ಜಿಲ್ಲಾಡಳಿತ, ಜಿಲ್ಲಾ ಭೋವಿ ಸಮಾಜದ ವತಿಯಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಪಾಪ, ಪುಣ್ಯಗಳ ಅರಿವು ಇರಬೇಕು ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ಸಾರಿದ ಮಹಾನ್ ಚೇತನ ಶ್ರೀಸಿದ್ದರಾಮೇಶ್ವರರು. ಕಾಯಕವೇ ಕೈಲಾಸ ಎಂಬ ತತ್ವ ನಂಬಿ, ಶ್ರಮ, ನಿಷ್ಠೆ ಮತ್ತು ನೀತಿಯ ಮೂಲಕ ಸೊಲ್ಲಾಪುರವನ್ನು ಕೈಲಾಸದಂತೆ ರೂಪಿಸಿ ತೋರಿಸಿದವರು ಎಂದು ಸ್ಮರಿಸಿದರು.