ಜನಸಾಮಾನ್ಯರ ಬದುಕು ದುಸ್ತರ

 ತುಮಕೂರಿನಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ವಿಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಸೈಯದ್​ ಮುಜೀಬ್​, ಎನ್​.ಕೆ.ಸುಬ್ರಮಣ್ಯ, ಎ. ಲೋಕೇಶ್​,  ಟಿ. ಆರ್​ ಕಲ್ಪನಾ, ಶಿವಕುಮಾರ್​ ಸ್ವಾಮಿ, ವಾಸೀಂ ಅಕ್ರಂ, ಅಶ್ವಥಯ್ಯ,  ಇಂತಿಯಾಜ್​, ಶ್ರಿನಿವಾಸಗೌಡ, ಉಮೇಶ್​,  ಮುತ್ತುರಾಜು, ಖಲೀಲ್​ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ವಿಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಸೈಯದ್​ ಮುಜೀಬ್​, ಎನ್​.ಕೆ.ಸುಬ್ರಮಣ್ಯ, ಎ. ಲೋಕೇಶ್​, ಟಿ. ಆರ್​ ಕಲ್ಪನಾ, ಶಿವಕುಮಾರ್​ ಸ್ವಾಮಿ, ವಾಸೀಂ ಅಕ್ರಂ, ಅಶ್ವಥಯ್ಯ, ಇಂತಿಯಾಜ್​, ಶ್ರಿನಿವಾಸಗೌಡ, ಉಮೇಶ್​, ಮುತ್ತುರಾಜು, ಖಲೀಲ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಪಿಐಎಂ ಪ್ರತಿಭಟನೆ
  • ದರ ಹೆಚ್ಚಳ ನಿಯಂತ್ರಿಸಲು ಕೇಂದ್ರ ವಿಫಲ
  • ಬಿಜೆಪಿ ವಿರುದ್ಧ ಜನಾಕ್ರೋಶ
ತುಮಕೂರು: ಪೆಟ್ರೋಲ್​, ಡೀಸೆಲ್​, ಅಡುಗೆ ಅನಿಲ ದರಗಳ ಹೆಚ್ಚಳದಿಂದ ಅಗತ್ಯವಸ್ತುಗಳ ವಿಪರೀತ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆಯೆಂದು ಅರೋಪಿಸಿ ಸಿಪಿಐಎಂ ಜಿಲ್ಲಾ ಸಮಿತಿ ಮಂಗಳವಾರ ನಗರದಲ್ಲಿ ಗ್ಯಾಸ್​ ಸಿಲಿಂಡರ್​ಗೆ ಹಾರ ಹಾಕಿ ವಿನೂತ ರೀತಿಯಲ್ಲಿ ಪ್ರತಿಭಟಿಸಿತು.
ನಗರದ ಸ್ವತಂತ್ರ ಚೌಕದಲ್ಲಿ ಸಂಜೆ ಪ್ರತಿಭಟಿಸಿ ಕಚ್ಚಾ ತೈಲ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿವೆ. ಜನಸಾಮಾನ್ಯರ ಬದುಕು ದುಸ್ತರವೆನಿಸಿದ್ದು ಕೇಂದ್ರ ಸರ್ಕಾರ ಬೆಲೆ ನಿಯಂತ್ರಣ ಮಾಡುವಲ್ಲಿ ವಿಲವಾಗಿದೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್​ ಮುಜೀಬ್​, ಕೇಂದ್ರ ಸರ್ಕಾರದ ನೀತಿಗಳ ಕಾರಣ ಬೆಲೆ ಏರಿಕೆಯಾಗುತ್ತಿದೆ. ಇದು ಬಿಜೆಪಿ ಸರ್ಕಾರದ ದಂಧೆ. ಜನತೆ ಬೆಲೆ ಏರಿಕೆ , ಗಲಭೆಗಳಲ್ಲಿನ ಸಂತ್ರಸ್ಥರಿಗೆ, ಸಂಕಷ್ಟಕಗಳಿಂದ ಬಳಲುವ ರಾಷ್ಟ್ರದ ಜನತೆಗೆ ಸಾಂತ್ವನ ಹೇಳಲು ಸಮಯವಿಲ್ಲದ ಪ್ರಧಾನ ಮಂತ್ರಿಗಳು ವಿದೇಶಿದಲ್ಲಿ ಮಹಿಳಾ ರಾಜಕಾರಣಿಗೆ ಚಾಕ್ಲೇಟ್​ ತಿನ್ನಿಸುವಲ್ಲಿ ಬಿಜಿ ಇದ್ದಾರೆ ಎಂದು ಕುಟುಕಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್​ .ಕೆ ಸುಬ್ರಮಣ್ಯ ಮಾತನಾಡಿ ವಾಣಿಜ್ಯ ಸಿಲಿಂಡರ್​ ದರಗಳಲ್ಲಿ ತೀವ್ರ ಏರಿಕೆಯು ತೀರ ಖಂಡನಾರ್ಹವಾಗಿದೆ. ಇದರ ಪರಿಣಾವಾಗಿ ಬೇರೆಲ್ಲ ಸಾಮಗ್ರಿಗಳ ಬೆಲೆಗಳು ತೀವ್ರವಾಗಿ ಏರುತ್ತವೆ. ವಾಣಿಜ್ಯ ಸಂಸ್ಥೆಗಳು, ಹೋಟೆಲ್​ಗಳು ಹೊರೆಗಳನ್ನು ಗ್ರಾಹಕರ ಮೇಲೆ ಹಾಕುತ್ತಿವೆ. ಹಣದುಬ್ಬರ ಹೆಚ್ಚಲು ಕಾರಣವಾಗಿದೆ. ಇದರಿಂದಾಗಿ ಅನೇಕ ಸಣ್ಣ ಸಂಸ್ಥೆಗಳು ಮುಚ್ಚುವಂತಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ನಗರ ಕಾರ್ಯದರ್ಶಿ ಎ. ಲೋಕೇಶ್​, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಟಿ. ಆರ್​ ಕಲ್ಪನಾ, ಸಿಐಟಿಯು ಶಿವಕುಮಾರ್​ ಸ್ವಾಮಿ. ುಟ್​ಪಾತ್​ ವ್ಯಾಪಾರಿಗಳ ಸಂಘ ವಾಸೀಂ ಅಕ್ರಂ, ಅಶ್ವಥಯ್ಯ, ಆಟೋ ಚಾಲಕರ ಸಂಘ ಇಂತಿಯಾಜ್​, ಶ್ರಿನಿವಾಸಗೌಡ, ಉಮೇಶ್​, ಮುತ್ತುರಾಜು, ಖಲೀಲ್​, ನರಸಿಂಹಮೂರ್ತಿ, ಮಿನಾಕ್ಷಿ, ನೇತ್ರಾವತಿ,ಗಂಗಮ್ಮಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net