ವೈಭವ್, ಸಿಹಿ ಪ್ರಶಸ್ತಿ ಸುತ್ತಿಗೆ: 13 ವಯೋಮಾನದೊಳಗಿನ ಬಾಲಕರ ವಿಭಾಗದ ಸೆಮಿಫೈನಲ್ ಅಗ್ರಶ್ರೇಯಾಂಕಿತ ವೈಭವ್ ರಾವ್ 15-11, 15-3 ರಿಂದ ಅರ್ಜುನ್ ಅರಳ್ಗುಂಡಗಿ ವಿರುದ್ಧ ನೇರ ಸೆಟ್ಗಳ ಜಯಗಳಿಸಿ ಫೈನಲ್ಗೆ ಅರ್ಹತೆ ಪಡೆದರು. ಮತ್ತೊಂದು ಸೆಮಿಫೈನಲ್ನಲ್ಲಿ ಜ್ಞಾನ ರಿಶಿಕ್ 15-13, 16-14 ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ದಕ್ಷ ರಘುನಂದ್ ಅಯ್ಯಂಗರ್ರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.