"ಹತ್ತು, ನೂರು ರೂಪಾಯಿ ನೀಡುವಿರೋ ಗೊತ್ತಿಲ್ಲ. ಮಠವನ್ನು ಪೋಷಿಸಿದಂತೆ ಗುರುಭವನಕ್ಕೂ ನಿಮ್ಮ ಸೇವೆಯಿರಲಿ. ಬೇಡುವಾಗ ಬಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ ಎಂದು ಹಿರಿಯರು ಹೇಳಿದ್ದಾರೆ. ಅದೇ ರೀತಿ ನಾನು ನಿಮ್ಮ ಬಳಿ ಉಪಮುಖ್ಯಮಂತ್ರಿಯಾಗಿ ಮನವಿ ಮಾಡುತ್ತಿಲ್ಲ. ಅಜ್ಜನ ಅನುಯಾಯಿಯಾಗಿ, ಭಕ್ತನಾಗಿ ನಿಮ್ಮ ಸೇವೆ ಈ ಮಠಕ್ಕೆ ಅವಶ್ಯವಾಗಿದೆ. ಕೈ ತುಂಬಿ ದಾನ ಮಾಡಿ ಗುರುಭವನ ಕಟ್ಟಲು ಕೈ ಜೋಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು" ಎಂದರು.