ಹೊಸ ಉದ್ಯಮಗಳತ್ತ ಮುಖಮಾಡಿದ ಜಗತ್ತು

ತುಮಕೂರಿನ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಶ್ರೀ ಸಿದ್ಧಾರ್ಥ ನಿರ್ವಹಣಾ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ "ಎಲೈಸಿಯಾ ಬ್ಯುಸಿನೆಸ್​ ಎಕ್ಸ್​ಪೋ 2026'ಅನ್ನು ಎಂ.ಗೌತಮ್​ ಉದ್ಘಾಟಿಸಿದರು.  ಭಾನುಪ್ರಕಾಶ್​, ಡಾ.ಮಹಾಂತೇಶ್​ ಎಂ. ನಡಕಟ್ಟಿ,  ಅಜ್ಮತ್​ಉಲ್ಲಾ,  ಡಾ.ಪವಿತ್ರಾ, ಡಾ.ಮಮತಾ, ಖಲಂಧರ್​ ಪಾಷ ಇದ್ದರು.
ತುಮಕೂರಿನ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಶ್ರೀ ಸಿದ್ಧಾರ್ಥ ನಿರ್ವಹಣಾ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ "ಎಲೈಸಿಯಾ ಬ್ಯುಸಿನೆಸ್​ ಎಕ್ಸ್​ಪೋ 2026'ಅನ್ನು ಎಂ.ಗೌತಮ್​ ಉದ್ಘಾಟಿಸಿದರು. ಭಾನುಪ್ರಕಾಶ್​, ಡಾ.ಮಹಾಂತೇಶ್​ ಎಂ. ನಡಕಟ್ಟಿ, ಅಜ್ಮತ್​ಉಲ್ಲಾ, ಡಾ.ಪವಿತ್ರಾ, ಡಾ.ಮಮತಾ, ಖಲಂಧರ್​ ಪಾಷ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಿದ್ಧಾರ್ಥ ನಿರ್ವಹಣಾ ಅಧ್ಯಯನ ಕೇಂದ್ರ
  • ಎಲೈಸಿಯಾ ಬ್ಯುಸಿನೆಸ್​ ಎಕ್ಸ್​ಪೋ 2026
  • ಹಿರಿಯ ತಾಂತ್ರಿಕ ಮುಖ್ಯಸ್ಥ ಎಂ.ಗೌತಮ್​
ತುಮಕೂರು: ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ಯೋಚಿಸಿ ಅದನ್ನು ಅನುಷ್ಠಾನಕ್ಕೆ ತರಲು ಸದಾ ಪ್ರಯತ್ನಿಸಿ ಅದು ಸಾಕಾರವಾದ ಮೇಲೆ ಜಗತ್ತು ನಿಮ್ಮೆಡೆಗೆ ನೋಡುತ್ತದೆ ಎಂದು ಜೆಪಿ ಮಾರ್ಗನ್​ ಸಂಸ್ಥೆಯ ಹಿರಿಯ ತಾಂತ್ರಿಕ ಮುಖ್ಯಸ್ಥ ಎಂ.ಗೌತಮ್​ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಶ್ರೀ ಸಿದ್ಧಾರ್ಥ ನಿರ್ವಹಣಾ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ "ಎಲೈಸಿಯಾ ಬ್ಯುಸಿನೆಸ್​ ಎಕ್ಸ್​ಪೋ 2026' ಅನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಿನಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳ ಚುಕ್ಕಾಣಿಯನ್ನು ಹಿಡಿದಿರುವವರು ಎಂಬಿಎ ಓದಿರುವವರು. ಜಗತ್ತಿನಲ್ಲಿ ಇಂದು ಎಂಬಿಎಗೆ ಸಾಕಷ್ಟು ಬೆಲೆ ಇದೆ ಎಂದರು.
ಜಗತ್ತು ಹೊಸ ಹೊಸ ಉದ್ಯಮಗಳತ್ತ ಮುಖಮಾಡುತ್ತಿದೆ. ಈ ಸಂದರ್ಭದಲ್ಲಿ ಎಂಬಿಎ ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಹೆಚ್ಚಿಸಿಕೊಂಡು ಉತ್ತಮ ಕ್ರಿಯಾಶೀಲ ಚಿಂತನೆಯಿಂದ ಕಾರ್ಪೊರೇಟ್​ ಯುಗಕ್ಕೆ ಕಾಲಿಟ್ಟರೆ ಖಂಡಿತ ಯಶಸ್ವಿಯಾಗುವಿರಾ. ವಿದ್ಯಾರ್ಥಿಗಳು ನಿರಂತರ ಕಲಿಕೆಯಿಂದ ಮಾತ್ರ ಇಂದಿನ ಸ್ಪಧಾತ್ಮಕ ಜಗತ್ತಿನಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಎಫ್​ಕೆಆರ್​ಸಿಸಿಐ ಸಂಸ್ಥೆಯ ಕಾರ್ಯನಿವಾಹಕ ನಿರ್ದೇಶಕ ಭಾನುಪ್ರಕಾಶ್​ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಿಮಾರ್ಣವಾಗುತ್ತಿರುವ ಉದ್ಯಮಗಳನ್ನು ಪ್ರೋತ್ಸಾಹಿಸಬೇಕು ಹಾಗೂ ಸಣ್ಣ ಉದ್ದಿಮೆದಾರರನ್ನು ಪ್ರೋತ್ಸಾಹಿಸಬೇಕು. ಜಿಲ್ಲೆಯಲ್ಲಿ ಸಾಕಷ್ಟು ಉದ್ಯಮಗಳು ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿದೆ. ನೀವು ಕೂಡ ನಿಮ್ಮ ಉದ್ಯಮವನ್ನು ಇಲ್ಲೇ ಸ್ಥಾಪಿಸಿ ಜಗತ್ತಿಗೆ ತಲುಪಬಹುದು. ಇದಕ್ಕೆ ಬೇಕಾದ ಸಹಕಾರವನ್ನು ಸರ್ಕಾರ ಹಾಗೂ ವಿವಿಧ ಕಾರ್ಪೊರೇಟ್​ ಸಂಸ್ಥೆಗಳು ನೀಡುತ್ತವೆ ಎಂದರು.
ಎಸ್​ಎಸ್​ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಮಹಾಂತೇಶ್​ ಎಂ. ನಡಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಯಾವಾಗಲೂ ಉದ್ಯಮವನ್ನು ನಿರ್ಮಿಸುವ ಕಡೆಗೆ ಚಿಂತಿಸಿ. ಸರ್ಕಾರಗಳು ಹೊಸದಾಗಿ ಉದ್ಯಮವನ್ನು ಸ್ಥಾಪಿಸುವವರಿಗೆ ಪ್ರೋತ್ಸಾಹಧನವನ್ನು ನೀಡುತ್ತವೆ. ಅದನ್ನು ಸರಿಯಾಗಿ ಬಳಸಿಕೊಂಡು ಒಂದು ಸ್ವಂತ ಉದ್ಯಮವನ್ನು ನಿರ್ಮಿಸಿ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಎಸ್​ಎಸ್​ಐಎಂಎಸ್​ನ ಪ್ರಾಂಶುಪಾಲ ಅಜ್ಮತ್​ಉಲ್ಲಾ, ಸಹಾಯಕ ಪ್ರಾಧ್ಯಾಪಕಿ ಡಾ.ಪವಿತ್ರಾ, ಎಸ್​ಎಸ್​ಐಬಿಎಂನ ಪ್ರಾಚಾಯೆರ್ ಡಾ.ಮಮತಾ, ಸಹಾಯಕ ಆಡಳಿತಾಧಿಕಾರಿ ಖಲಂಧರ್​ ಪಾಷ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net