ಜಿಲ್ಲೆಯಲ್ಲಿ ಪೋಡಿ ಪ್ರಕರಣಗಳ ಇತ್ಯರ್ಥಕ್ಕೆ ಹಿಡಿದ ಗ್ರಹಣ!

ತುಮಕೂರು ಜಿಲ್ಲಾಧಿಕಾರಿ ಕಚೇರಿ
ತುಮಕೂರು ಜಿಲ್ಲಾಧಿಕಾರಿ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿಯೇ ಅತೀ ಹೆಚ್ಚು ಅರ್ಜಿ ಬಾಕಿ
  • ಶೇ.10ರಷ್ಟು ವಿಲೇವಾರಿಯೂ ಇಲ್ಲ
  • ಕಂದಾಯ ಇಲಾಖೆಗೆ ರೈತರ ನಿತ್ಯ ಅಲೆದಾಟ
ತುಮಕೂರು: ಜಿಲ್ಲೆಯಲ್ಲಿ ಭೂಮಾಪನ ಹಾಗೂ ಸರ್ವೆ ಇಲಾಖೆಯಲ್ಲಿ ಅರ್ಜಿ ವಿಲೇವಾರಿಗೆ ಗ್ರಹಣ ಬಡಿದಿದ್ದು ರಾಜ್ಯದಲ್ಲಿಯೇ ಅತೀ ಹೆಚ್ಚು ಪೋಡಿ ಪ್ರಕರಣದ ಅರ್ಜಿಗಳ ವಿಲೇವಾರಿ ಬಾಕಿ ಉಳಿಸಿಕೊಂಡಿರುವ ಕುಖ್ಯಾತಿಗೆ ತುಮಕೂರು ಗುರಿಯಾಗಿದೆ.
ರಾಜ್ಯದಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿರುವ 2.24 ಲಕ್ಷ ಪೋಡಿ ಪ್ರಕರಣಗಳಲ್ಲಿ ತುಮಕೂರು ಜಿಲ್ಲೆಯಲ್ಲಿಯೇ 24157 ಅರ್ಜಿಗಳು ಕಂದಾಯ ಮತ್ತು ಭೂಮಾಪಮನ ಶಾಖೆಯಲ್ಲಿ ಧೂಳು ತಿನ್ನುತ್ತಿವೆ. ತುಮಕೂರು ಜಿಲ್ಲೆಯನ್ನು ಬಿಟ್ಟರೆ 2ನೇ ಸ್ಥಾನದಲ್ಲಿ ದಣ ಕನ್ನಡ ಜಿಲ್ಲೆಯಿದೆ. ಮಂಡ್ಯ, ಮೈಸೂರು, ಉಡುಪಿ, ಚಿತ್ರದುರ್ಗ, ದಾವಣಗೆರೆ, ರಾಯಚೂರು ಜಿಲ್ಲೆಗಳಲ್ಲಿ 10 ಸಾವಿರ ಅರ್ಜಿಗಳನ್ನು ಬಾಕಿ ಉಳಿಸಿಕೊಂಡು ನಂತರದ ಸ್ಥಾನದಲ್ಲಿವೆ.
ತುಮಕೂರು ಜಿಲ್ಲೆಯ 10 ತಾಲೂಕುಗಳಲ್ಲಿಯೂ ದಾಖಲಾತಿಗಳ ಸಮಸ್ಯೆ ಎದುರಿಸುತ್ತಿರುವ ರೈತರು ಕಳೆದ ಅಕ್ಟೋಬರ್​ ವರೆಗೂ 26457 ಅರ್ಜಿಗಳನ್ನು ಸಲ್ಲಿಸಿದ್ದಾರೆ, ಆದರೆ, ಕಂದಾಯ ಇಲಾಖೆಗೆ ಈವರೆಗೂ ವಿಲೇವಾರಿ ಮಾಡಲು ಸಾಧ್ಯವಾಗಿರುವುದು ಕೇವಲ 2300 ಅರ್ಜಿಗಳು ಮಾತ್ರ, ಇನ್ನೂ 24157 ಅರ್ಜಿಗಳಿಗೆ ಮುಕ್ತಿ ಸಿಗುವ ಲಕ್ಷಣಗಳೇ ಇಲ್ಲ.
ಪೋಡಿ ಅರ್ಜಿಗಳ ವಿಲೇವಾರಿ ಮಾಡಲು ಅರ್ಜಿ ಸಲ್ಲಿಸಿದ ದಿನದಿಂದ ಸರಾಸರಿ 37 ದಿನ ಹಾಗೂ ಭೂಮಾಪಕರಿಗೆ ಹಂಚಿಕೆಯಾದ ದಿನದಿಂದ 23 ದಿನಗಳಲ್ಲಿ ವಿಲೇವಾರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಾಡಲಾಗುತ್ತಿದೆ ಆದರೆ, ತುಮಕೂರು ಜಿಲ್ಲೆಯಲ್ಲಿ ಸಲ್ಲಿಕೆಯಾಗುವ ಅರ್ಜಿ ವಿಲೇವಾರಿಗೆ ರಾಜ್ಯದಲ್ಲಿಯೇ ಗರಿಷ್ಟ 49 ದಿನ ತೆಗೆದುಕೊಳ್ಳಲಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ಮೊಜಿಣಿ ತಂತ್ರಾಂಶದಲ್ಲಿ ವಿವಿಧ ರೀತಿಯ 26457 ಪೋಡಿ ಪ್ರಕರಣಗಳು ಬಾಕಿ ಉಳಿದಿದ್ದು ಪಹಣಿ ತಿದ್ದುಪಡಿಗಾಗಿ 7622 ಅರ್ಜಿಗಳು ಕಂದಾಯ ಶಾಖೆಯಲ್ಲಿ ಕುಳಿತಿವೆ, ಇನ್ನುಳಿದ 16535 ಅರ್ಜಿಗಳು ಭೂಮಾಪನ ಶಾಖೆಯಲ್ಲಿಯೇ ಕೊಳೆಯುತ್ತಿವೆ. ಮಂಜೂರಿಯಾದ ಜಮೀನುಗಳಿಗೆ ಅಳತೆ ಕುರಿತು ದರಖಾಸ್ತು ಪೋಡಿ ಅಭಿಯಾಮ ಮತ್ತು ಖಾಸಗಿ ಜಮೀನುಗಳಲ್ಲಿ ಪೋಡಿ ಅಳತೆ ಕುರಿತು ಲಭ್ಯ ಭೂಮಾಪಕರನ್ನು ಬಳಸಿಕೊಂಡು ಅಳತೆ ಮಾಡಲಾಗುತ್ತಿದೆ ಎಂಬುದು ಅಧಿಕಾರಿಗಳ ಹೇಳಿಕೆಗೆ ಸೀಮಿತವಾಗಿದೆ.
​...
ವಿಡಿಯೋ ಸಂವಾದ ಮತ್ತು ವಿಭಾಗವಾರು ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ, ಹೆಚ್ಚಿನ ಪ್ರಗತಿ ಸಾಧಿಸಲು ಸೂಕ್ತ ಮಾರ್ಗದರ್ಶನ ಹಾಗೂ ಅಗತ್ಯವಾದ ಸೂಚನೆಗಳನ್ನು ನೀಡಲಾಗುತ್ತಿದೆ. ಹೆಚ್ಚು ಪ್ರಕರಣ ಬಾಕಿ ಇರುವ ತಾಲೂಕುಗಳಿಗೆ ಕಡಿಮೆ ಪ್ರಕರಣ ಬಾಕಿ ಇರುವ ತಾಲೂಕುಗಳಲ್ಲಿರುವ ಭೂಮಾಪಕದನ್ನು ನಿಯೋಜಿಸಿ ಬಾಕಿ ಅರ್ಜಿಗಳ ವಿಲೇವಾರಿಗೆ ಕ್ರಮಕೈಗೊಳ್ಳಲಾಗಿದೆ.
ಕೃಷ್ಣಬೈರೇಗೌಡ
ಕಂದಾಯ ಸಚಿವ
ಹೊಸ ಪೋಡಿ ತಡೆಯಲು ತೆಗೆದುಕೊಂಡಿರುವ ಕ್ರಮಗಳು..
  • *ದರಖಾಸ್ತು ಪೋಡಿಯಲ್ಲಿ ನಮೂನೆ 1ರಿಂದ 5 ಅರ್ಜಿಯ ಆನ್​ಲೈನ್​ ನಿರ್ವಹಣೆ
  • *ದರಖಾಸ್ತು ಪೋಡಿ, 11ಇ ಹದ್ದುಬಸ್ತು ಅರ್ಜಿ ವಿಲೇವಾರಿಗೆ ಪರವಾನಗಿ ಭೂಮಾಪಕರ ಬಳಕೆ
  • *ಮೋಜಿಣಿ ತಂತ್ರಾಂಶದ ಮೂಲಕವೇ ಅರ್ಜಿ ಸಲ್ಲಿಕೆ, ಹಂಚಿಕೆ ಮೂಲಕ ಶ್ರೀ ವಿಲೇವಾರಿ
  • *ಪಹಣಿ ತಿದ್ದುಪಡಿಗೆ ಹೋಬಳಿ ಕೇಂದ್ರದಲ್ಲಿ ಕಂದಾಯ ಅದಾಲತ್​
  • *ಕಾಲಕಾಲಕ್ಕೆ ವಿಡಿಯೋ ಸಂವಾದ ಮತ್ತು ವಿಭಾಗವಾರು ಸಭೆ ಮೂಲಕ ಸೂಚನೆ, ಮಾರ್ಗದರ್ಶನ
  • *ಪ್ರಕರಣ ಕಡಿಮೆ ಇರುವ ತಾಲೂಕುಗಳಿಗೆ ಅಕ್ಕಪಕ್ಕದ ತಾಲೂಕುಗಳ ಹೆಚ್ಚುವರಿ ಹೊಣೆ
ಫೋಡಿ ಪ್ರಕರಣ ಬಾಕಿ ಇರುವ ಪ್ರಮುಖ ಜಿಲ್ಲೆಗಳು..
ಜಿಲ್ಲೆ ಸಲ್ಲಿಕೆಯಾದ ಅರ್ಜಿಗಳು ವಿಲೇವಾರಿ ಬಾಕಿ
ತುಮಕೂರು 26457 2300 24157
ದಣಕನ್ನಡ 18058 1057 17001
ಮಂಡ್ಯ 16665 2026 14639
ಮೈಸೂರು 12770 2150 10620
ದಾವಣಗೆರೆ 12849 2385 10464
ಉಡುಪಿ 11791 1526 10265
ರಾಯಚೂರು 12533 2393 10140
ಒಟ್ಟು(ರಾಜ್ಯದಲ್ಲಿ) 2,77,933 35709 242224
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net