ಮಧುಗಿರಿ: ರಾಜ್ಯದ ಸಂಸದರು ಹಿಂದಿ ಭಾಷೆ ಅರ್ಥ ಮಾಡಿಕೊಂಡಿದ್ದರೆ ಇದುವರೆಗೂ ಕರ್ನಾಟಕ ಅಭಿವದ್ಧಿಯಲ್ಲಿ ನಂ.1 ಆಗಿರುತ್ತಿತ್ತು. ದೇಶದಲ್ಲಿ ಹಿಂದಿ ಸಾಮಾನ್ಯ ಭಾಷೆಯಾಗಿದ್ದು ಸಂವಹನದಿಂದ ಅಭಿವೃದ್ಧಿಗೆ ನೆರವಾಗಲಿದೆ ಆದರೆ, ಹಿಂದಿ ಕಲಿಯದೆ ಕರ್ನಾಟಕ ಹಾಗೂ ತಮಿಳುನಾಡು ಅಭಿವದ್ದಿಯಲ್ಲಿ ಹಿಂದೆ ಉಳಿದಿವೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚುವಲ್ ಇಂಡಿಯಾ ಖೇಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಈ ಹಿಂದೆ 3 ಕೋಟಿ ಜನರು ಮಾತ್ರ ಶುದ್ಧ ನೀರು ಕುಡಿಯುತ್ತಿದ್ದರು ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ 15 ಕೋಟಿ ಕುಟುಂಬಗಳು ಶುದ್ಧ ನೀಡು ಕುಡಿಯುತ್ತಿವೆ ಎಂದರು.
ತಾಲೂಕಿನ 35 ಗ್ರಾಮಗಳಲ್ಲಿ ಕುಡಿಯಲು ಬಳಸುತ್ತಿರುವ ನೀರಿನಲ್ಲಿ ವಿಷಕಾರಿ ಪ್ಲೋರೆಡ್ ಇರುವುದು ದೃಢವಾಗಿದ್ದು ಸಂಸತ್ ಸದಸ್ಯರ ಅನುದಾನದಲ್ಲಿ 9 ಶುದ್ಧನಿರಿನ ಟಕ ನೀಡುತ್ತೇನೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಜೆಜೆಎಂ ಕಾಮಗಾರಿಗಳಿಗೆ ಈಗಾಗಲೇ ಕೇಂದ್ರ ಪಾಲು 28 ಸಾವಿರ ಕೋಟಿ ರೂ. ನೀಡಿದ್ದೇವೆ. ಆದರೆ, ಕೊಟ್ಟ ಹಣ ಬಳಸಿಕೊಂಡು ಕೆಲಸ ಪೂರ್ಣಗೊಂಡ ಪ್ರಮಾಣ ಪತ್ರ ನೀಡಿದರರೆ ಉಳಿದ ಅನುದಾನ ನೀಡಲು ಸಾಧ್ಯ, ಆದರೆ ರಾಜ್ಯ ಸರ್ಕಾರ ಕೆಲಸ ಪೂರ್ಣಗೊಳಿಸದೆ ಸುಖಾಸುಮ್ಮನೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ದೂರಿದರು.
ಶಿರಾ&ಮಧುಗಿರಿ ಗೌರಿಬಿದನೂರು ಸೇರುವ 52 ಕಿಮೀ ಮಾರ್ಗದಲ್ಲಿ 4 ಪಥದ ರಸ್ತೆಗೆ ಅನುದಾನ ಬಿಡುಗಡೆಯಾಗಿದೆ. ಶಿರಾ&ಬಡವನಹಳ್ಳಿಯ 20 ಕಿಮೀ ರಸ್ತೆಗೆ 588 ಕೋಟಿ ರೂ. ಅನುದಾನ ಬಂದಿದೆ. ತುಮಕೂರು ರಾಯದುರ್ಗ ರೆಲ್ವೆ ಯೋಜನೆ ಹಾಗೂ ಬಡವನಹಳ್ಳಿ&ಭೆರೇನಹಳ್ಳಿಯ ರಸ್ತೆ ಮುಂದಿನ 2 ವರ್ಷದಲ್ಲಿ ಪೂರ್ಣಗೊಳಿಸಲಿವೆ ಎಂದು ಭರವಸೆ ನೀಡಿದರು.
ಮಧುಗಿರಿ ಕೆಗಾರಿಕಾ ಪ್ರದೇಶಕ್ಕಾಗಿ ಭೂ ಸ್ವಾಧಿನ ಮಾಡಿಕೊಂಡಿದ್ದು ಸರ್ಕಾರ ಕಡಿಮೆ ಹಣ ನೀಡಲು ಮುಂದಾಗಿದೆ. ಆದರೆ, ಬೆಲೆಯನ್ನು 17 ಲದಿಂದ 22 ಲಕ್ಕೆ ಏರಿಸಿದರೆ ರೆತರು ಭೂಮಿ ನೀಡಬಹುದು ಎಂದರು.
ದೇಶದಲ್ಲಿ ನದಿ ಜೋಡಣೆಯಂತಹ ಮಹತ್ವದ ಕಾರ್ಯಕ್ಕೆ ಮುನ್ನುಡಿ ಬರೆದಿದ್ದು ವಾಜಪೇಯಿಯವರು. ಆದರೆ, ಇದನ್ನು ಮಾಡಲು ಮೋದಿಯವರೇ ಬರಬೇಕಾಯಿತು. ಕಸಿತ ಭಾರತದತ್ತ ನಮ್ಮ ದೇಶ ದಾಪುಗಾಲು ಇಡುತಿದ್ದು ದೇಶ ಸ್ವ್ವಾವಲಂಬಿಯಾಗಿ ಸಧಡವಾಗಿ ನಿಂತಿದೆ. ಪ್ರಪಂಚದಲ್ಲಿ ಆರ್ಥಿಕವಾಗಿ 5 ನೇ ಸ್ಥಾನದಲ್ಲಿದ್ದು ಮುಂದೆ 2ನೇ ಸ್ಥಾನಕ್ಕೆ ಬರಲಿದೆ ಎಂದರು.
ಮೋದಿಯವರು ನನಗೆ ಎರಡು ಖಾತೆಗಳನ್ನು ನೀಡಿ ಕೆಲಸ ಮಾಡು ಎಂದು ಬಿಟ್ಟಿದ್ದಾರೆ. ದೇಶದಲ್ಲಿ ಗ್ರಾಮೀಣ ಭಾಗದ ಮಕ್ಕಳು ಸೇರಿ 1.78 ಕೋಟಿ ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು ಖೇಲ್ ಇಂಡಿಯಾದಲ್ಲಿ ನೋಂದಣಿ ಮಾಡಿಸಿದ್ದಾರೆ. ಭವ್ಯ ಭಾರತದ ಭವಿಷ್ಯಕ್ಕೆ ಯುವಶಕ್ತಿಯ ಅವಶ್ಯಕತೆಯನ್ನು ಮೋದಿ ಅರಿತಿದ್ದು ಈ ಕಾರ್ಯಕ್ರಮವನ್ನು ವಿಶ್ವದ ದೊಡ್ಡ ರಾಷ್ಟ್ರಗಳು ಒಪ್ಪಿಕೊಂಡಿದೆ ಎಂದರು.