ವಾಘಾ ಗಡಿಯಲ್ಲಿ ಆರಂಭವಾಗುವ ಕಥಾನಕ ಕರಾಚಿ, ಲಾಹೋರ್, ದೆಹಲಿ, ಮುತ್ತುಪ್ಪಾಡಿ, ಕ್ಯಾಲಿಫೋರ್ನಿಯಾ, ಬರ್ಲಿನ್ ಗಳಲ್ಲಿ ಬೆಳೆದು ಮತ್ತೆ ವಾಘಾದಲ್ಲಿ ಕೊನೆಯಾಗುವ ಪಯಣ ರೋಚಕತೆಯನ್ನು ಒಳಗೊಂಡಿದೆ. ದೇಶ ಇಬ್ಬಾಗವಾದಂದಿನಿಂದ ಸುವರ್ಣ ಸ್ವಾತಂತ್ರ್ಯದ ಓಟ ನಾಟಕ ದೃಶ್ಯ ಉತ್ಸವದವರೆಗಿನ ಪ್ರಮುಖ ಘಟನೆಗಳನ್ನು ಆರ್ಥಿಕ, ಧಾರ್ಮಿಕ, ಸಾಮಾಜಿಕ, ವಸ್ತು ಸಾಂಗತ್ಯದಲ್ಲಿ ಧಾರಣ ಮಾಡಿಕೊಂಡ ಭಾರತದ ಬದುಕಿನ ಅನುಭವ ಕಥನ ಈ ಪ್ರಸ್ತುತಿ.