ವಿದ್ಯಾರ್ಥಿ ಸಂಘಟನೆ ನಿಷೇಧಕ್ಕೆ ಎಐಡಿಎಸ್​ಒ ಖಂಡನೆ

ಲಕ್ಕಪ್ಪ
ಲಕ್ಕಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಪಿಯು, ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ
  • ರಾಜಕೀಯ ಪಕ್ಷಗಳಿಗೆ ಕಡಿವಾಣ ನೆಪ
  • ಕಾಲೇಜು ಕ್ಯಾಂಪಸ್​ ಒಳಗೆ ವಿದ್ಯಾರ್ಥಿ ಸಂಘಟನೆಗಳ ಎಂಟ್ರಿಗೆ ತಡೆ
ತುಮಕೂರು:

ಪಿಯುಸಿ ಹಾಗೂ ಪದವಿ ಕಾಲೇಜುಗಳಲ್ಲಿ ನಡೆಯಲಿರುವ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ನಿಷೇಧಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಅಖಿಲ ಭಾರತ ಡೆಮಾಕ್ರಟಿಕ್​ ಸ್ಟೂಡೆಂಟ್ಸ್​ ಆರ್ಗನೈಸೇಷನ್​ (ಎಐಡಿಎಸ್​ಒ) ತೀವ್ರವಾಗಿ ಖಂಡಿಸಿದೆ.

ವಿದ್ಯಾರ್ಥಿ ಸಂ

ಟನೆಗಳನ್ನು ಕಾಲೇಜುಗಳ ಕ್ಯಾಂಪಸ್​ ಒಳಗೆ ಬರದಂತೆ ತಡೆಯುವ ಸರ್ಕಾರದ ಆಲೋಚನೆ ನಿಜಕ್ಕು ಅಪೇಕ್ಷನಿಯವಲ್ಲ. ರಾಜ್ಯ ಸರ್ಕಾರವು ರಾಜಕೀಯ ಪಕ್ಷಗಳಿಗೆ ಕಡಿವಾಣ ಹಾಕುವ ನೆಪದಲ್ಲಿ, ರಾಜಕೀಯದಿಂದಲೇ ವಿದ್ಯಾರ್ಥಿಗಳನ್ನು ದೂರ ಇರಿಸಲು ನಿರ್ಧರಿಸುವುದು ತಮ್ಮ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ವಿದ್ಯಾರ್ಥಿ ಚಳವಳಿ ಹತ್ತಿಕ್ಕುವ ತಂತ್ರವಾಗಿದೆ. ಕಾಲೇಜಿನ ಸಮಸ್ಯೆಗಳನ್ನು ಬಗೆಹರಿಸುವ ಅಸ್ತ್ರವಾಗಿ ವಿದ್ಯಾರ್ಥಿ ಸಂಘಗಳು ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿ ಸಂ

ಟನೆಗಳನ್ನೇ ನಿಷೇಧಿಸಿದರೆ ವಿದ್ಯಾರ್ಥಿಗಳ ಸಂ

ಟಿತ ಆಂದೋಲನ ಹಿನ್ನಡೆ ಅನುಭವಿಸಲಿದೆ ಎಂದು ಎಐಡಿಎಸ್​ಒ ಅಸಮಾಧಾನ ವ್ಯಕ್ತಪಡಿಸಿದೆ.

ಯಾವುದೇ ವೈಚಾರಿಕತೆಯನ್ನು ಅಳವಡಿಸಿಕೊಳ್ಳದಂತೆ ತಡೆಯುವುದೆಂದರೆ, ವಿದ್ಯಾರ್ಥಿಗಳು ಸರ್ಕಾರ ಮಾಡಿದ್ದನ್ನೆಲ್ಲ ಕುರುಡಾಗಿ ಒಪ್ಪಿಕೊಳ್ಳುವಂತೆ ಮಾಡುವುದಾಗಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಸುಮ್ಮನೆ ಇರಬೇಕೆಂದರೆ ಎಂತಹ ವಿದ್ಯಾರ್ಥಿಗಳನ್ನು ಸರ್ಕಾರವು ಸೃಷ್ಟಿಸಲು ಹೊರಟಿದೆ?. ರಾಜ್ಯ ಸರ್ಕಾರವು ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ನಿರ್ಧರಿಸಿದಾಗ ಎಐಡಿಎಸ್​ಒ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿತ್ತು. ಆದರೆ, ಸರ್ಕಾರದ ಈ ನಿಲುವು ಅತ್ಯಂತ ಆತಂಕಕಾರಿ. ಒಂದೆಡೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ಹೋರಾಟ ಬೆಂಬಲಿಸುತ್ತಿರುವ ಕಾಂಗ್ರೆಸ್​ ಪಕ್ಷ ತನ್ನಡೇ ಆಡಳಿತದಲ್ಲಿ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕಲು ಹೊರಟಿರುವುದು ದುರದೃಷ್ಟಕರ. ಈ ಕೂಡಲೇ ರಾಜ್ಯ ಸರ್ಕಾರ ತನ್ನ ನಿಲುವನ್ನು ಹಿಂಪಡೆಯುವಂತೆ ಎಐಡಿಎಸ್​ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net