ಅತ್ಯುತ್ತಮ ಚುನಾವಣಾ ಅಭ್ಯಾಸ ರಾಜ್ಯ ಪ್ರಶಸ್ತಿ

ತುಮಕೂರು ಜಿಲ್ಲಾಧಿಕಾರಿ ಕಚೇರಿ
ತುಮಕೂರು ಜಿಲ್ಲಾಧಿಕಾರಿ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ವಿಎಒ ಎನ್​.ಸಿ.ಭಾಗ್ಯಮ್ಮ, ಅಂಗನವಾಡಿ ಕಾರ್ಯಕರ್ತೆ ಪುಟ್ಟಮಾರಕ್ಕ ಆಯ್ಕೆ
  • ಶುಭಕಲ್ಯಾಣ್​, ಬಿ.ಆರತಿಗೂ ಪ್ರಶಸ್ತಿ
  • 25ರಂದು ಪ್ರಶಸ್ತಿ ಪ್ರದಾನ
ತುಮಕೂರು: ಅತ್ಯುತ್ತಮ ಚುನಾವಣಾ ಕಾರ್ಯನಿರ್ವಹಣೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಕೊರಟಗೆರೆ ತಾಲೂಕು ದುದ್ದನಹಳ್ಳಿ ಮತಗಟ್ಟೆ ಮೇಲ್ವಿಚಾರಕಿ ಗ್ರಾಮಲೆಕ್ಕಾಧಿಕಾರಿ ಎನ್​.ಸಿ.ಭಾಗ್ಯಮ್ಮ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಪುಟ್ಟಮಾರಕ್ಕ ಆಯ್ಕೆಯಾಗಿದ್ದಾರೆ.
ಬೆಂಗಳೂರು ವಿಭಾಗದಲ್ಲಿ ತುಮಕೂರು ಜಿಲ್ಲಾ ಚುನಾವಣಾಧಿಕಾರಿ ಶುಭಕಲ್ಯಾಣ್​, ಸಹಾಯಕ ಮತದಾರರ ನೋಂದಣಾಧಿಕಾರಿ ಗುಬ್ಬಿ ತಹಸೀಲ್ದಾರ್​ ಬಿ.ಆರತಿ ಹಾಗೂ ಅವರೂ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ರಾಜ್ಯದ ಐವರು ಜಿಲ್ಲಾ ಚುನಾವಣಾಧಿಕಾರಿಗಳು, ಐವರು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು, ಐವರು ಮತದಾರರ ನೋಂದಣಿ ಅಧಿಕಾರಿಗಳು, ಐವರು ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಹತ್ತು ಜಿಲ್ಲೆಯ ಬಿಎಲ್​ಒ ಮೇಲ್ವಿಚಾರಕರು ಹಾಗೂ ವಿವಿಧ ಜಿಲ್ಲೆಗಳ 34 ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಜನವರಿ 25ರಂದು ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಭವನ(ಟೌನ್​ಹಾಲ್​)ದಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪ್ರಶಸ್ತಿಗಳನ್ನು ನೀಡಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net