕ್​ ಅಹ್ಮದ್​, ಇಕ್ಬಾಲ್​ ಅಹಮದ್​, ಷಣ್ಮುಗಪ್ಪ, ಸೈಯದ್​ ದಾದಾಪೀರ್​, ನಯಾಜ್​ಅಹಮದ್​, ಫೈಯಾಜ್​, ಮಹೇಶ್​, ಕವಿತಾ, ಭಾಗ್ಯಲಕ್ಷಿ$್ಮ, ಶಿವಾಜಿ, ನಟರಾಜಶೆಟ್ಟಿ, ಸುಜಾತ, ಕೆಂಪಣ್ಣ, ವೈ.ಎನ್​.ನಾಗರಾಜು, ಸಿದ್ದಲಿಂಗೇಗೌಡ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರ್ಖಗೆ ಭಾಷಣ ಮಾಡಿದ ಸ್ಥಳ ಸ್ವಚ್ಛತೆ
  • ರಾಮಲೀಲಾ ಮೈದಾನ ಶುದ್ಧೀಕರಣ
  • ಶ್ರೀರಾಮ ಸೇನಾ ಅಮಾನವೀಯ ಕೃತ್ಯ

ತುಮಕೂರು: ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನರ್ಖಗೆ ಭಾಷಣ ಮಾಡಿದ ಸ್ಥಳವನ್ನು ಗೋ ಮೂತ್ರ ಹಾಗೂ ಸಗಣಿಯಿಂದ ಸ್ವಚ್ಛಗೊಳಿಸಿ ಶುದ್ಧೀಕರಣಗೊಳಿಸಿದ ಶ್ರೀರಾಮ ಸೇನಾ ಧರ್ಮಸ್ಥಳ ಸೇವನ್ಯಾಸ್​ ಹಾಗೂ ಬಿಜೆಪಿಯ ಪಕ್ಷದ ಅಂಗಸಂಸ್ಥೆಗಳ ಅಮಾನವೀಯ ಕೃತ್ಯ ಖಂಡಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

ನಗರದ ಟೌನ್​ಹಾಲ್​ ಮುಂಭಾಗದ ಅಂಬೇಡ್ಕರ್​ ಪ್ರತಿಮೆ ಮುಂಭಾಗದಿಂದ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ ನೇತೃತ್ವದಲ್ಲಿ ಬಿಜಿಎಸ್​ ವೃತ್ತದವರೆಗೆ ಪಾದಯಾತ್ರೆ ನಡೆಸಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸಿದ ಕಾಂಗ್ರೆಸ್​ ಕಾರ್ಯಕರ್ತರು, ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ ಎಂಬುದಕ್ಕೆ ಉತ್ತರಾಖಂಡನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಚಗೊಳಿಸಿದ ಕಿಡಿಗೇಡಿಗಳನ್ನು ಕೇಂದ್ರ ಸರ್ಕಾರ ಮತ್ತು ಉತ್ತರಾಖಂಡ ಸರ್ಕಾರಗಳು ಬಂಧಿಸಿ, ಕಠಿಣ ಕಾನೂನು ಕ್ರಮಜರುಗಿಸುವಂತೆ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ, ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳಾದ ಆರ್​ಎಸ್​ಎಸ್​, ಶ್ರೀರಾಮಸೇನೆ, ಬಜರಂಗದಳ ಈ ದೇಶದಲ್ಲಿ ಮನುಸೃತಿಯನ್ನು ಮತ್ತೆ ಚಲಾವಣೆಗೆ ತರಲು ಹೊರಟಿವೆ ಎಂಬುದಕ್ಕೆ ಆಗಸ್ಟ್​11ರ ಘಟನೆ ಸಾಕ್ಷಿಯಾಗಿದೆ. ಈ ಹಿಂದೆ ಉಪ ಪ್ರಧಾನಿಯಾಗಿದ್ದ ಬಾಬು ಜಗಜೀವನ್​ರಾಮ್​ ಪುರಿಯ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಉಪ ಪ್ರಧಾನಿ ಎಂಬ ಕಾರಣಕ್ಕೆ ಅವರನ್ನು ದೇವಾಲಯದ ಒಳಗೆ ಬಿಟ್ಟು, ಅವರ ಕುಟುಂಬದವರನ್ನು ತಡೆ ಹಿಡಿದಿದ್ದರು. ಇದನ್ನು ಬಾಬೂಜಿ ಅಂದೇ ಪ್ರತಿಭಟಿಸಿದ್ದರು. ಇಂದಿಗೂ ಕರ್ನಾಟಕದ ಹಲವು ದೇವಾಲಯಗಳಲ್ಲಿ ಎಡೆಸ್ನಾನ, ಮಡೆಸ್ನಾನದಂತಹ ಪಂಕ್ತಿ ಭೇಧ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ್​ಗೆ ಬಾಲ್ಯದಲ್ಲಿ ಶಾಲೆಯಲ್ಲಿದ್ದ ಮಡಿಕೆಯ ನೀರು ಕುಡಿಯಲು ಬಿಡಲಿಲ್ಲ. ಕೆರೆಯ ನೀರನ್ನು ಮುಟ್ಟಲು ಬಿಡಲಿಲ್ಲ. ಆದರೆ ಅವರು ದೊಡ್ಡವರಾದ ಮೇಲೆ ಇಂತಹ ಅನಿಷ್ಟಗಳಿಗೆ ಇತೀಶ್ರಿ ಹೇಳಲು ಹಲವು ಕಾನೂನುಗಳನ್ನು ಜಾರಿಗೆತಂದರು. ಆದರೆ, ಪಟ್ಟಭದ್ರ ಹಿತಾಸಕ್ತಿಗಳ ಕುಯುಕ್ತಿಯಿಂದ ಇಂದಿಗೂ ತಳವರ್ಗದ ಜನರು ಅಸ್ಪೃಶ್ಯತೆ ಅನುಭವಿಸುತಿದ್ದಾರೆ. ಇದು ತೊಲಗಬೇಕು. ಇನ್ನೊಮ್ಮೆ ಇಂತಹದೇ ಘಟನೆ ಜರುಗಿದರೆ ಇಡೀ ರಾಷ್ಟ್ರದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಶಾಸಕ ಎಸ್​.ರಫೀಕ್​ ಅಹ್ಮದ್​ ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ಅಸ್ಪೃಶ್ಯತೆ ತೊಲಗಿದಾಗ ಮಾತ್ರ ನಿಜವಾದ ಸ್ವಾತಂತ್ರ$್ಯ ಎಂದಿದ್ದರು. ಆದರೆ, ದೇಶ ಬ್ರಿಟಿಷರಿಂದ ಸ್ವಾತಂತ್ರ$್ಯ ಪಡೆದರು, ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಲ್ಲಿಯೇ ಇದೆ ಎಂಬುದಕ್ಕೆ ಈ ಟನೆಯ ಸಾ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನರ್ಖಗೆ ಭಾಷಣ ಮಾಡಿದ ಉತ್ತರಾಖಂಡದ ರಾಮಲೀಲಾ ಮೈದಾನವನ್ನು ಶುದ್ಧೀಕರಿಸಿದ್ದು ಇಂತಹ ಘಟನೆ ಮರುಕಳುಹಿಸಿದರೆ ಕಾಂಗ್ರೆಸ್​ಉಗ್ರ ಹೋರಾಟ ನಡೆಸಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್​ ಅಹಮದ್​, ಶ್ರೀರಾಮಸೇನೆಯ ಕಾರ್ಯಕರ್ತರು ಮಾಡಿರುವ ಈ ಘೋರಕೃತ್ಯ ಇಡೀರಾಷ್ಟ್ರವೇ ತಲೆತಗ್ಗಿಸುವಂತಹ ವಿಚಾರವಾಗಿದೆ. ಭಾರತಕ್ಕೆ ಸ್ವಾತಂತ್ರ ಬಂದು 80 ವರ್ಷ ಕಳೆದರೂ ಇಂದಿಗೂ ಮನುಷ್ಯರನ್ನು ಮನುಷ್ಯರೆಂದು ಒಪ್ಪಿಕೊಳ್ಳದ ಮುನುವಾದಿಗಳ ಈ ನಡೆ, ಭಾರತದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಎಂಬುದಕ್ಕೆ ನಿದರ್ಶನವೆನಿಸಿದೆ. ಶುದ್ಧೀಕರಿಸಿದ ಜನರನ್ನು ಕೂಡಲೇ ಬಂಧಿಸಿ, ಮುಂದೆ ಇಂತಹ ಘಟನೆಗಳು ಜರುಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಷಣ್ಮುಗಪ್ಪ, ಸೈಯದ್​ ದಾದಾಪೀರ್​, ನಯಾಜ್​ಅಹಮದ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ಫೈಯಾಜ್​, ಮಹೇಶ್​, ಮುಖಂಡರಾದ ಕವಿತಾ, ಭಾಗ್ಯಲಕ್ಷ್ಮಿ,ಶಿವಾಜಿ, ಇನಾಯತ್​, ಇಲಾಹಿ ಸಿಖಂದರ್​, ನಟರಾಜಶೆಟ್ಟಿ, ಸುಜಾತ, ಕೆಂಪಣ್ಣ, ವೈ.ಎನ್​.ನಾಗರಾಜು,ಇರ್ಫಾನ್​ಅಹಮದ್​, ಆದಿಲ್​, ಸುಮತಿ, ಮುಬೀನಾ,ರೇವಣ್ಣ ಸಿದ್ದಯ್ಯ, ಸಿದ್ದಲಿಂಗೇಗೌಡ, ಮಂಜುನಾಥ್​, ಲಕ್ಷಿ$್ಮನಾರಾಯಣ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net