ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಶಿರಾ ಹಾಗೂ ಪಾವಗಡ ತಾಲೂಕುಗಳ "ಕೇಂದ್ರ ಪುರಸತ ಯೋಜನೆಗಳ ಪ್ರಗತಿ ಪರಿಶೀಲನಾ(ದಿಶಾ) ಸಭೆ'ಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೇರೆ ಪಕ್ಷದ ಸರ್ಕಾರವಿದ್ದ ಮಾತ್ರಕ್ಕೆ ಕೇಂದ್ರದ ನೀತಿ ವಿರೋಧಿಸುವುದು ಸರಿಯಲ್ಲ, ಕೇಂದ್ರದ ರೂಪಾಯಿ ಎಂದು ವಿಧಾನಸೌಧದಲ್ಲಿ ಬೇರೆ ಕರೆನ್ಸಿ ಪ್ರಿಂಟ್ ಮಾಡಲು ಸಾಧ್ಯವೇ ಎಂದು ರಾಜ್ಯ ಸರ್ಕಾರದ ನಡೆ ಟೀಕಿಸಿದರು.