ಜುಲೈ ಬಿತ್ತನೆಗೆ ಉತ್ತಮ ಮಳೆಯಾದರೆ: ರಾಗಿ ಬೆಳೆಯಲ್ಲಿ ಜಿಪಿಯು 28, ಜಿಪಿಯು 66. ಜಿಪಿಯು 67, ಜಿಪಿಯು 26, ಜಿಪಿಯು 45, ಜಿಪಿಯು 48, ಎಂಎಲ್ 365, ಎಂಆರ್ 1, ಎಂಆರ್ 6, ಇಂಡಾಫ್ 7 ಮತ್ತು ಇಂಡಾಫ್ 9 ತಳಿ ಬಿತ್ತನೆಗೆ ಉಪಯೋಗಿಸಬೇಕಿದೆ. ಬಿತ್ತನೆಯ ಸಮಯದಲ್ಲಿ ಅವಶ್ಯಕತೆಗಿಂತ ಶೇ.15 ರಿಂದ ಶೇಕಡ 20ರಷ್ಟು ಹೆಚ್ಚಿನ ಬೀಜದ ಪ್ರಮಾಣ ಬಳಸುವುದು. ಬೀಜಗಳನ್ನು 18 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ 24 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡುವುದು.