ಎಐನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ

ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿರುವ ಎಸ್​ಎಸ್​ಎಂಸಿ ಕಾನ್​ - 2025 ರಾಷ್ಟ್ರೀಯ ಸಮ್ಮೇಳನದಲ್ಲಿ ಹೊರತಂದಿರುವ ವಿಶೇಷ ಸಂಚಿಕೆಯನ್ನು ಡಾ.ಜಿ.ಪರಮೇಶ್ವರ ಬಿಡುಗಡೆಗೊಳಿಸಿದರು. ಡಾ.ಶಿವಲಿಂಗಯ್ಯ, ಡಾ.ಕೆ.ಬಿ.ಲಿಂಗೇಗೌಡ,ಡಾ. ಅಶೋಕ್​ ಮೆಹ್ತ, ಡಾ. ಆನಂದ್​, ಡಾ. ಪ್ರಭಾಕರ್​,  ಡಾ.ವೆಂಕಟೇಶ್​, ಡಾ.ರಾಜೇಶ್ವರಿ ಇದ್ದರು.
ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿರುವ ಎಸ್​ಎಸ್​ಎಂಸಿ ಕಾನ್​ - 2025 ರಾಷ್ಟ್ರೀಯ ಸಮ್ಮೇಳನದಲ್ಲಿ ಹೊರತಂದಿರುವ ವಿಶೇಷ ಸಂಚಿಕೆಯನ್ನು ಡಾ.ಜಿ.ಪರಮೇಶ್ವರ ಬಿಡುಗಡೆಗೊಳಿಸಿದರು. ಡಾ.ಶಿವಲಿಂಗಯ್ಯ, ಡಾ.ಕೆ.ಬಿ.ಲಿಂಗೇಗೌಡ,ಡಾ. ಅಶೋಕ್​ ಮೆಹ್ತ, ಡಾ. ಆನಂದ್​, ಡಾ. ಪ್ರಭಾಕರ್​, ಡಾ.ವೆಂಕಟೇಶ್​, ಡಾ.ರಾಜೇಶ್ವರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ
  • ಗೃಹಸಚಿವ ಡಾ.ಜಿ.ಪರಮೇಶ್ವರ
  • ಎಸ್​ಎಸ್​ಎಂಸಿ ಕಾನ್​ -2025
ತುಮಕೂರು: ಕೃತಕ ಬುದ್ಧಿಮತ್ತೆ (ಎಐ) ವೈದ್ಯಕೀಯ ಕೇತ್ರಕ್ಕೆ ಕಾಲಿಟ್ಟ ಮೇಲಂತೂ ಆರೋಗ್ಯ ಸೇವೆಯಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಲಾಗುತ್ತಿದೆ ಎಂದು ಸಾಹೇ ವಿಶ್ವವಿದ್ಯಾಲಯ ಕುಲಾಧಿಪತಿಗಳು ಆದ ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು. 
ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಎಚ್​.ಎಂ ಗಂಗಾಧರಯ್ಯ ಸಭಾಂಗಣದಲ್ಲಿ ಆಯೋಜಿಸಿರುವ ಎಸ್​ಎಸ್​ಎಂಸಿ ಕಾನ್​ -2025 ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ (ಎಐ)ಯು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ತರುವುದರ ಮೂಲಕ ರೋಗಿಗಳಲ್ಲಿರುವ ಕಾಯಿಲೆಯನ್ನು ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲು ವೈದ್ಯರಿಗೆ ಸಹಕಾರಿಯಾಗಿದೆ ಎಂದರು. 
ಭಾರತದಲ್ಲಿ  ಸುಮಾರು 2ಲಕ್ಷಕ್ಕು ಅಧಿಕ ಮಂದಿ ವೈದ್ಯರು ಸೃಷ್ಟಿಯಾಗುತ್ತಿದ್ದಾರೆ. ಈ ವೈದ್ಯರೆಲ್ಲರೂ ಕೇವಲ ಭಾರತದಲ್ಲಿ ಮಾತ್ರ ಸೇವೆಯನ್ನು ನೀಡದೆ ಪ್ರಪಂಚದಾದ್ಯಂತ ತಮ್ಮ ಸೇವೆಯನ್ನು ನೀಡುತ್ತಾ ಹೆಸರುವಾಸಿಯಾಗಿದ್ದಾರೆ. ಹಾಗಾಗಿ, ಇಡೀ ವಿಶ್ವದಾದ್ಯಂತ ಭಾರತೀಯ ವೈದ್ಯರಿಗೆ ಸಾಕಷ್ಟು ಬೇಡಿಕೆ ಇದೆ. ಜನಸಾಮಾನ್ಯರ ಕೈಗೆಟಕುವ ಆರೋಗ್ಯ ಸೇವೆಯನ್ನು ನೀಡುವುದು ನಮ್ಮ ಆದ್ಯಕರ್ತವ್ಯವಾಗಿದೆ. ಅದರಂತೆ ನಮ್ಮ ಶ್ರೀ ಸಿದ್ಧಾರ್ಥ ವೈದ್ಯಕೀಯ ವಿದ್ಯಾಲಯದಲ್ಲಿ ನೀಡುತ್ತಿದ್ದೇವೆ ಎಂದು ಹೇಳಿದರು. 
ವೈದ್ಯಕೀಯ ಕೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು, ಪ್ರಯೋಗಗಳ ಅಗತ್ಯವಿದೆ. ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆಯನ್ನು ಪ್ರಯೋಗಗಳನ್ನು ಮಾಡುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗೂ ಸಾಕಷ್ಟು ವಿಷಯಗಳನ್ನು ಅರಿತುಕೊಳ್ಳಬಹುದು. ಇದರಿಂದ ನಿಮ್ಮ ಜ್ಞಾನಮಟ್ಟ ಸುಧಾರಿಸುತ್ತದೆ ಎಂದರು. 
ಗ್ರಾಮೀಣ ಭಾಗದ ಜನರಿಗೆ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ  ಉತ್ತಮವಾದ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಆರೋಗ್ಯ ಸೇವಾವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿ ಅನೇಕ ಸಂಶೋಧನೆಗಳು ಆವಿಷ್ಕಾರಗಳಾಗಿದೆ. ಇದರಿಂದ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಅದರಲ್ಲೂ ವೈದ್ಯಕೀಯ ಕೇತ್ರದಲ್ಲಾಗಿರುವ ತಂತ್ರಜ್ಞಾನದ ಬದಲಾವಣೆಯಿಂದ ಸಾಕಷ್ಟು ಚಿಕಿತ್ಸೆಯನ್ನು ನೀಡಲು ಅನುಕೂಲಮಾಡಿಕೊಟ್ಟಿದೆ. ಕೋವಿಡ್​ 19 ನಮ್ಮ ವೈದ್ಯಕೀಯ ಕ್ಷೇತ್ರದಲ್ಲಿರುವ ದೌರ್ಬಲ್ಯಗಳನ್ನು ತೋರಿಸಿಕೊಟ್ಟಿದೆ. ಜತೆಗೆ ಸಾಕಷ್ಟು ಸಂಶೋಧನೆಗಳನ್ನು ದಾರಿ ಮಾಡಿಕೊಟ್ಟಿದೆ. ಎಂದು ಡಾ.ಶಿವಲಿಂಗಯ್ಯ ಹೇಳಿದರು. 
ಸಾಹೇ ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವ ಡಾ. ಅಶೋಕ್​ ಮೆಹ್ತ,  ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪ್ರಭಾಕರ್​, ವೈದ್ಯಕಿಯ ಅಧಿಕ್ಷಕ ಡಾ.ವೆಂಕಟೇಶ್​, ಡಾ.ರಾಜೇಶ್ವರಿ, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಡಾ. ಆನಂದ್​ ಹಾಗೂ ಪರಿಕ್ಷಾಂಗ ನಿಯಂತ್ರಕರಾದ ಡಾ. ಗುರುಶಂಕರ್​, ಸಂಯೋಜಕಿ ಡಾ. ಸವಿತಾರಾಣಿ ಮತ್ತಿತರರು ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net