ಎಸ್ಐಆರ್ ಪರಿಷ್ಕರಣೆ ಕ್ರಮಬದ್ಧವಾಗಿ ಮಾಡದೇ ಇರುವುದರಿಂದ ತಕ್ಷಣವೇ ಹಾಲಿ ಬಿಎಲ್ಒಗಳನ್ನು ಜಿಲ್ಲಾಧಿಕಾರಿಗಳು ಬೇರೆ ತಾಲೂಕಿಗೆ ವರ್ಗಾವಣೆ ಮಾಡಿ, ನಮ್ಮ ತಾಲೂಕಿಗೆ ಬೇರೆ ಕಡೆಯಿಂದ ಬಿಎಲ್ಒಗಳನ್ನು ನೇಮಿಸಬೇಕು. ಚುನಾವಣಾ ಆಯೋಗ, ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡುತ್ತೇವೆ. ಸಂಬಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳದಿದ್ದರೆ, ಜನತಾದಳ ಕಾನೂನು ಘಟಕದ ಮೂಲಕ ಉಗ್ರ ಹೋರಾಟ ಮಾಡಲಾಗುವುದು.