ಕನಸು ಸಾಕಾರಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ ಮುಖ್ಯ

 ತುಮಕೂರಿನ ಶ್ರೀ ಸಿದ್ಧಾರ್ಥ ವಾಣಿಜ್ಯ ನಿರ್ವಹಣಾ ಸಂಸ್ಥೆ ವತಿಯಿಂದ ಬಿಬಿಎಂ, ಬಿಸಿಎ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಪ್ರಮೋದ್​ ಎಲ್​. ಪಾಟೀಲ್​, ಡಾ. ಮಹಾಂತೇಶ ಎಂ. ನಡಕಟ್ಟಿ, ಡಾ. ಜಿ. ಮಮತ  ಮತ್ತಿತರರು ಇದ್ದರು.
ತುಮಕೂರಿನ ಶ್ರೀ ಸಿದ್ಧಾರ್ಥ ವಾಣಿಜ್ಯ ನಿರ್ವಹಣಾ ಸಂಸ್ಥೆ ವತಿಯಿಂದ ಬಿಬಿಎಂ, ಬಿಸಿಎ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಪ್ರಮೋದ್​ ಎಲ್​. ಪಾಟೀಲ್​, ಡಾ. ಮಹಾಂತೇಶ ಎಂ. ನಡಕಟ್ಟಿ, ಡಾ. ಜಿ. ಮಮತ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಿದ್ದಾರ್ಥ ವಾಣಿಜ್ಯ ನಿರ್ವಹಣಾ ಸಂಸ್ಥೆ
  • ಬಿಬಿಎಂ, ಬಿಸಿಎ ಸ್ವಾಗತ ಸಮಾರಂಭ
  • ವಿದ್ಯಾರ್ಥಿಗಳ ಕೈಯಲ್ಲಿ ಭವಿಷ್ಯ
ತುಮಕೂರು:

ಭವಿಷ್ಯದ ಕನಸನ್ನು ನನಸಾಗಿಸಿಕೊಳ್ಳಲು ಪದವಿ ವಿದ್ಯಾರ್ಥಿಗಳು ಇಂದಿನಿಂದಲೇ ಕಠಿಣ ಪರಿಶ್ರಮ, ಶ್ರದ್ಧೆಯಿಂದ ಓದಬೇಕು ಎಂದು ಕರ್ನಾಟಕ ಇನೊವೇಷನ್​ ಆ್ಯಂಡ್​ ಟೆಕ್ನಾಲಜಿ ಸೊಸೈಟಿ ವ್ಯವಸ್ಥಾಪಕ ಪ್ರಮೋದ್​ ಎಲ್​. ಪಾಟೀಲ್​ ಹೇಳಿದರು.

ನಗರದ ಶ್ರೀ ಸಿದ್ಧಾರ್ಥ ವಾಣಿಜ್ಯ ನಿರ್ವಹಣಾ ಸಂಸ್ಥೆ(ಎಸ್​ಎಸ್​ಐಬಿಎಮ್​) ವತಿಯಿಂದ 2026-&27ನೇ ಸಾಲಿನ ಬಿಬಿಎಂ ಹಾಗೂ ಬಿಸಿಎ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪದವಿ ಹಂತ ವಿದ್ಯಾರ್ಥಿಗಳ ಜೀವನದ ಪ್ರಮುಖ ಟ್ಟ. ಕಲಿಕೆಯ ಅಂತಿಮ ಹಂತ, ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಇರುವ ಸುವರ್ಣ ಅವಕಾಶ. ಹಾಗಾಗಿ, ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಭವಿಷ್ಯವನ್ನು ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿ ಇರುತ್ತೆ. ಅದಕ್ಕೆ ಯೋಜನೆ ಸಿದ್ಧಪಡಿಸಿಕೊಳ್ಳಿ. ಭವಿಷ್ಯದಲ್ಲಿ ಸಾಧಿಸಲು ಈ ಪದವಿ ಅಧ್ಯಯನದ ಸಮಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಓದಿನ ಜತೆಗೆ ಕೌಶಲವನ್ನು ರೂಢಿಸಿಕೊಂಡಿದ್ದೇ ಆದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ ಎಂದು ಸಲಹೆನೀಡಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಂತೇಶ ಎಂ. ನಡಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣುತ್ತಾ ಗುರಿಯನ್ನು ಈಗಲೇ ನಿಶ್ಚಯಿಸಿಕೊಳ್ಳಬೇಕು. ಪದವಿ ವ್ಯಾಸಂಗಕ್ಕಾಗಿ ಸರಿಯಾದ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಂಡಿದ್ದೀರಿ. ಇಲ್ಲಿ ಸವಲತ್ತುಗಳ ಜತೆಗೆ ಉತ್ತಮ ಬೋಧನೆಯೂ ಮತ್ತು ಅವಕಾಶಗಳೂ ಸಿಗಲಿವೆ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ತಂದೆ ತಾಯಿ ಮತ್ತು ಶಿಕ್ಷಕರ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಸಜ್ಜಾಗಿ ಎಂದರು.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಕೌಶಲಗಳನ್ನು ಬೆಳೆಸಿಕೊಂಡು ಉನ್ನತ ಹಂತವನ್ನು ತಲುಪಬೇಕು. ತಮಗೆಲ್ಲರಿಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ಸ್ವಾಗತ ಎಂದು ಬಿಬಿಎಂ ಪ್ರಾಂಶುಪಾಲೆ ಡಾ. ಜಿ. ಮಮತ ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನ ರ್ಯಾಂಕ್​ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬಿಸಿಎ ವಿದ್ಯಾರ್ಥಿನಿ ಸುಹಾಶ್ರೀ ಪ್ರಾರ್ಥಿಸಿದರು. ಗ್ರೇಟ್​ ಆಲ್ಮ ಅಲೆಕ್ಸ್​ ಸ್ವಾಗತಿಸಿ, ಯಶಸ್ವಿನಿ ವಂದಿಸಿದರು. ಹರ್ಷಿತ ಮತ್ತು ನಿಹಾರಿಕ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net