ಡಬಲ್ಸ್ ಪ್ರಶಸ್ತಿ ಸನಿಹಕ್ಕೆ ಸಿಹಿ-ಹೇಮಶ್ರೀ

ಡಬಲ್ಸ್​ನಲ್ಲಿ ಶಾನ್ವಿ/ಶಾಂಭವಿ ಶರ್ಮ ಜೋಡಿ ಮೋಡಿ
ಡಬಲ್ಸ್​ನಲ್ಲಿ ಶಾನ್ವಿ/ಶಾಂಭವಿ ಶರ್ಮ ಜೋಡಿ ಮೋಡಿ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಕಿರಿಯರ ranking ಬ್ಯಾಡ್ಮಿಂಟನ್
  • ಮನ್ವಿತ್-ವೈಭವ್ ಜೋಡಿ ಗೆಲುವಿನ ಓಟ
  • ಜ್ಯೋತ್ಸ್ನಾ-ಕ್ರಿಶಾ ಜೋಡಿ ಫೈನಲ್ ಗೆ
ತುಮಕೂರು: ರಾಜ್ಯ ಕಿರಿಯರ ranking​ ಬ್ಯಾಡ್ಮಿಂಟನ್​ 13 ವಯೋಮಾನದ ಬಾಲಕಿಯರ ಡಬಲ್ಸ್​ ಉಪಾಂತ್ಯದಲ್ಲಿ ಸಿಹಿ ಆದರ್ಶ್​/ಕೆ.ಹೇಮಶ್ರೀ ಜೋಡಿ 15-11, 15-13 ರಿಂದ ಕೆ.ಎ.ಹನ್ವಿತಾ/ಸ್ತುತಿ ಎಸ್​.ಶೆಟ್ಟಿ ವಿರುದ್ಧ, ಶಾನ್ವಿ/ಶಾಂಭವಿ ಶರ್ಮ ಜೋಡಿ 15-5, 15-13 ರಿಂದ ಹೇಶಾ ಸಾಯಿ/ಆರ್​.ಖುಷಿ ವಿರುದ್ಧ ಜಯಗಳಿಸಿ ಫೈನಲ್​ಗೆ ಅರ್ಹತೆ ಪಡೆಯಿತು.
ತುಮಕೂರು ಬ್ಯಾಡ್ಮಿಂಟನ್​ ಅಕಾಡೆಮಿಯಲ್ಲಿ ನಡೆಯುತ್ತಿರುವ ರಾಜ್ಯ ಕಿರಿಯರ ranking​​ ಬ್ಯಾಡ್ಮಿಂಟನ್​ ಅಂಡರ್​ 13 ಬಾಲಕರ ಡಬಲ್ಸ್​ನಲ್ಲಿ ಮನ್ವಿತ್​ ಮನಿಬೆಟ್ಟು ಆದೇಶ್​/ವೈಭವ್​ರಾವ್​ 15-4, 15-9 ರಿಂದ ಆಶರ್​ ರ್ನಾಂಡಿಸ್​/ಮೊಹಮ್ಮದ್​ ಸಾದ್​ ಸಾಜಿದ್​ರನ್ನು ಜ್ಞಾನ ರಿಶಿಕ್​/ಕೌಶಿಕ್​ 15-7, 15-7 ರಿಂದ ಸಮಕ್ಷ ಕೊಟ್ಯಾನ್​/ಇ.ಎಸ್​.ಸಿದ್ದಾರ್ಥ್​ರನ್ನು ಮಣಿಸಿ ಫೈನಲ್​ ಪ್ರವೇಶಿಸಿದರು.
11 ವಯೋಮಾನ ಬಾಲಕರ ಡಬಲ್ಸ್​ನಲ್ಲಿ ನಿಹಾನ್​ ಮಂದಣ್ಣ/ಸಾತ್ವಿಕ್​ ಶ್ರೀಧರ್​ ರೆಡ್ಡಿ ಜೋಡಿ ಹಾಗೂ ಅಥರ್ವ ಸಾಹೋ/ರಿಯಾನ್ಷ ರಿಶಿಕ್​ ಸಾಯಿ ಯಗಂಟಿ ಫೈನಲ್​ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಬಾಲಕಿಯರ ವಿಭಾಗದ ಫೈನಲ್​ನಲ್ಲಿ ಅರುಷಿ ವೈಣವಿ/ಸ್ವರ ಎಸ್​.ಭಾರದ್ವಾಜ್​ ಹಾಗೂ ಜ್ಯೋತ್ಸ್ನಾ ವಿನೋದ್​/ಕ್ರಿಶಾ ಸಿಂಗ್​ ದೇವೊ ಮುಖಾಮುಖಿಯಾಗಲಿದ್ದಾರೆ. ಶನಿವಾರ ಬೆಳಗ್ಗೆ 9ಕ್ಕೆ ಸಿಂಗಲ್ಸ್​ ಫೈನಲ್ ನಂತರ ಡಬಲ್ಸ್​ ಫೈನಲ್​ ಪಂದ್ಯಗಳು ನಡೆಯಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net