ಲಂಚ ಪಡೆದು ಲೋಕಾಯುಕ್ತರಿಗೆ ಸಿಕ್ಕಿಬಿದ್ದ ತುಮಕೂರು  ಪಿಎಸ್ ಐ

ಭ್ರಷ್ಟ ಪಿಎಸ್ ಐ ಚೇತನ್ ಕುಮಾರ್
ಭ್ರಷ್ಟ ಪಿಎಸ್ ಐ ಚೇತನ್ ಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಗೃಹ ಸಚಿವರ ತವರು ಜಿಲ್ಲೆಯ ಪಿಎಸ್ ಐ ಅರೆಸ್ಟ್
  • ಲಂಚ ನೀಡದಿದ್ದರೆ ಗಾಂಜಾ ಕೇಸ್ ಪಿಕ್ಸ್
  • ಕಾರು ಬಿಡಲು ಒಂದು ಲಕ್ಷ ರೂ.‌ಹಣ
ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ ತವರು ಜಿಲ್ಲೆ ಗ್ರಾಮಾಂತರ ಪಿಎಸ್ಐ ಚೇತನ್ ಕುಮಾರ್ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ.
ನಾಗೇಶ್ ಎಂಬುವವರಿಂದ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚೇತನ್ ಕುಮಾರ್, ಹಣ ನೀಡದಿದ್ದರೆ ಗಾಂಜಾ ಸಾಗಾಣಿಕೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದರು.
ಕೆಸರುಮಡು ಗ್ರಾಮದ ಬಳಿ 3 ದಿನಗಳ ಹಿಂದೆ ಕಾರು ಬಿಟ್ಟು ಹೋಗಿದ್ದ ನಾಗೇಶ್. ನಂತರ ಕಾರು ಪೊಲೀಸರು ತೆಗೆದುಕೊಂಡು ಹೋಗಿದ್ದರಿಂದ ಹಿಂಪಡೆಯಲು ಠಾಣೆಗೆ ಬಂದಿದ್ದರು.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೆಸರುಮಡು ಗ್ರಾಮದಲ್ಲಿ
ಕಾರನ್ನ ವಶಕ್ಕೆ ಪಡೆದುಕೊಂಡಿದ್ದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಚೇತನ್ ಕುಮಾರ್ ಲಂಚಕ್ಕೆ ಪೀಡಿಸಿದ್ದರು.
ಪೊಲೀಸರು ನೀಡುತ್ತಿದ್ದ ಕಿರುಕುಳಕ್ಕೆ ರೋಸಿದ ನಾಗೇಶ್, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ನಾಗೇಶ್ ಜತೆ ಹಣ ಕೊಡುವ ನೆಪದಲ್ಲಿ ಕಾರ್ಯಾಚರಣೆ ನಡೆಸಿ, ಹಣ ಸ್ವೀಕರಿಸುವಾಗ ಬಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net