ರಾಜ್ಯದಲ್ಲಿಯೇ ಅತೀ ಹೆಚ್ಚು ಕುರಿ, ಮೇಕೆ ಸಾಕುವ ತುಮಕೂರು ಜಿಲ್ಲೆ
ಕಿಟ್ ಲಭ್ಯವಿದ್ದರೂ ಡಿಸಿಎಂ ಕಾದಿರುವ ತುಮುಲ್
ಕಿಟ್ ವಿತರಣೆಗೆ ವಾರದ ಗಡುವು ನೀಡಿದ್ದ ಪರಮೇಶ್ವರ
ತುಮಕೂರು: ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಬರದ ರಿಯಲ್ಎ ಫೆಕ್ಟ್ ಜಾನುವಾರು ಹಾಗೂ ಅದನ್ನು ನಂಬಿರುವ ರೈತರ ಬದುಕಿನ ಮೇಲೂ ಪ್ರಭಾವ ಬೀರುವುದನ್ನು ಕಡಿಮೆಮಾಡಲು 1.33ಲಕ್ಷ ರೈತರಿಗೆ ನೀಡಲು ಉದ್ದೇಶಿಸಿರುವ ಮೇವು ಕಿಟ್ ನೀಡಲು ಜಿಲ್ಲಾಡಳಿತ ತಡಮಾಡುತ್ತಿದೆ.
ಜು.17ರಂದು ಜಿಪಂ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣೆ ಸಭೆಯಲ್ಲಿ ಕಂದಾಯ ಖಾತೆ ಹೊಂದಿರುವ ಡಿಸಿಎಂ ಡಾ.ಜಿ.ಪರಮೇಶ್ವರ ಮುಂದಿನ ಒಂದು ವಾರದಲ್ಲಿ ಮೇವು ಕಿಟ್ ವಿತರಿಸಬೇಕು ಎಂದು ನೀಡಿದ್ದ ಸೂಚನೆಗೂ ಬೆಲೆ ಸಿಕ್ಕಿಲ್ಲ. ಸಭೆ ನಡೆದು 22 ದಿನವಾದರೂ ಮೇವು ಕಿಟ್ ನೀಡಲು ಪಶುಸಂಗೋಪಲಾ ಇಲಾಖೆ ಹಾಗೂ ತುಮುಲ್ ಮುಂದಾಗಿಲ್ಲ.
ಜಿಲ್ಲೆಯಲ್ಲಿ 1.33ಲಕ್ಷ ರೈತರು 22.44 ಲಕ್ಷ ಜಾನುವಾರು, ಕುರಿ, ಮೇಕೆ ಸಾಕಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದು ಬರದಿಂದ ಮೇವು ಒದಗಿಸುವುದು ಕಷ್ಟವಾಗಲಿದೆ ಹಾಗಾಗಿ, ಬೀಳುತ್ತಿರುವ ತುಂತುರು ಮಳೆಯ ನೆರವಿನಿಂದ ನೀರಾವರಿ ಬಳಸಿಕೊಂಡು ಮೇವು ಬೆಳೆಯಲು ಅನುಕೂಲವಾಗುವಂತೆ ತಲಾ 10ಕೆಜಿ ಮೇವು ಬೀಜ ವಿತರಿಸಲು ಯೋಜನೆ ರೂಪಿಸಲಾಗಿದೆ.
ಜಿಲ್ಲೆಯಲ್ಲಿ ಮೇವು ಬೆಳೆದುಕೊಳ್ಳಲು ಸಿದ್ಧರಿರುವ ರೈತರಿಗೆ ಸುಧಾರಿತ ಮೇವು ಬೀಜ ನೀಡಲು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿರುವುದು ಅನ್ನದಾತರಲ್ಲಿ ಆಘಾತ ತಂದಿದೆ. ಜಿಲ್ಲೆಯ ಅಲ್ಲಲ್ಲಿ ಸಲ್ಪಸ್ವಲ್ಪ ಮಳೆಯಾಗುತ್ತಿದ್ದು ಈ ಹದದಲ್ಲಿ ಬೀಜ ಬಿತ್ತನೆ ಸಾಧ್ಯವಿದೆ ಆದರೆ, ಸರ್ಕಾರದಿಂದ ಮೇವು ಬೀಜದ ಕಿಟ್ಗಾಗಿ ರೈತರು ಚಾತಕ ಪಯಂತೆ ಕಾಯುವಂತಾಗಿದೆ.
ಪಶುಸಂಗೋಪನಾ ಇಲಾಖೆ ಜಿಲ್ಲೆಗೆ ಅಗತ್ಯವಿರುವ 2 ಲಕ್ಷ ಮಿನಿ ಕಿಟ್ಗಳಿಗೆ ಇಲಾಖೆ ಆಯುಕ್ತರಿಗೆ ಕಳೆದ ಮೇ ತಿಂಗಳಿನಲ್ಲಿಯೇ ಬೇಡಿಕೆ ಸಲ್ಲಿಸಿದ್ದರೂ ಈವರೆಗೂ ಅನುಮೋದನೆ ಸಿಕ್ಕಿಲ್ಲ, ಇನ್ನೂ ತುಮುಲ್ ವತಿಯಿಂದ 2000 ಕ್ವಿಂಟಾಲ್ ಮೂವು ಬೀಜ ನೀಡಲು ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು ಕಾಲಹರಣವಾಗುತ್ತಿದೆ. ಹಾಗಾಗಿ, ಭವಿಷ್ಯದಲ್ಲಿ ರೈತರು ಮೇವಿಗೆ ಪರದಾಡುವ ಸ್ಥಿತಿ ಎದುರಾಗಲಿದೆ.
ಜಿಲ್ಲೆಯಲ್ಲಿರುವ ಜಾನುವಾರು, ಮೇವು ಪ್ರಮಾಣ
ತಾಲೂಕು ಜಾನುವಾರು(ಹಸು,ಎಮ್ಮೆ) ಕುರಿ, ಮೇಕೆ ವಾರಕ್ಕೆ ಬೇಕಾಗುವ ಮೇವು
ಚಿ.ನಾ.ಹಳ್ಳಿ 42844 195184 2483
ಗುಬ್ಬಿ 46993 87849 2281
ಕೊರಟಗೆರೆ 37197 105514 2271
ಕುಣಿಗಲ್ 59261 110346 2875
ಮಧುಗಿರಿ 42535 214692 2538
ಪಾವಗಡ 38253 310443 2693
ಶಿರಾ 39930 532883 35442
ತಿಪಟೂರು 46604 87120 2262
ತುಮಕೂರು 53621 66276 2484
ತುರುವೇಕೆರೆ 51570 75448 2430
ಒಟ್ಟು 458808 1785755 25520
ಮೇವು ಬೀಜದ ಮಿನಿಕಿಟ್ಗೆ ಇರುವ ಬೇಡಿಕೆ:
ತಾಲೂಕು ಜಮೀನು ಇರುವ ರೈತರು ಮೇವು ಕಿಟ್ ಬೇಡಿಕೆ
ಚಿ.ನಾ.ಹಳ್ಳಿ 16737 33474
ಗುಬ್ಬಿ 18677 37354
ಕೊರಟಗೆರೆ 10151 20302
ಕುಣಿಗಲ್ 17731 35462
ಮಧುಗಿರಿ 12450 24900
ಪಾವಗಡ 6724 13448
ಶಿರಾ 11840 23680
ತಿಪಟೂರು 7694 15388
ತುಮಕೂರು 16286 32572
ತುರುವೇಕೆರೆ 14961 29922
ಒಟ್ಟು 133251 266502(13325ಕ್ವಿಂಟಾಲ್)
ಸಚಿವರ ಕಾದು ಕುಳಿತ ಜಿಲ್ಲಾಡಳಿತ!?
ಪ್ರಸ್ತುತ ಜಿಲ್ಲೆಯಲ್ಲಿ 1 ಲಕ್ಷ ಕಿಟ್ ವಿತರಣೆಗೆ ತುಮುಲ್ ಟೆಂಡರ್ ಪ್ರಕ್ರಿಯೆ ಮುಗಿಸಿದ್ದು ಗುರುವಾರದಿಂದ ಜಿಲ್ಲೆಗೆ ಕಿಟ್ಗಳ ಸರಬರಾಜು ಆರಂಭವಾಗಿದೆ. ಆದರೆ, ರೈತರಿಗೆ ವಿತರಿಸಲು ಸಮಾರಂಭ ಮಾಡಲು ಜಿಲ್ಲಾಡಳಿತ ಕಾಲಹರಣ ಮಾಡುತ್ತಿರುವುದು ಅಚ್ಚರಿ ತಂದಿದೆ. ವಿದೇಶ ಪ್ರವಾಸಕ್ಕೆ ತೆರಳಿರುವ ಡಿಸಿಎಂ ಡಾ.ಜಿ.ಪರಮೇಶ್ವರ ಭಾನುವಾರ ವಾಪಸಾಗಲಿದ್ದು ಅವರು ಬಂದು ಸಮಾರಂಭ ನಡೆಸಿ ವಿತರಿಸಲು ಜಿಲ್ಲಾಡಳಿತ ಚಿಂತಿಸಿರುವುದು ರೈತ ಸಮೂಹಕ್ಕೆ ಬೇಸರ ಮೂಡಿಸಿದೆ.
ಬರ ಪರಿಸ್ಥಿತಿಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಜಿಲ್ಲಾಡಳಿತ ಸಮಾರಂಭಕ್ಕೆ ಒಂದು ವಾರ ಕಾಲಹರಣ ಮಾಡುವುದು ಮೇವು ತಂದೊಡ್ಡಲಿದೆ. ಬರ ಪರಿಸ್ಥಿತಿಯಲ್ಲಿ ಭೂಮಿಯಲ್ಲಿ ತನುವು ಇರುವುದು ಬೀಜ ಮೊಳಕೆಯೊಡೆಯಲು ಅತ್ಯವಶ್ಯಕವಾಗಿದ್ದು ಜಿಲ್ಲಾಡಳಿತ ಪ್ರತಿಷ್ಠೆಗೆ ಬಿದ್ದು ಕಾಲಹರಣ ಮಾಡುವುದು ಬಿತ್ತನೆ ವಿಳಂಬಕ್ಕೆ ಕಾರಣವಾಗಲಿದೆ.
ಬರ ಘೋಷಣೆಯಾಗುವವರೆಗೂ ಪಶುಪಾಲನಾ ಇಲಾಖೆ ವತಿಯಿಂದ ಮೇವು ಕಿಟ್ ವಿತರಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ, ಕೆಎಂಎ್ ವತಿಯಿಂದಲೇ ಜಿಲ್ಲೆಯ ರೈತರಿಗೆ 1 ಲಕ್ಷ ಮೇವು ಕಿಟ್ ನೀಡಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಸರಬರಾಜು ಆರಂಭವಾಗಿದ್ದು ಡಿಸಿಎಂ ಅವರಿಂದ ಸಾಂಕೇತಿಕವಾಗಿ ಚಾಲನೆಕೊಡಿಸಿ ಮೂರು ಉಪವಿಭಾಗದಲ್ಲಿಯೂ ವಿತರಿಸಲಾಗುವುದು.