ಕಾರಿನಲ್ಲಿ ಸ್ಫೋಟಗೊಂಡಿದ್ದ ಕಚ್ಚಾ ಬಾಂಬ್​ ಮೂಲ ಪತ್ತೆ

ಸ್ಫೋಟದಿಂದ ನಾಗೇಂದ್ರ ಸಹಿತ ಸುಟ್ಟು ಕರಕಲಾಗಿದ್ದ ಕಾರು
ಸ್ಫೋಟದಿಂದ ನಾಗೇಂದ್ರ ಸಹಿತ ಸುಟ್ಟು ಕರಕಲಾಗಿದ್ದ ಕಾರು
Published on

ಪ್ರಮುಖ ಮುಖ್ಯಾಂಶಗಳು

  • ಮೃತ ಆರೋಪಿ ನಾಗೇಂದ್ರ ಬಳಸಿದ್ದ ಸ್ಫೋಟಕ
  • ಪ್ರೀತಿಸುವಂತೆ ಒತ್ತಾಯಿಸಿ ಯುವತಿ ಅಪಹರಿಸಿದ್ದ ನಾಗೇಂದ್ರ
  • ಕಾರಿನಲ್ಲಿ ಸ್ಫೋಟಿಸಿಕೊಂಡು ಸುಟ್ಟು ಕರಕಲಾಗಿದ್ದ ಆರೋಪಿ
ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರಿನಲ್ಲಿ ಕಚ್ಚಾ ಬಾಂಬ್​ ಸ್ಫೋಟಿಸಿಕೊಂಡು ಮೃತರಾದ ನಾಗೇಂದ್ರ ಬಳಸಿದ್ದ ಕಚ್ಚಾ ಬಾಂಬ್​ ಮೂಲವನ್ನು ಕಳ್ಳಂಬೆಳ್ಳ ಪೊಲೀಸರು ಪತ್ತೆ ಮಾಡಿದ್ದಾರೆ.
ಮೃತ ಆರೋಪಿ ನಾಗೇಂದ್ರನ ಸ್ವಂತ ಊರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕು ಹೆಬ್ಬೂಲ್​ ರಾಜಾನಗುಳಿ ಗ್ರಾಮದಲ್ಲಿರುವ ಮನೆಯನ್ನು ಮತ್ತು ಸಂತ್ರಸ್ತೆ ರಮ್ಯಾ ಸ್ವಂತ ಗ್ರಾಮವಾದ ಅಗಸೂರು ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ನಾಗೇಂದ್ರ ಬೆಂಗಳೂರಿನಲ್ಲಿ ವಾಸವಾಗಿದ್ದ ಪಿ.ಜಿ.ಸೆಂಟರ್​ ಬಳಿ ಮತ್ತು ಪಿರ್ಯಾದಿ ವಾಸವಾಗಿದ್ದ ಸಿದ್ದಾಪುರ ಸ್ಥಳಗಳಲ್ಲಿ ಆರೋಪಿ ನಾಗೇಂದ್ರ ಓಡಾಡಿದ್ದ ಮಾಹಿತಿ ಸಂಗ್ರಹಿಸಿ, ಸ್ಥಳಿಯ ಬಾತ್ಮೀದಾರರಿಂದ ಮತ್ತು ವೈಜ್ಞಾನಿಕ ವಿಧಾನದಿಂದ ತನಿಖೆ ಕೈಗೊಳ್ಳಲಾಗಿದೆ.
ಆರೋಪಿ ನಾಗೇಂದ್ರ ಹೊನ್ನಾವರ ತಾಲೂಕು ಚಂದಾವರ ಗ್ರಾಮದ ಜಾರ್ಜ್​ ನಿಕ್ಲೋವ್​ ಫರ್ನಾಂಡೀಸ್​(64) ಎಂಬುವನ ಬಳಿ ಕಚ್ಚಾ ಬಾಂಬ್​ ಖರೀದಿಸಿರುವುದನ್ನು ಪತ್ತೆ ಮಾಡಲಾಗಿದೆ.
ಜಾರ್ಜ್​ ನಿಕ್ಲೋವ್​ ಫರ್ನಾಂಡೀಸ್​ ಆರೋಪಿ ನಾಗೇಂದ್ರನಿಗೆ ಅಲ್ಲದೇ ಸ್ಥಳಿಯವಾಗಿ ಸಂದೀಪ್​ಗೌಡ , ನಾರಾಯಣ ಡೊಲ್ಲುಗೌಡ ಮತ್ತು ನಾಗರಾಜು ಡೊಲ್ಲುಗೌಡ ರವರುಗಳಿಗೂ ಸಹ ಕಚ್ಛಾ ಬಾಂಬ್​ಗಳನ್ನು ಕೊಟ್ಟಿರುವುದು ತನಿಖೆಯಿಂದ ಪತ್ತೆಯಾಗಿದೆ, ಈ ಸಂಬಂಧ ಅಂಕೋಲಾ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಆರೋಪಿ ಜಾರ್ಜ ನಿಕ್ಲೋವ್​ ಫರ್ನಾಂಡೀಸ್​ ರವರನ್ನು ವಿಚಾರಣೆ ಮಾಡುವ ಸಮಯದಲ್ಲಿ ಅವರಿಗೆ ಅನಾರೋಗ್ಯ ಉಂಟಾಗಿದ್ದರಿಂದ ಅವರನ್ನು ಅಂಕೋಲಾ ಪೊಲೀಸರು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಾರಾವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿ ಜಾರ್ಜ ನಿಕ್ಲೋವ್​ ಫರ್ನಾಂಡೀಸ್​ ಸ್ಥಳಿಯವಾಗಿ ಮೀನುಗಾರಿಕೆ ಉದ್ದೇಶಕ್ಕಾಗಿ ಕಚ್ಛಾ ಬಾಂಬ್​ ತಯಾರು ಮಾಡಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು ಈತನು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಹೆಚ್ಚಿನ ತನಿಖೆ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net