ವಿಷಯ ತಿಳಿಯುತ್ತಿದ್ದಂತೆ, ಪುರಸಭಾ ಸದಸ್ಯ ಮಲ್ಲಿಕಾರ್ಜುನ್ ಹಾಗೂ ಕರ್ನಾಟಕ ಆಂಬುಲೆನ್ಸ್ ಡ್ರೈವರ್ ಸಂಘದ ಸದಸ್ಯ ದೀಲೀಪ್, ತೋಯಿಬ್, ಅಪ್ಸರ್, ರೇಣುಕಾ ಮತ್ತು ಇತರೆ ಗೆಳೆಯರು ಕೂಡಲೇ ಕಾರ್ಯಪ್ರವೃತ್ತರಾದರು. ಯಾವುದೇ ಜಾತಿ-ಧರ್ಮ, ಲಾಭ-ನಷ್ಟದ ಹಂಗಿಲ್ಲದೆ, ಮೃತ ಮಹಿಳೆಯ ಅಂತಿಮ ವಿಧಿವಿಧಾನಗಳನ್ನು ಭಕ್ತಿಯಿಂದ ನೆರವೇರಿಸುವ ಜವಾಬ್ದಾರಿ ಹೊತ್ತುಕೊಂಡರು.