20 ರಂದು ರೈಲು ಸಂಚಾರ ಮಾರ್ಗ ಬದಲಾವಣೆ

ವಿಶ್ವಮಾನವ ಎಕ್ಸ್​ಪ್ರೆಸ್​ ರೈಲು
ವಿಶ್ವಮಾನವ ಎಕ್ಸ್​ಪ್ರೆಸ್​ ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಹಿರೇಹಳ್ಳಿ ನಿಲ್ದಾಣದಲ್ಲಿ ಸಿಗ್ನಲಿಂಗ್​ ಕಾಮಗಾರಿ
  • ಶಿವಮೊಗ್ಗ ಸೂಪರ್​ ಫಾಸ್ಟ್​ ಎಕ್ಸ್​ಪ್ರೆಸ್​ ರೈಲು
  • ವಿಶ್ವಮಾನವ ಎಕ್ಸ್​ಪ್ರೆಸ್​ ರೈಲು ಮಾರ್ಗ ಬದಲು
ತುಮಕೂರು: ಹಿರೇಹಳ್ಳಿ ನಿಲ್ದಾಣದಲ್ಲಿ ಸುರಕ್ಷತಾ ಮತ್ತು ಸಿಗ್ನಲಿಂಗ್​ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಮೇ 20 ರಂದು ಕೆಲ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬಲಾವಣೆ ಮಾಡಲಾಗಿದೆ.
ಯವಂತಪುರ-ಶಿವಮೊಗ್ಗ ನಡುವಿನ ದೈನಂದಿನ ಸೂಪರ್​ ಫಾಸ್ಟ್​ ಎಕ್ಸ್​ಪ್ರೆಸ್​ ರೈಲು ಯವಂತಪುರ, ಚಿಕ್ಕಬಾಣವಾರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಹಾಗಾಗಿ ಈ ರೈಲು ತುಮಕೂರು ಮತ್ತು ತಿಪಟೂರು ಮಾರ್ಗದಲ್ಲಿ ಚಲಿಸುವುದಿಲ್ಲ.
ಮೈಸೂರು-ಬೆಳಗಾವಿ ವಿಶ್ವಮಾನವ ಸೂಪರ್​ ಫಾಸ್ಟ್​ ಎಕ್ಸ್​ಪ್ರೆಸ್​ ರೈಲು ಮಾರ್ಗ ಬದಲಿಸಲಾಗಿದೆ. ಮೈಸೂರು-ಬೆಂಗಳೂರು-ತುಮಕೂರು ಮಾರ್ಗದ ಬದಲು ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ.
ರೈಲು ಸಂಚಾರ ಭಾಗಶಃ ರದ್ದು: ಬೆಂಗಳೂರು-ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ರೈಲು ದೊಡ್ಡಬೆಲೆಯಲ್ಲಿ ಕೊನೆಗೊಳ್ಳಲಿದೆ. ತುಮಕೂರು-ಬೆಂಗಳೂರು ಮೆಮು ರೈಲು ನಡುವೆ ಭಾಗಶಃ ರದ್ದಾಗಲಿದೆ. ದೊಡ್ಡಬೆಲೆ ನಿಲ್ದಾಣದಿಂದ ನಿಗದಿತ ಸಮಯಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ.
ರೈಲುಗಳ ವಿಳಂಬ: ಮೇ 19 ರಂದು ವೇಲಕಣಿಯಿಂದ ಹೊರಡುವ ವೇಲಕಣಿ0ವಾಸ್ಕೊ ಡ ಗಾಮ ಸಾಪ್ತಾಹಿಕ ಎಕ್ಸ್​ಪ್ರೆಸ್​ ರೈಲು ಮಾರ್ಗಮಧ್ಯೆ 60 ನಿವಿಷಗಳ ಕಾಲ ಸಂಚಾರದಲ್ಲಿ ವಿಳಂಬವಾಗಲಿದೆ. 20 ರಂದು ತಮಕೂರು ಮೂಲಕ ಹೋಗುವ ಬೆಂಗಳೂರು&ಧಾರವಾಡ ಸಿದ್ದಗಂಗಾ ದೈನಂದಿನ ಸೂಪರ್​ ಪಾಸ್ಟ್​ ಎಕ್ಸ್​ ಪ್ರೆಸ್​ ಹಾಗೂ ಯವಂತಪುರ-ಹಜರತ್​ ನಿಜಾಮುದ್ದೀನ ಸೂಪರ್​ ಫಾಸ್ಟ್​ ಎಕ್ಸ್​ಪ್ರೆಸ್​ ರೈಲುಗಳು ಮಾರ್ಗ ತಲಾ 30 ನಿವಿಷಗಳ ವಿಳಂಬವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net