ಪಕ್ಷ ಬಲವರ್ಧನೆಗೆ ಬಿವೈವಿ ಸೂಚನೆ

ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ವಿಶೇಷ ಸಭೆಯಲ್ಲಿ ತುಮಕೂರು ಜಿಲ್ಲಾ ಕೋರ್​ ಕಮಿಟಿ ಸದಸ್ಯರ ಸಭೆಯನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಸಿದರು.
ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ವಿಶೇಷ ಸಭೆಯಲ್ಲಿ ತುಮಕೂರು ಜಿಲ್ಲಾ ಕೋರ್​ ಕಮಿಟಿ ಸದಸ್ಯರ ಸಭೆಯನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ, ತಾಪಂ ಚುನಾವಣೆ
  • ಸಂಘಟನಾತ್ಮಕ ಬಲಪಡಿಸಿ
  • ಮಂಡಲಗಳಿಗೆ ಪದಾಧಿಕಾರಿಗಳ ನೇಮಿಸಿ
ತುಮಕೂರು: ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಆಗ್ನೇಯ ಪದವೀಧರ ಚುನಾವಣೆ ಜತೆಗೆ ಸಂಘಟನಾತ್ಮಕವಾಗಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ತುಮಕೂರು ಜಿಲ್ಲಾ ಟಕದ ಸಭೆ ನಡೆಸಲಾಯಿತು. ಈ ವೇಳೆ ಒಂದೊಂದು ಜಿಪಂ ಕ್ಷೇತ್ರಕ್ಕೆ ಉಸ್ತುವಾರಿ ನೇಮಿಸಿ ಬೂತ್​ ಸಮಿತಿ ಬಲಗೊಳಿಸಲು ವಿಜಯೇಂದ್ರ ಸೂಚನೆ ನೀಡುವ ಮೂಲಕ ಪಕ್ಷ ಸಂಟನೆ ಚುರುಕುಗೊಳಿಸಲು ತಾಕೀತು ಮಾಡಿದರು.
ಬೆಂಗಳೂರಿನ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸಂಜೆ ನಡೆದ ಜಿಲ್ಲಾಶ ವಿಶೇಷ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಕೋರ್​ ಕಮಿಟಿ ಸದಸ್ಯರಿಗೆ 7 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಘಟನಾತ್ಮಕವಾಗಿ ಪಕ್ಷ ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಹಾಗೂ ಮಂಡಲಗಳಿಗೆ ಹೊಸ ಪದಾಧಿಕಾರಿಗಳ ನೇಮಿಸಿ "ಪಕ್ಷವನ್ನು' ಸಂಟಿಸುವಂತೆ ತಿಳಿಸಿದರು.
ಜಿಪಂ, ತಾಪಂಗೆ ಸನ್ನದ್ಧರಾಗಿ!: ಜಿಪಂ, ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ. ಪ್ರತಿ ಕ್ಷೇತ್ರಕ್ಕೆ ಉಸ್ತುವಾರಿ ನೇಮಿಸಿ ಬೂತ್​ ಸಮಿತಿಗಳನ್ನು ಬಲಗೊಳಿಸಬೇಕು. ಪಕ್ಷ ನಿಷ್ಠರಿಗೆ, ಹಗಲಿರುಳು ಶ್ರಮಿಸುವರನ್ನು ಗುರುತಿಸಿ ಜವಾಬ್ದಾರಿ ನೀಡುವಂತೆ ವಿಜಯೇಂದ್ರ ಸೂಚ್ಯವಾಗಿ ಹೇಳಿದರು.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಪಕ್ಷ ಹಿಡಿತಹೊಂದಿದ್ದು ತುಮಕೂರು ಜಿಲ್ಲೆ ಪ್ರಮುಖ ಪಾತ್ರ ನಿಭಾಯಿಸಬೇಕಿದೆ. ಸುಶಿಕ್ಷಿತ ಮತದಾರರನ್ನು ನಮ್ಮ ಕೈಹಿಡಿಯುತ್ತಾರೆಂದು ಎಲ್ಲಿಯೂ ಮೈಮರೆಯದೇ ಹಾಲಿ, ಮಾಜಿ ಶಾಸಕರು ಪಕ್ಷ ಸಂಟನೆಗೆ ಪ್ರತಿ ಹಂತದಲ್ಲು ಕೈಜೋಡಿಸಬೇಕು. ಕ್ಷೇತ್ರದಲ್ಲಿ ಪಕ್ಷದ ಪ್ರಾಬಲ್ಯ ನಿರೂಪಿಸಬೇಕಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ವಿಧಾನಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಜಿ.ಎಸ್​.ಬಸವರಾಜು, ಮಾಜಿ ಸಚಿವ ಸಿ.ಟಿ.ರವಿ, ಮಾಜಿಶಾಸಕರಾದ ಪ್ರೀತಂಗೌಡ, ಎಂ.ಡಿ.ಲಕ್ಷಿ$್ಮನಾರಾಯಣ್​, ಶಾಸಕ ಜಿ.ಬಿ.ಜ್ಯೋತಿಗಣೇಶ್​, ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ರಾಜ್ಯ ಕಾರ್ಯದರ್ಶಿ ಅಂಬಿಕಾಹುಲಿನಾಯ್ಕರ್​, ವಿನಯ್​ ಬಿದರೆ, ಜಿಲ್ಲಾ ಉಪಾಧ್ಯಕ್ಷ ವೈ.ಎಚ್​.ಹುಚ್ಚಯ್ಯ ಸೇರಿದಂತೆ ಕೋರ್​ ಕಮಿಟಿ ಸದಸ್ಯರಿದ್ದರು.
ಬಿಎಲ್​ಎ 2 ನೇಮಿಸಿ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​ ) ಪಕ್ರಿಯೆ ಆರಂಭವಾಗಿದ್ದು ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗಳಲ್ಲಿ ಬಿಎಲ್​ಎ 2 ಗಳನ್ನು ನೇಮಿಸಬೇಕು. ಆ ಮೂಲಕ ಮತದಾರರ ಪಟ್ಟಿಯಿಂದ ಡಿಲಿಷನ್​, ಹೊಸ ಸೇರ್ಪಡೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಜಿಲ್ಲಾಧ್ಯಕ್ಷರು ಸಂಪೂರ್ಣ ಉಸ್ತುವಾರಿವಹಿಸಿಕೊಳ್ಳುವಂತೆ ವಿಜಯೇಂದ್ರ ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net