ಕಳೆದ ಬಾರಿ ಆಗಸ್ಟ್ 31, 2018ರಲ್ಲಿ ತುಮಕೂರು ಪಾಲಿಕೆಗೆ ಚುನಾವಣೆ ನಡೆದು ಸೆ.3ಕ್ಕೆ ಫಲಿತಾಂಶ ಹೊರಬಿದ್ದಿತ್ತು. ಮೊದಲ ಅವಧಿಯ ಮೇಯರ್, ಉಪಮೇಯರ್ ಸ್ಥಾನದ ಮೀಸಲು ನಿಗದಿ ವಿಳಂಬವಾಗಿದ್ದರಿಂದ 2019, ಜ.30 ರಂದು ಹೊಸ ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬಂದಿತ್ತು. ಈ ಚುನಾಯಿತ ಮಂಡಳಿಯ ಆಡಳಿತವು ಜ.29, 2024ಕ್ಕೆ ಅಂತ್ಯಗೊಂಡಿತ್ತು. ಪಾಲಿಕೆ ಅವಧಿ ಮುಕ್ತಾಯಗೊಂಡು 30 ತಿಂಗಳಾಗತ್ತು ಬಂದಿದ್ದರು ಮತ್ತೆ ಚುನಾವಣೆ ನಡೆಸುವ ಗೋಜಿಗೆ ಸರ್ಕಾರ ಇನ್ನೂ ಹೋಗಿಲ್ಲ.