ವಿದ್ಯಾರ್ಥಿಗಳಿಗೆ ವಿಶೇಷ ಉಚಿತ ಶಿಬಿರ

Special free camp for students
Special free camp for students
Published on
ಚಿಕ್ಕನಾಯಕಹಳ್ಳಿ: ತಾಲೂಕು ವ್ಯಾಪ್ತಿಯಲ್ಲಿರುವ ವಿಜ್ಞಾನ ವಿಭಾಗ ಮಕ್ಕಳಿಗೆ ಉಚಿತ ಸಿಇಟಿ, ನೀಟ್​ ಹಾಗೂ ಜೆಇಇ ತರಬೇತಿ ಹಮ್ಮಿಕೊಳ್ಳಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್​ ಬಾಬು ತಿಳಿಸಿದರು.\
ನಗರದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ತರಬೇತಿ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿ ಮಾತನಾಡಿ, ಗ್ರಾಮೀಣ ಭಾಗದ ನಮ್ಮ ತಾಲೂಕಿನ ಮಕ್ಕಳಿಗೆ ಶೈಕ್ಷಣಿಕ ವರ್ಷದ 30 ಭಾನುವಾರಗಳು ಪ್ರಥಮ ಹಾಗೂ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಎಸ್​ಬಿ ಚಾರಿಟೇಬಲ್​ ಟ್ರಸ್ಟ್​ ಜ್ಞಾನಕಲ್ಪದಿಂದ ತರಬೇತಿ ಏರ್ಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ 350 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯ, ಸಲಕರಣೆ ನೀಡಲಾಯಿತು. ಈ ತರಬೇತಿ ಧರ್ಮ, ಪಕ್ಷ, ಜಾತಿಯಿಂದ ಹೊರತಾಗಿದ್ದು, ಮಕ್ಕಳ ಭವಿಷ್ಯ ಉಜ್ವಲಗೊಳಿಸಿದೆ. ಮಕ್ಕಳು ಈ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಪಾಲಕರಿಗೆ ಹೊರೆಯಾಗದಂತೆ ಅಧ್ಯಯನ ಮಾಡಿ ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.
ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್​.ರವಿಕುಮಾರ್​, ಸಿಇಟಿ ತರಬೇತಿದಾರರು ಪ್ರಾದ್ಯಾಪಕಿ ದಿವ್ಯಾಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net