ತುಮಕೂರು ಲೇಕ್ ರನ್ 2026 ಟೀಶರ್ಟ್ ಅನ್ನು ಎನ್.ಎಸ್.ಜಯಕುಮಾರ್ ಬಿಡುಗಡೆಗೊಳಿಸಿದರು. ಪ್ರೊ.ಸಿ.ಎಂ.ರವಿ, ಎ.ಎಸ್.ಕಾಂತರಾಜು, ಶ್ರೀನಿವಾಸ್ ದಿವಾಕರ್, ಸತೀಶ್ ಕೆ.ಮಲ್ಲಣ್ಣ, ಮಂಜುನಾಥ್ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತುಮಕೂರು ರನ್ನರ್ಸ್ ಕ್ಲಬ್ ನೇತೃತ್ವ
ಅಮಾನಿಕೆರೆ ಅಂಗಳದಲ್ಲಿ 5.5 ಕಿ.ಮೀ., ಓಟ
ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ
ತುಮಕೂರು: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ತುಮಕೂರು ರನ್ನರ್ಸ್ ಕ್ಲಬ್ ಟ್ರಸ್ಟ್ ವತಿಯಿಂದ ತುಮಕೂರು ಲೇಕ್ ರನ್-2026 ಅನ್ನು ಜು.26 ರಂದು ನಗರದ ಅಮಾನಿಕೆರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಮಾನಿಕೆರೆಯ ಸುತ್ತಲು ನಿರ್ಮಿಸಿರುವ ವಾಕಿಂಗ್ ಪಾಥ್ನಲ್ಲಿ ಈ ತುಮಕೂರು ಲೇಕ್ ರನ್ ನಡೆಯಲಿದ್ದು 800 ಮಂದಿ ಈ ಓಟದಲ್ಲಿ ಪಾಲ್ಗೊಳ್ಳಲು ಹೆಸರು ನೊಂದಾಯಿಸಿದ್ದಾರೆ. ಎರಡು ಹಂತಗಳಲ್ಲಿ ಈ ಓಟ ನಡೆಯಲಿದ್ದು ಮೊದಲ ಹಂತದಲ್ಲಿ ಅಮಾನಿಕೆರೆ ಸುತ್ತಲಿನ ವಾಕಿಂಗ್ ಪಾಥ್ 5.5 ಕಿ.ಮೀ., ದೂರವನ್ನು ವಾಕಿಂಗ್ ಆಯೋಜಿಸಲಾಗಿದೆ. ತದ ನಂತರ ಮ್ಯಾರಥಾನ್ ಓಟಗಳಲ್ಲಿ ಭಾಗಿಯಾಗಿರುವ ರನ್ನರ್ಸ್ಗಳಿಗಾಗಿ ಅದೇ ವಾಕಿಂಗ್ ಪಾಥ್ ಮೇಲೆ ಎರಡು ಸುತ್ತು ವೇಗದ ಓಟ ಏರ್ಪಡಿಸಲಾಗಿದೆ. ಈಗಾಗಲೇ ಹೆಸರು ನೊಂದಾಯಿಸಿರುವ ಓಟಗಾರರಿಗೆ ಜು. 25 ರ ಬೆಳಗ್ಗೆ 10 ರಿಂದ ಟೀಶರ್ಟ್, ಚಸ್ಟ್ ನಂಬರ್ ಹಾಗೂ ಓಟದ ನಿಯಮಗಳನ್ನು ತಿಳಿಸಲಾಗುವುದು. ಭಾನುವಾರ ಬೆಳಗ್ಗೆ 8 ಗಂಟೆಗೆ ತುಮಕೂರು ಲೇಕ್ ರನ್ಗೆ ಚಾಲನೆ ನೀಡಲಾಗುವುದು ಎಂದು ತುಮಕೂರು ರನ್ನರ್ಸ್ ಕ್ಲಬ್ನ ಪ್ರೊ.ಸಿ.ಎಂ.ರವಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ (ಟಿಎಂಸಿಸಿ) ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಮಾತನಾಡಿ, 26 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಯುದ್ಧದಲ್ಲಿ ಪ್ರಾಣಕಳೆದುಕೊಂಡ ಕುಟುಂಬಗಳ ನೆರವಿಗೆ ಬರುವ ಕೆಲಸ ಆಗಬೇಕಿದೆ.ಈ ನಿಟ್ಟಿನಲ್ಲಿ ಮಾಜಿ ಸೃನಿಕರು ಹಾಗೂ ಯುದ್ಧದಲ್ಲಿ ಮಡಿದ ವೀರ ಯೋಧರ ಕುಟುಂಬದವರಿಗೆ ಟಿಎಂಸಿಸಿ ಸದಾ ನಿಲ್ಲಲಿದೆ ಎಂದರು.