ಬುಕ್ಕಾಪಟ್ಟಣದಲ್ಲಿ ಹಿಟ್ ಅಂಡ್ ರನ್ ಗೆ ಮೂರು ವರ್ಷದ ಬಾಲಕ ಬಲಿ

ಸೈಯದ್ ಹುಜೆಪ್
ಸೈಯದ್ ಹುಜೆಪ್
Published on

ಪ್ರಮುಖ ಮುಖ್ಯಾಂಶಗಳು

  • ಮನೆ ಮುಂದೆ ಆಟವಾಡುತ್ತಿದ್ದ ಮಗು
  • ಗುದ್ದಿ ಪರಾರಿಯಾದ ಕಾರು
  • ಗ್ರಾಮದಲ್ಲಿ ಬಿಗುವಿನ ವಾತಾವರಣ
ತುಮಕೂರು: ಮನೆ ಮುಂದೆ ಆಟ ಆಡಿಕೊಂಡಿದ್ದ ಮೂರು ವರ್ಷದ ಪುಟ್ಟ ಬಾಲಕನ ಮೇಲೆ ಕಾರು ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕು ಬುಕ್ಕಾಪಟ್ಟಣ ಗ್ರಾಮದ ಸಂತೆ ದಿಬ್ಬ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದಿದೆ.
ಝಕಿಯ ಬಾನು ಸೈಯದ್ ಹುಮರ್ ದಂಪತಿ ಮೂರು ವರ್ಷದ ಬಾಲಕ ಸೈಯದ್ ಹುಜೆಪ್ ಸಾವಿಗೀಡಾದ ಮಗು. ಗುರುವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಪುರ ಗ್ರಾಮದಿಂದ ವೇಗವಾಗಿ ಬಂದ ಟಾಟಾ ಹೈಯರ್ ಕಾರು ಮಗುವಿನ ಮೇಲೆ ಹರಿದ ಪರಿಣಾಮ ಮಗು ಸ್ಥಳದಲ್ಲಿ ಸಾವನ್ನಪ್ಪಿದೆ.
ಅಜ್ಜಿಯ ಮನೆಯಲ್ಲಿದ್ದ ಮಗು
ಬುಕ್ಕಾಪಟ್ಟಣ ಗ್ರಾಮದ ಅಬ್ಬಾಸ್ ರವರ ಮಗಳಾದ ಝಕೀಯ ಬಾನು ಮಧುಗಿರಿ ತಾಲೂಕು ಹೊಸಕೆರೆಗೆ ಕೊಟ್ಟು ಮದುವೆ ಮಾಡಲಾಗಿತ್ತು ದಂಪತಿಗೆ ಇಬ್ಬರು ಮಕ್ಕಳಿದ್ದರು ಮೊಮ್ಮಗ ಸೈಯದ್ ಹುಜೆಪ್ ನನ್ನು ಅಜ್ಜಿ ಮನೆಯಲ್ಲಿ ಬಿಟ್ಟು ಹೋಗಿದ್ದ ದಂಪತಿಗೆ ಮಗುವಿನ ಸಾವು ಕಂಗಾಲಾಗುವಂತೆ ಮಾಡಿದೆ, ಕಾರಿನ ಚಾಲಕ ಕಾರು ನಿಲ್ಲಿಸದೆ ಕಾರನ್ನು ತೆಗೆದುಕೊಂಡು ಪರಾರಿ ಯಾಗಿದ್ದು ಸ್ಥಳದಲ್ಲಿ ಬಿಡುವಿನ ವಾತಾವರಣ ಉಂಟಾಗಿತ್ತು , ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಕ್ಕಾಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳು ಮುಖ್ಯರಸ್ತೆಯಲ್ಲಿ ಕಳ್ಳತನ ಪ್ರಕರಣಗಳು ಪದೇಪದೇ ದಾಖಲಾಗುತ್ತಿದ್ದರು ಗ್ರಾಮ ಪಂಚಾಯಿತಿ ಗ್ರಾಮದ ಸೂಕ್ಷ್ಮ ಪ್ರದೇಶಗಳ ಬಳಿ ಸಿಸಿಟಿವಿಗಳನ್ನು ಅಳವಡಿಸುವಲ್ಲಿ ನಿರ್ಲಕ್ಷ್ಯ ತೋರಿದೆ ಇದರಿಂದಾಗಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು ಇನ್ನಾದರೂ ಗ್ರಾಮ ಪಂಚಾಯಿತಿ ಆಯ್ದ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು ಎಂದು ಪೊಲೀಸ್ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net