ಇಲಾಖೆಯ ಮುಖ್ಯಪಶುವೈದ್ಯಾದಿಕಾರಿ ಕಾಂತರಾಜು ಮಾತನಾಡಿ, ತಾಲೂಕಿನಲ್ಲಿ 5 ಪಶು ಆಸ್ಪತ್ರೆಗಳಿದ್ದು, 10 ಪಶುಚಿಕಿತ್ಸಾಲಯ, 9 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ, 1 ಸಂಚಾರಿ ಪಶು ಚಿಕಿತ್ಸಾಲಯಗಳಿವೆ. ಒಟ್ಟು 88 ಮಂಜೂರಾದ ಹುದ್ದೆಗಳಿದ್ದು, ಇದರಲ್ಲಿ 34 ಹುದ್ದೆಗಳು ಭರ್ತಿಯಾಗಿವೆ. ಇನ್ನು 54 ಹುದ್ದೆಗಳು ಖಾಲಿಯಿವೆ. ತಾಲೂಕಿನಲ್ಲಿ ಒಟ್ಟು 57090 ದನ, ಎಮ್ಮೆಗಳಿದ್ದು, 2,31,245 ಕುರಿ ಮೇಕೆಗಳಿವೆ. ಒಟ್ಟು 24 ಆಸ್ಪತ್ರೆಗಳಲ್ಲಿ 18 ಸ್ವಂತ ಕಟ್ಟಡಗಳನ್ನೊಳಗೊಂಡಿದೆ ಎಂದು ಮಾಹಿತಿ ನೀಡಿದರು.