ಪರೀಕ್ಷೆ ಅಕ್ರಮ ಪ್ರಧಾನಿ ಮೋದಿ ಹೊಣೆ ಹೊರಲಿ

ತುಮಕೂರಿನಲ್ಲಿ ನೀಟ್​, ಸಿಬಿಎಸ್​ಇ ಪರೀಾ ಅಕ್ರಮ ವಿರೋಧಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್​ ಸಮಿತಿ, ಎನ್​ಎಸ್​ಯುಐ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಜಿ.ಚಂದ್ರಶೇಖರಗೌಡ, ಮುರಳೀಧರಹಾಲಪ್ಪ, ಷಣ್ಮುಖಪ್ಪ, ಆದೀಬ್​ ಅಹ್ಮದ್​, ಮನೋಹರ, ಮಹಮ್ಮದ್​ , ಗಗನದೀಪ್​, ಗಗನ್​ ಶ್ರೀನಿವಾಸ್​, ಅರುಣ್​ ಕುಮಾರ್​, ಭಾಗ್ಯಮ್ಮ, ಸುಜಾತ ಮತ್ತಿತರರು ಇದ್ದರು.
ತುಮಕೂರಿನಲ್ಲಿ ನೀಟ್​, ಸಿಬಿಎಸ್​ಇ ಪರೀಾ ಅಕ್ರಮ ವಿರೋಧಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್​ ಸಮಿತಿ, ಎನ್​ಎಸ್​ಯುಐ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಜಿ.ಚಂದ್ರಶೇಖರಗೌಡ, ಮುರಳೀಧರಹಾಲಪ್ಪ, ಷಣ್ಮುಖಪ್ಪ, ಆದೀಬ್​ ಅಹ್ಮದ್​, ಮನೋಹರ, ಮಹಮ್ಮದ್​ , ಗಗನದೀಪ್​, ಗಗನ್​ ಶ್ರೀನಿವಾಸ್​, ಅರುಣ್​ ಕುಮಾರ್​, ಭಾಗ್ಯಮ್ಮ, ಸುಜಾತ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ
  • ಡಿಸಿಸಿ, ಎನ್​ಎಸ್​ಯುಐ ಪ್ರತಿಭಟನೆ
  • ಮಾನವ ಸರಪಳಿ ರಚಿಸಿ ರಸ್ತೆ ತಡೆ
ತುಮಕೂರು: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್​) ಹಾಗೂ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ಅಕ್ರಮಗಳನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಹಾಗೂ ಎನ್​ಎಸ್​ಯುಐ ನೇತೃತ್ವದಲ್ಲಿ ನಗರದದಲ್ಲಿ ಮಂಗಳವಾರ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು.
ನಗರದ ಬಿಜಿಎಸ್​ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಹಾಗೂ ಎನ್​ಎಸ್​ಯುಐ ನೇತೃತ್ವದಲ್ಲಿ ನೀಟ್​ ಅಲ್ಲದೆ, ಎಸ್​ಎಸ್​ಸಿ, ಜಿಡಿ, ಯುಜಿ ಪ್ರವೇಶ, ಸಿಬಿಎಸ್​ಇ12ನೇ ತರಗತಿ ಪರೀಕ್ಷೆ ಸೇರಿದಂತೆ ಇದುವರೆಗೂ 84ಕ್ಕೂ ಹೆಚ್ಚು ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ, ಕೋಟ್ಯಾಂತರ ವಿದ್ಯಾರ್ಥಿಗಳ ಜೀವನ ಬೀದಿ ಪಾಲಾಗಿದ್ದು ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಕೇಂದ್ರ ಶಿಕ್ಷಣ ಸಚಿವ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರೀಕ್ಷೆ ಅಕ್ರಮ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಪ್ರತಿಭಟನಾನಿರತರು ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ, ದೇಶದಲ್ಲಿ ಸಮರ್ಪಕ ಪರೀಕ್ಷೆ ವ್ಯವಸ್ಥೆ ಇಲ್ಲದೆ ಯುವಜನರ ಬದುಕು ಅವನತಿಯತ್ತ ಸಾಗಿದೆ. ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ವಿಲವಾಗಿರುವ ಕೇಂದ್ರ ಸರ್ಕಾರವು ಲಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಚಲ್ಲಾಟಾಡುತ್ತಿದೆ. ಇದರ ನೈತಿಕ ಹೊಣೆಹೊರಬೇಕಾದ ಮೋದಿ ಅವರು ದೇಶದ ಜನರಿಗೆ ಉತ್ತರ ಹೇಳುವ ಬದಲು ವಿದೇಶ ಪ್ರವಾಸ ಕೈಗೊಂಡು ಜನರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 12 ವರ್ಷಗಳಿಂದ ಕೇಂದ್ರದ ಎಚ್​ಆರ್​ಡಿ ವತಿಯಿಂದ ನಡೆಯುತ್ತಿರುವ ಪರೀಕ್ಷೆಗಳಲ್ಲಿ ಪಾರದರ್ಶಕತೆ ಇಲ್ಲದಂತಾಗಿದೆ. ಹತ್ತಾರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ಇದರ ಹೊಣೆಯನ್ನು ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್​ ಹೊತ್ತುಕೊಂಡಿಲ್ಲ. ನೀಟ್​ ಪರೀಕ್ಷೆಯ ವೈಲ್ಯತೆಯನ್ನು ಕೋಚಿಂಗ್​ ಸೆಂಟರ್​ಗಳ ಮೇಲೆ ಹಾಕಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತಿದ್ದಾರೆ. ಕೂಡಲೇ ಶಿಕ್ಷಣ ಮಂತ್ರಿಗಳನ್ನು ವಜಾ ಮಾಡಿ, ಪ್ರಾಮಾಣಿಕರನ್ನು ನೇಮಕ ಮಾಡಬೇಕು. ಪ್ರಧಾನಿ ದೇಶದ ಜನರಿಗೆ ಸತ್ಯಾಸತ್ಯತೆ ತಿಳಿಸಬೇಕು.ಎನ್​ಟಿಎ ರದ್ದು ಮಾಡಿ, ಈ ಹಿಂದಿನಂತೆ ರಾಜ್ಯ ಸರ್ಕಾರಗಳಿಗೆ ಪರೀಕ್ಷೆ ನಡೆಸುವ ಹೊಣೆಗಾರಿಕೆ ನೀಡುವಂತೆ ಹಾಲಪ್ಪ ಒತ್ತಾಯಿಸಿದರು.
ನೆಹರು ಬಾಲಮಂಚ್​ ಜಿಲ್ಲಾ ಸಂಚಾಲಕ ಆದೀಬ್​ ಅಹ್ಮದ್​ ಮಾತನಾಡಿ, ಕೇಂದ್ರದಲ್ಲಿ ಇರುವುದು ಭ್ರಷ್ಟ ಬಿಜೆಪಿ ಸರ್ಕಾರ. ನೀಟ್​ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಊಟ ತಿಂಡಿ, ನಿದ್ರೆ ಬಿಟ್ಟು ವರ್ಷಗಟ್ಟಲೇ ಶ್ರಮಪಟ್ಟಿರುತ್ತಾರೆ. ಇದರ ಬಗ್ಗೆ ಕಿಂಚಿತ್ತು ಅರಿವು ಇರದ ಬಿಜೆಪಿ ಯುವಜನರ ಜೀವನದ ಜತೆ ಆಟವಾಡುತ್ತಿದೆ. ಯುವಜನರು ಸಿಡಿದೆದ್ದರೆ ಪರಿಸ್ಥಿತಿ ಹೇಗಿರಲಿದೆ ಎಂಬುದಕ್ಕೆ ನೆರೆಯರಾಷ್ಟ್ರಗಳೇ ಸಾಕ್ಷಿ. ಇದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡು ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆ ರೂಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಮಾಜಿ ಸದಸ್ಯ ನರಸೀಯಪ್ಪ, ಜಿಲ್ಲಾ ಕಾಂಗ್ರೆಸ್​ ಎಸ್ಸಿ ಘಟಕದ ಅಧ್ಯಕ್ಷ ಲಿಂಗರಾಜು, ಎಸ್ಟಿ ಘಟಕದ ಕುಮಾರಸ್ವಾಮಿ, ಟೂಡಾ ಮಾಜಿ ಸದಸ್ಯೆ ಗೀತಮ್ಮ, ಮುಖಂಡರಾದ ಷಣ್ಮುಖಪ್ಪ, ಆಟೋರಾಜು, ರೇವಣಸಿದ್ದಪ್ಪ, ಮಂಜುನಾಥ್​, ಎನ್​ಎಸ್​ಯುಐ ಜಿಲ್ಲಾ ಉಸ್ತುವಾರಿ ಮನೋಹರ, ಮಹಮ್ಮದ್​ ಕ್​ೈ, ಗಗನದೀಪ್​, ಗಗನ್​ ಶ್ರೀನಿವಾಸ್​, ಅರುಣ್​ ಕುಮಾರ್​, ದೇವರಾಜು, ಕುಶಾಲ್​, ದಿಲೀಪ್​ ಸೇರಿದಂತೆ ನೂರಾರು ಯುವ ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿ ಸರ್ಕಾರಕ್ಕೆ ಅಧಿಕಾರಬೇಕು,ಆದರೆ, ಜವಾಬ್ದಾರಿ ಬೇಡ. ಅಧಿಕಾರಕ್ಕಾಗಿ ಮಿಲಿಟರಿ ಸಹಕಾರದೊಂದಿಗೆ ಎಸ್​ಐಆರ್​ ಮಾಡಲು ಮುತವರ್ಜಿ ವಹಿಸುವ ಬಿಜೆಪಿ ಅಷ್ಟೇ ಕಾಳಜಿಯನ್ನು ಪರೀಕ್ಷೆ ನಡೆಸಲು ವಹಿಸುತ್ತಿಲ್ಲ. 140 ಕೋಟಿ ಜನಸಂಖ್ಯೆ ಇರುವ ರಾಷ್ಟ್ರಕ್ಕೆ ಎಷ್ಟು ಇಂಧನ ಅಗತ್ಯವಿದೆ ಎಂಬಕೊಂಚ ಅರಿವು ಇಲ್ಲ. ಇಂಧನ ಬೆಲೆಗಳನ್ನು ಹೆಚ್ಚಿಸಿ ಜರನ್ನು ಸಂಕಷ್ಟಕ್ಕೆ ದೂರಿದೆ. ಜನಸಾಮಾನ್ಯರ ಬದುಕು ಬೀದಿಗೆ ಬಂದಿದೆ. ಇಂತಹ ಬೇಜವಾಬ್ದಾರಿ ಸರ್ಕಾರದ ನಡೆಯನ್ನು ಖಂಡಿಸಿಯೇ ಕಾಕ್ರೋಚ್​ ಜನತಾ ಪಾರ್ಟಿ ಹುಟ್ಟುಕೊಂಡಿದೆ. ಕೂಡಲೇ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು.
ಜಿ.ಚಂದ್ರಶೇಖರಗೌಡ
ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್​ ಸಮಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net