ನಿವೃತ್ತ ಪ್ರಾಂಶುಪಾಲೆ ಸುಧಾಮಣಿ ಮಾತನಾಡಿ, ಋಣ ತೀರಿಸಲಾಗದ್ದು ಯಾವುದಾದರೂ ಇದ್ದರೆ ಅದು ಗುರುವಿನ ಋಣ. ಸಮಾಜಕ್ಕೆ ಉತ್ತಮ ವ್ಯಕ್ತಿಯಾಗಿ ಬಾಳಿದರೆ ಶಿಷ್ಯ ತನ್ನ ಗುರುವಿಗೆ ಕೊಡುವ ಗುರುದಕ್ಷಿಣೆ ಎಂದರು. ಈ ವೇಳೆ ತಮಗೆ ವಿದ್ಯೆ ಕಲಿಸಿದ ಶಾರದಾ ಆನಂದ್ ವಾಡೇಕರ್, ಸೀತಮ್ಮ, ರಾಮಯ್ಯ, ಸಿ.ಕುಸುಮ, ರಂಗಪ್ಪ, ಕೋಮಲಾ ಹಾಗೂ ಸೈನಿಕ ದಿವಂಗತ ಬಸವೇಗೌಡರ ಪತ್ನಿ ಸವಿತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಹಳೇ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಗ್ರಾಮ ದೇವತೆ ಹೊನ್ನಾದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ತಮ್ಮ ಶಿಕ್ಷಕರಿಗೆ ಜಯಘೋಷ ಹಾಕುತ್ತಾ ವೇದಿಕೆಗೆ ಕರೆತರಲಾಯಿತು.