ಶಟಲ್​ ಸ್ಟ್ರೈಕರ್ಸ್​ ಚಾಂಪಿಯನ್​

 ತೃತೀಯ ಸ್ಥಾನ ಪಡೆದ ಜಿ.ಆರ್​.ಚಾಲೆಂಜರ್ಸ್​ ತಂಡ.
ತೃತೀಯ ಸ್ಥಾನ ಪಡೆದ ಜಿ.ಆರ್​.ಚಾಲೆಂಜರ್ಸ್​ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ತುಮಕೂರು ಬ್ಯಾಡ್ಮಿಂಟನ್​ ಲೀಗ್​ ಪ್ರಥಮ ಆವೃತ್ತಿ
  • ಪವನ್​ ಪ್ಯಾಂಥರ್ಸ್ ಕುಣಿಗಲ್​ ರನ್ನರ್​ ಅಪ್​ ಶ್ರೇಯ
  • ತೃತೀಯ ಸ್ಥಾನಕ್ಕೆ ಜಿ.ಆರ್​.ಚಾಲೆಂಜರ್ಸ್​ ತೃಪ್ತಿ
ತುಮಕೂರು: ಪ್ರಥಮ ತುಮಕೂರು ಬ್ಯಾಡ್ಮಿಂಟನ್​ ಲೀಗ್​ನ ಚಾಂಪಿಯನ್​ ಆಗಿ ಶಟಲ್​ ಸ್ಟ್ರೈಕರ್ಸ್​ ಹೊರಹೊಮ್ಮಿತು. ಟೀಮ್​ ಸ್ಮಾಷೋಲಿಕ್ಸ್​ ಮತ್ತು ವಿಂಟೇಜ್ ಇವೆಂಟ್ಸ್ ವತಿಯಿಂದ ತುಮಕೂರು ಬ್ಯಾಡ್ಮಿಂಟನ್​ ಅಕಾಡೆಮಿ (ಟಿಬಿಎ)ಯಲ್ಲಿ ಭಾನುವಾರ ಸಂಜೆ ಶಟಲ್​ ಸ್ಟ್ರೈಕರ್ಸ್ ರೋಚಕ ಹಣಾಹಣಿಯಿಂದ ಕೂಡಿದ್ದ ಫೈನಲ್ ನಲ್ಲಿ ಪವನ್​ ಪ್ಯಾಂಥರ್ಸ್​ ಕುಣಿಗಲ್​ ತಂಡದ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಬಹುಮಾನದೊಂದಿಗೆ 70 ಸಾವಿರ ನಗದು ಹಾಗೂ ಟ್ರೋಫಿ ಮುಡಿಗೇರಿಸಿಕೊಂಡಿತು.
ಕುಣಿಗಲ್​ ತಂಡ ರನ್ನರ್​ ಅಪ್​ ಪ್ರಶಸ್ತಿಯೊಂದಿಗೆ 50 ಸಾವಿರ ನಗದು, ಟ್ರೋಫಿ ಗೆದ್ದುಕೊಂಡಿತು.
8 ತಂಡಗಳು ಭಾಗವಹಿಸಿದ್ದ ಲೀಗ್​ನಲ್ಲಿ ನಾಲ್ಕು ತಂಡಗಳು ನಾಕೌಟ್​ ಹಂತ ಪ್ರವೇಶಿಸಿದ್ದವು. ಸೆಮಿಫೈನಲ್ ನಲ್ಲಿ ಶಟಲ್​ ಸ್ಟ್ರೈಕರ್ಸ್, ನಿಟ್ಟೂರಿನ ಉಲ್ಫ್​ಫ್ಯಾಕ್ಸ್​ ತಂಡದ ವಿರುದ್ಧ ಜಯಗಳಿಸಿ ಫೈನಲ್​ ಪ್ರವೇಶಿಸಿತು. ಇನ್ನೊಂದು ಗುಂಪಿನಿಂದ ಪವನ ಪ್ಯಾಂಥರ್ಸ್​ ಕುಣಿಗಲ್​ ತಂಡ ತುಮಕೂರಿನ ಜಿ.ಆರ್​.ಚಾಲೆಂಜರ್ಸ್​ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ತಲುಪಿತು.
ಸೆಮೀಸ್​ ಸೋತ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಉಲ್ಫ್​ಫ್ಯಾಕ್ಸ್​ ​ ವಿರುದ್ಧ ಜಿ.ಆರ್​. ಚಾಲೆಂಜರ್ಸ್​ ತಂಡ ಗೆಲುವು ಸಾಧಿಸಿ 30 ಸಾವಿರ ರೂ., ನಗದು ಹಾಗೂ ಟ್ರೋಫಿ ಯನ್ನು ತನ್ನದಾಗಿಸಿಕೊಂಡಿತು.
ಮಾಜಿ ಕಾಪೋರ್ರೇಟರ್​ ಮಂಜುಳಾ, ಟಿಬಿಎನ ಪ್ರವಿಣ್​, ಎನ್​ಎಸ್​ ಸಿಲ್ಕ್ಸ್ ನ ಎನ್​.ಎಸ್​.ಶಂಕರ್​, ಹಿರಿಯ ಆಟಗಾರರಾದ ಸೋಮೇಶ್​, ಲಿಖಿತ್​, ವರುಣ್​ ರೆಡ್ಡಿ, ಜೋತಿ ಪ್ರಕಾಶ್​, ಎನ್​.ವಿ.ಸ್ವಾಮಿ, ಗೌತಮ್​ ಮತ್ತಿತರರು ಉಪಸ್ಥಿತರಿದ್ದರು.
8 ತಂಡ ಭಾಗಿ: ಕುಣಿಗಲ್​ ಪ್ಯಾಂಥರ್ಸ್​, ಜಿ.ಆರ್​.ಚಾಲೆಂಜರ್ಸ್​, ಉಲ್ಫ್​ ಫ್ಯಾಕ್ಸ್​, ಥಂಡರ್​ ಸ್ಮಾಷರ್ಸ್​, ತುಮಕೂರು ಪವರ್​ ಸ್ಮಾಷರ್ಸ್​, ಷಟಲ್​ ಸ್ಟ್ರೈಕರ್ಸ್​,ಗುಬ್ಬಿ ವಾರಿಯರ್ಸ್​, ಎಸ್​.ಎಸ್​.ಸ್ಟ್ರೈಕರ್ಸ್​ ಒಟ್ಟು ಜಿಲ್ಲೆಯ 8 ತಂಡಗಳು ಲೀಗ್​ನಲ್ಲಿ ಸೆಣಸಾಡಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net